ಕಾರು ಕಳವು: ಅಂತರ್ ಜಿಲ್ಲಾ ಕಳ್ಳರ ಬಂಧನ
Team Udayavani, Apr 9, 2023, 8:57 PM IST
ಯಲ್ಲಾಪುರ: ರಾತ್ರಿ ವೇಳೆ ಮನೆಯ ಎದುರು ನಿಲ್ಲಿಸಿದ್ದ ಕಾರನ್ನು ಕಳವು ಮಾಡಿದ ಅಂತರ ಜಿಲ್ಲಾ ಕಳ್ಳರನ್ನು ಯಲ್ಲಾಪುರದ ಪೋಲಿಸರು ಬಂಧಿಸಿದ್ದಾರೆ.
ಮಹಮ್ಮದ್ ಸಾಹಿಲ್ ಶೇಖ್ ಮಹಮ್ಮದ್ ಅತ್ತಾವರ ಮಂಗಳೂರು,ಮಹಮ್ಮದ್ ಮುಸ್ತಾಫ ಅಬ್ದುಲ್ ಹಮೀದ್ ಸುರತ್ಕಲ್ ಮಂಗಳೂರು,ಮಹಮ್ಮದ್ ಅಬ್ದುಲ್ ಹಮೀದ್ ಸುರತ್ಕಲ್ ಮಂಗಳೂರು ಇವರು ಬಂಧಿತರಾಗಿದ್ದಾರೆ.
ಇವರು ಪಟ್ಟಣದ ಶಾರದಾಗಲ್ಲಿಯ ಮೊಹಮ್ಮದ್ ಹುಸೇನ್ ಶಂಶುದ್ದಿನ್ ಶೇಖ್ ಇವರು ಮನೆಯ ಮುಂದೆ ನಿಲ್ಲಿಸಿಟ್ಟ ಕಾರನ್ನು ಏಪ್ರಿಲ್ ೨ ರಂದು ರಾತ್ರಿ ಅಪಹರಿಸಿದ್ದರು.ಇವರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಅಪಹರಿಸಿದ ಇನ್ನೊವಾ ಕಾರು,ಕೃತ್ಯಕ್ಕೆ ಬಳಸಿದ ಪಾರ್ಚೂನರ್ ಕಾರು ಒಟ್ಟು ೧೨,೫೦,೦೦೦ ರೂ ಸ್ವತ್ತನ್ನು ಜಪ್ತಿ ಮಾಡಿ,ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಸ್ಪಿ ವಿಷ್ಣುವರ್ಧನ,ಹೆಚ್ಚುವರಿ ಎಸ್ಪಿ ಜಯಕುಮಾರ,ಡಿವೈಎಸ್ಪಿ ಗಣೇಶ ಕೆ.ಎಲ್ ಮಾರ್ಗದರ್ಶನ ದಲ್ಲಿ ಸಿಪಿಐ ರಂಗನಾಥ,ಪಿಎಸೈಗಳಾದ ರವಿಗುಡ್ಡಿ,ಮಂಜುನಾಥ ಪಾಟೀಲ್,ಲತಾ ಕೆ.ಎನ್,ಸಿಬ್ಬಂದಿ ಬಸವರಾಜ ಹಗರಿ,ಮಹಮ್ಮದ್ ಶಫಿ, ಗಜಾನನ ನಾಯ್ಕ,ಗಿರೀಶ ಲಮಾಣಿ, ಪರಶುರಾಮ ಕಾಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.