ಗೋಡಂಬಿ ಕಾರ್ಖಾನೆ ಕಾರ್ಮಿಕರ ಧರಣಿ
Team Udayavani, Sep 10, 2019, 12:55 PM IST
ಕುಮಟಾ: ರಿಲೇಬಲ್ ಕ್ಯಾಶ್ಯೂ ಕಂಪನಿ ಕಾರ್ಮಿಕರು ಫ್ಯಾಕ್ಷರಿಯ ಎದುರು ಪ್ರತಿಭಟನೆ ನಡೆಸಿದರು.
ಕುಮಟಾ: ಧಾರೇಶ್ವರದಲ್ಲಿರುವ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರಿಯನ್ನು ಏಕಾಏಕಿ ಮುಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ನೂರಾರು ಕಾರ್ಮಿಕರು ಫ್ಯಾಕ್ಟರಿ ಎದುರು ಪ್ರತಿಭಟನೆ ನಡೆಸಿದರು.
ಈ ಇಂಡಸ್ಟ್ರಿಯಲ್ಲಿ ಸುಮಾರು 750 ಕ್ಕೂ ಅಧಿಕ ಕಾರ್ಮಿಕರು ದುಡಿಯುತ್ತಿದ್ದು, 24 ಗಂಟೆಯೂ ಇಲ್ಲಿ ಕೆಲಸ ನಡೆಯುತ್ತಿದೆ. 8 ಗಂಟೆಗಳ ಕಾಲಾವಧಿಯ ಪ್ರಕಾರ ದಿನದಲ್ಲಿ 3 ಪಾಳಿಗಳಲ್ಲಿ ದುಡಿಯುತ್ತಿದ್ದಾರೆ. ಈ ಭಾಗದ ಸುತ್ತಮುತ್ತಲಿನ ನೂರಾರು ಜನರು ಈ ಕಂಪನಿಯಿಂದಲೇ ಬದುಕುತ್ತಿದ್ದಾರೆ. ಏಕಾಏಕಿ ಕಂಪನಿ ಮುಚ್ಚಿರುವುದರಿಂದ ಕಾರ್ಮಿಕರು ಕಂಗಾಲಾಗಿದ್ದಾರೆ.
ಕೆಲ ದಿನಗಳಿಂದ ಆಡಳಿತ ಮಂಡಳಿಯವರು ದಿನದಲ್ಲಿ 2 ಪಾಳಿಯನ್ನು ನಡೆಸಲು ಚಿಂತನೆ ನಡೆಸಿದ್ದಾರೆ. ಅದಲ್ಲದೇ ದಿನದ ಸಂಬಳವನ್ನು ನೀಡದೇ, ಕೆ.ಜಿ ಲೆಕ್ಕದಲ್ಲಿ ಸಂಬಳವನ್ನು ನೀಡುವ ಬಗೆಗೆ ನೋಟಿಸ್ ಫಲಕದಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಒಳ್ಳೆಯ ಗೇರುಬೀಜಗಳನ್ನು ಯಂತ್ರ ಸುಲಿಯುತ್ತದೆ. ಆದರೆ ಯಂತ್ರದಿಂದಾಗದ ಬೀಜವನ್ನು ಕಾರ್ಮಿಕರೇ ಸುಲಿಯಬೇಕಾಗುತ್ತದೆ. ಒಳ್ಳೆಯ ಬೀಜಗಳನ್ನು ಕಾರ್ಮಿಕರ ಕೈಗೆ ನೀಡಿದ್ದಲ್ಲಿ ಕಂಪನಿ ನಿಗದಿಪಡಿಸಿದಷ್ಟು ಬೀಜವನ್ನು ಕಾರ್ಮಿಕರು ಸುಲಿಯಲು ಸಾಧ್ಯವಿದೆ. ಆದರೆ ಕೆಟ್ಟ ಬೀಜವನ್ನು ಕಾರ್ಮಿಕರ ಕೈಗೆ ನೀಡಿದಾಗ ಕಂಪನಿ ನಿಗದಿಪಡಿಸಿದಷ್ಟು ಬೀಜವನ್ನು ಸುಲಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರ್ಮಿಕರಿಗೆ ಸಿಗುವ ಸಂಬಳ ಕಡಿಮೆಯಾಗುತ್ತಿದೆ ಎಂಬುದು ಕಾರ್ಮಿಕರ ಅಳಲಾಗಿದೆ.
ನಂತರ ಮಾಧ್ಯಮದವರೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಶ್ಯೂ ಇಂಡಸ್ಟ್ರಿ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ತಿಲಕ ಗೌಡ ಮಾತನಾಡಿ, ಆಡಳಿತ ವರ್ಗವು ತುಂಡು ಮೌಲ್ಯದ ಕೆಲಸ ಮತ್ತು 3 ಪಾಳಿಯ ಬದಲು 2 ಪಾಳಿ ಮಾಡಬೇಕೆಂದು ನೋಟಿಸ್ ಬೋರ್ಡಿಗೆ ಹಾಕಿರುವುದು ಸರಿಯಲ್ಲ. ಈ ವಿಷಯವು ಸಂಘದ ಗಮನಕ್ಕೆ ಬಂದ ತಕ್ಷಣ ಸಂಘದ ಮುಖಂಡರು ಆಡಳಿತ ವರ್ಗವನ್ನು ಸಂಪರ್ಕಿಸಿ, ವಿಷಯದ ಕುರಿತು ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಕೇಳಿಕೊಂಡರೂ, ಆಡಳಿತ ವರ್ಗ ಸ್ಪಂದಿಸುತ್ತಿಲ್ಲ. ಕಂಪನಿ ಮುಚ್ಚುವುದು ಸರಿಯಲ್ಲ. ಸಾಕಷ್ಟು ಜನರು ಇಲ್ಲಿನ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರು ಕೊಡುತ್ತಿರುವ ಸಂಬಳಕ್ಕೆ ದುಡಿಯಲು ಸಾಧ್ಯವಿಲ್ಲ. ಸರಕಾರದ ನಿಯಮದ ಪ್ರಕಾರ ಇಲ್ಲಿಯ ಕಾರ್ಮಿಕರು ಸಂಘವನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಆಡಳಿತ ಮಂಡಳಿಯು ಸಂಘದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಿರಬೇಕಾಗುತ್ತದೆ. ಸರಕಾರದ ನಿಯಮದ ಪ್ರಕಾರ ಕನಿಷ್ಠ ಕೂಲಿಯಾದರೂ ನೀಡಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.