ಮಕ್ಕಳ ಉದ್ಯಾನವನ ಗೇಟ್‌ ಬಂದ್‌

Team Udayavani, Dec 1, 2018, 4:12 PM IST

1-december-15.gif

ಕಾರವಾರ: ಇಲ್ಲಿನ ರವೀಂದ್ರನಾಥ್‌ ಕಡಲತೀರದ ಮಕ್ಕಳ ಉದ್ಯಾನವನದ ಎಲ್ಲ ಗೇಟ್‌ಗಳು ಶುಕ್ರವಾರ ಬಂದ್‌ ಮಾಡಿದ್ದರಿಂದ ಫಿಕ್‌ನಿಕ್‌ಗೆ ಬಂದ ಶಾಲಾ ಮಕ್ಕಳು ಆಟವಾಡಲು ಸಾಧ್ಯವಾಗದೇ ನಿರಾಶರಾಗಿ ಮರಳುವಂತಾಯಿತು.

ಶಾಲಾ ಮಕ್ಕಳ ಫಿಕ್‌ನಿಕ್‌ ಹಂಗಾಮಾ ಈಗಾಗಲೇ ಶುರುವಾಗಿದ್ದು, ಇಲ್ಲಿನ ರವೀಂದ್ರನಾಥ್‌ ಕಡಲತೀರದ ಮೇಲಿನ ಪ್ರವಾಸಿ ತಾಣಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಅಗಾಧವಾದ ಅರಬ್ಬೀ ಸಮುದ್ರ ಸೌಂದರ್ಯದ ಜೊತೆಗೆ ರಾಕ್‌ ಗಾರ್ಡ್‌ನ್‌, ಸಾಗರ ಮತ್ಸ್ಯಾಲಯ, ಚಾಪೆಲ್‌ ಯುದ್ಧ ಸ್ಮಾರಕ ಹಡಗು, ಫುಡ್‌ಕೋರ್ಟ್‌ ಬಳಿಯ ಪುಟಾಣಿ ಆಟಿಕೆ, ಆಳ್ವಾ ಗಾರ್ಡ್‌ನ್‌, ಅದರ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನ ಹೀಗೆ ಎಲ್ಲವೂ ಹಿರಿಯ, ಕಿರಿಯ ಪ್ರವಾಸಿಗರಲ್ಲದೇ, ಫಿಕ್‌ನಿಕ್‌ಗೆ ಬರುವ ಪುಟಾಣಿ ಮಕ್ಕಳು ಇಷ್ಟಪಡುವ ತಾಣಗಳಾಗಿವೆ.

ಮಕ್ಕಳ ಉದ್ಯಾನವನ ಹಾಗೂ ಫುಡ್‌ ಕೋರ್ಟ್‌ನಲ್ಲಿರುವ ಮಕ್ಕಳ ಆಟಿಕೆ ಗಾರ್ಡ್‌ನ್‌ ಹೊರತುಪಡಿಸಿ ಬಾಕಿ ಎಲ್ಲ
ತಾಣಗಳನ್ನು ನಿಗದಿಪಡಿಸಿದ ಸಮಯಕ್ಕೆ ಮಾತ್ರ ವೀಕ್ಷಣೆಗೆ ಅವಕಾಶವಿದೆ. ಶುಕ್ರವಾರ ಮಧ್ಯಾಹ್ನ ಫಿಕ್‌ನಿಕ್‌ಗೆ ಬಂದ ಮಕ್ಕಳು ಫುಡ್‌ ಕೋರ್ಟ್‌ನಲ್ಲಿರುವ ಪುಟಾಣಿ ಆಟಿಕೆ ಗಾರ್ಡ್ ನಲ್ಲಿ ಆಟ ಶುರು ಮಾಡಿದರು. ಮಕ್ಕಳಿಗೆ ಮಧ್ಯಾಹ್ನ ರಣ ಬಿಸಿಲಿನಲ್ಲಿ ಆಟವಾಡಲು ಸಾಧ್ಯವಾಗಲಿಲ್ಲ. ಇದನ್ನು ಅರಿತು ಶಿಕ್ಷಕಿಯರು ಮಕ್ಕಳನ್ನು ತಂಪು ವಾತಾವರಣ ಇರುವ ಆಳ್ವಾ ಗಾರ್ಡನ್‌ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನದತ್ತ ಕರೆದುಕೊಂಡು ಹೋಗಬೇಕಾಯಿತು. 

ಮಕ್ಕಳ ಉದ್ಯಾನವನದ ಸುತ್ತಮುತ್ತ ಗಿಡಮರಗಳು ಹುಲುಸಾಗಿ ಬೆಳೆದಿರುವುದರಿಂದ ಉದ್ಯಾನವನದಲ್ಲಿ ಸಾಕಷ್ಟು ನೆರಳು ಬೀಳುತ್ತದೆ. ಇದರಿಂದ ನೆರಳಿನ ತಂಪಾದ ವಾತಾವರಣದಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುತ್ತದೆ. ಆದರೆ ಶುಕ್ರವಾರ ಇಲ್ಲಿ ಆಟವಾಡಲು ಉತ್ಸಾಹದಿಂದ ಬಂದ ಮಕ್ಕಳಿಗೆ ಹಾಗೂ ಶಿಕ್ಷಕಿಯರಿಗೆ ನಿರಾಸೆ ಉಂಟಾಯಿತು. ಕಾರಣ ಮಕ್ಕಳ ಉದ್ಯಾನವನದ ಮೂರೂ ಗೇಟ್‌ಗಳು ಬಂದ್‌ ಮಾಡಿದ್ದರಿಂದ ಆಟ ಆಡಲು ಸಾಧ್ಯವಾಗದೇ ಮಕ್ಕಳು ಆಟಿಕೆ ಸಾಮಾನುಗಳನ್ನು ಹೊರಗಡೆಯಿಂದಲೇ ನೋಡಿ ಕಣ್ತುಂಬಿಕೊಂಡರು.

ಉದ್ಯಾನವನದ ಬೇಲಿಗೆ ಅಳವಡಿಸಿದ ಕಬ್ಬಿಣದ ಜಾಲರಿ ಹಿಂದೆ ನಿಂತು ಆಟವಾಡುವ ಆಸೆಗಣ್ಣಿನಿಂದ ನೋಡುವ ಮಕ್ಕಳ ದೃಶ್ಯ ಮನಕಲುಕುವಂತಿತ್ತು ಎಂದು ಇಲ್ಲಿನ ಆಳ್ವಾ ಉದ್ಯಾನವನಕ್ಕೆ ವಿಹರಿಸಲು ಬಂದ ಪ್ರವಾಸಿಗ ಬಾಲಚಂದ್ರ ನಾಯ್ಕ ಅಭಿಪ್ರಾಯಪಟ್ಟರು.

ರಣಬಿಸಿಲಿನಲ್ಲಿ ಆಟವಾಡಲು ತೊಡಕು: ರವೀಂದ್ರನಾಥ ಟ್ಯಾಗೋರ್‌ ಬೀಚ್‌ಗೆ ಹೊಂದಿಕೊಂಡಂತೆ ಇರುವ ಆಳ್ವಾ ಗಾರ್ಡನ್‌ ಪಕ್ಕದಲ್ಲಿಯೇ ನಗರಸಭೆ ವೈವಿಧ್ಯಮಯ ಮಕ್ಕಳ ಆಟಿಕೆಗಳನ್ನು ಅಳವಡಿಸಿ ಮಕ್ಕಳ ಉದ್ಯಾನವನ ನಿರ್ಮಿಸಿತ್ತು. ಬಳಿಕ ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಫುಡ್‌ಕೋರ್ಟ್‌
ಬಳಿ ಇನ್ನೊಂದು ಮಕ್ಕಳ ಆಟಿಕೆ ಗಾರ್ಡ್‌ನ್‌ ನಿರ್ಮಿಸಿದೆ. ಆದರೆ ಅದು ಮುಂಜಾನೆ ಅಥವಾ ಸಾಯಂಕಾಲ ಆಟ ಆಡಲು ಬರುವ ಮಕ್ಕಳಿಗೆ ಅನುಕೂಲಕರವಾಗಿದೆ. ಅದರ ಸುತ್ತಮುತ್ತ ಮರಗಿಡಗಳಿಲ್ಲದೇ, ಬೆಳಗ್ಗೆ 11ರ ನಂತರ ಹಾಗೂ ಮಧ್ಯಾಹ್ನದ ರಣ ಬಿಸಿಲಿನಲ್ಲಿ ಮಕ್ಕಳಿಗೆ ಆಟವಾಡಲು ಸಾಧ್ಯವಿಲ್ಲ. ಎಲ್ಲ ಆಟಿಕೆ ಸಾಮಾನುಗಳು ಬಿಸಿಲಿನಿಂದ ಕಾದಿರುತ್ತವೆ. ಇದರಿಂದ ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ಸ್ಥಳೀಯ ಆನಂದ್‌ ಬಿ. ತಿಳಿಸುತ್ತಾರೆ.

ಪ್ರವಾಸಿಗರು ಹೆಚ್ಚು ಬರುವ ದಿನಗಳು ಇವಾಗಿದ್ದು, ಆ ನಿಮಿತ್ತ ಮಕ್ಕಳ ಉದ್ಯಾನವನದ ಗೇಟ್‌ಗಳು ಪ್ರತಿ ದಿನವೂ ತೆರೆದಿಡಲಾಗುತ್ತದೆ. ಶುಕ್ರವಾರ ಕೂಡ ತೆರೆದಿಡಲು ಸೂಚಿಸಿದ್ದೆ. ಆದರೂ ಬಂದ್‌ ಮಾಡಲಾಗಿದ್ದರೆ, ಈ ಬಗ್ಗೆ ವಿಚಾರಿಸಲಾಗುವುದು.
 ಎಸ್‌.ಯೋಗೇಶ್ವರ್‌, ಪೌರಾಯುಕ್ತರು, ನಗರಸಭೆ ಕಾರವಾರ.

ಟಾಪ್ ನ್ಯೂಸ್

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.