ಚಾದರ ಮಾರಾಟದ ಮೂಲಕವೇ ಬದುಕಿಗೆ ಆಧಾರ ಕಂಡುಕೊಂಡ ಯುವಕ
Team Udayavani, Dec 13, 2021, 2:12 PM IST
ದಾಂಡೇಲಿ : ಅವನು ಓದಿದ್ದು 9 ನೇ ತರಗತಿ. ಒಂಬತ್ತು ತೋಳ ಹಳ್ಳಕ್ಕೆ ಬಿತ್ತು ಅಂದುಕೊಂಡಿದ್ದವರು ಈಗ ಅವನ ಶ್ರಮ ಸಾಧನೆಯನ್ನು ನೋಡಿ ವ್ಹಾರೇ ವ್ಹಾ ಎಂದು ಹೇಳುವಂತಾಗಿದೆ. ಕಾರಣವಿಷ್ಟೆ, ಓದಿದ್ರೆ ಮಾತ್ರ ಜೀವನ ಹಾಗೂ ಜೀವನದಲ್ಲಿ ಸಫಲತೆ ಎಂದು ಅಂದ್ಕೊಳ್ಳುವುದು ತಪ್ಪೆ. ಓದ್ಲಿ, ಓದದೇ ಇರ್ಲಿ ಆದರೆ ಶ್ರಮವಹಿಸಿ ದುಡಿದರೇ ಫಲ ಸಾಧ್ಯ ಎನ್ನುವುದನ್ನು ಅರಿತು ನಡೆದರೇ ಜೀವನದಲ್ಲಿ ಸಫಲತೆಯನ್ನು ಪಡೆಯಲು ಸಾಧ್ಯ. ಅದು ಆಗೋದಿಲ್ಲ, ಇದು ಆಗೋದಿಲ್ಲ ಎಂದು ಯಾವುದಕ್ಕೂ ಕಷ್ಟ ಪಡದೇ ಅಸಡ್ಡೆ ತೋರುವ ಯುವಕರಿಗೆ ಸ್ಪೂರ್ತಿ ಈ ಯುವಕ.
ಯಾರೀತಾ, ಅಂದುಕೊಂಡಿರೆ, ಹಾಗಾದ್ರೆ ಇಲ್ಲಿ ಕೇಳಿ. ಜೋಯಿಡಾ ತಾಲೂಕಿನ ಕುಂಬಾರವಾಡದ ನಿವಾಸಿ ಮಾರುತಿ ದುರ್ಗಪ್ಪ ಕಳಸಣ್ಣವರ ಎಂಬ ಯುವಕನೆ ಶ್ರಮ ಸಾಧಕ. ತಂದೆ ದುರ್ಗಪ್ಪ ಕಳಸಣ್ಣನವರು ಮಾಡುತ್ತಿದ್ದ ಚಾದರ ವ್ಯಾಪಾರವನ್ನೆ ತಂದೆಯ ಜೊತೆ ಶುರುವಚ್ಚಿಕೊಂಡು ಯಶಸ್ಸಿನೆಡೆಗೆ ಹೆಜ್ಜೆ ಹಾಕುತ್ತಿದ್ದಾನೆ. ಸೊಲ್ಲಾಪುರದಿಂದ ಚಾದರ ತಂದು ಜಿಲ್ಲೆ, ರಾಜ್ಯ, ಹೊರ ರಾಜ್ಯಗಳಲ್ಲಿಯೂ ಮಾರಾಟ ಮಾಡುತ್ತಿರುವ ಮಾರುತಿಯವರು ಇದೀಗ ಕಳೆದ ವಾರದಿಂದ ದಾಂಡೇಲಿಯ ಜೆ.ಎನ್.ರಸ್ತೆಯ ಪುಟ್ಪಾತಿನಲ್ಲಿ ಚಾದರ ವ್ಯಾಪಾರವನ್ನು ಶುರವಚ್ಚಿಕೊಂಡಿದ್ದಾನೆ.
ದಾಂಡೇಲಿ, ಕದ್ರಾ, ಕಾರವಾರ, ಬೆಂಗಳೂರು, ಹೈದಾರಬಾದ್, ಮಂಡ್ಯ ಮೊದಲಾದ ಕಡೆಗಳಿಗೆ ತೆರಳಿ ತಿಂಗಳವೆರೆಗೆ ಇದ್ದು ವ್ಯಾಪಾರ ಮಾಡುವ ಮಾರುತಿ ತನ್ನ ಗೂಡ್ಸ್ ವಾಹನದ ಮೂಲಕ ತಂದು ಪುಟ್ಪಾತಿನಲ್ಲಿ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾನೆ. ಒಂದು ರೀತಿಯಲ್ಲಿ ಹೇಳುವುದಾದರೇ ಪುಟ್ಟ ಗೂಡ್ಸ್ ವಾಹನವೆ ಮಾರುತಿಗೆ ವಾಸದ ಮನೆ ಎನ್ನಲು ಅಡ್ಡಿಯಿಲ್ಲ. ದಾಂಡೇಲಿ ನಗರದಲ್ಲಿ ಬಹಳಷ್ಟು ಜನ ಚಾದರ ಮಾರಾಟ ಮಾಡಲು ಬರುತ್ತಿರುವುದರಿಂದ ಈತನೂ ಸಹ ಹೊರ ರಾಜ್ಯದಿಂದಲೆ ಬಂದಿರಬೇಕೆಂದು ಅಂದುಕೊಂಡಿದ್ದವರೇ ಜಾಸ್ತಿ. ಆದರೆ ಈತ ಹಚ್ಚ ಹಸಿರಿನ ಕುಂಬಾರವಾಡದ ನಿವಾಸಿ ಎನ್ನುವುದನ್ನು ಅಭಿಮಾನದಿಂದ ಹೇಳುವಾಗ ನಿಜಕ್ಕೂ ನಮ್ಮೂರ ಯುವಕ ಎಂಬ ಹೆಮ್ಮೆ ಮೂಡದೇ ಇರಲಾರದು. ತಂದೆಯವರ ಮಾರ್ಗದರ್ಶಮನವಿದೆ, ಒಳ್ಳೆಯ ಆದಾಯವಿದೆ ಎಂದು ಹೇಳುವ ಯುವಕ ಮಾರುತಿಯ ಶ್ರಮಜೀವನಕ್ಕೆ ಹ್ಯಾಟ್ಸ್ ಆಫ್ ಹೇಳಲೆಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.