ಹಳೆದಾಂಡೇಲಿಯಲ್ಲಿ ರಸ್ತೆಗೆ ನಿರ್ಮಿಸಲಾದ ತಡೆಗೋಡೆ ತೆರವು- ನಿಟ್ಟುಸಿರು ಬಿಟ್ಟ ಸ್ಥಳೀಯರು
Team Udayavani, Dec 22, 2021, 12:34 PM IST
ದಾಂಡೇಲಿ: ಹಳೆದಾಂಡೇಲಿಯ ಸ್ವಾಮಿಲ್ ಹತ್ತಿರದ ರಸ್ತೆಗೆ ಅಡ್ಡಲಾಗಿ ಅರಣ್ಯ ಇಲಾಖೆಯವರು ತಡೆಗೋಡೆ ನಿರ್ಮಿಸಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಶತಮಾನಗಳಿಂದ ಸ್ಥಳೀಯ ಜನತೆಯ ದೈನಂದಿನ ಜೀವನದ ಪ್ರಮುಖ ಕೊಂಡಿಯಾಗಿದ್ದ ಈ ರಸ್ತೆಗೆ ಏಕಾಏಕಿ ಅರಣ್ಯ ಇಲಾಖೆಯವರು ತಡೆಗೋಡೆಯನ್ನು ನಿರ್ಮಿಸುವುದರ ಮೂಲಕ ಸ್ಥಳೀಯರ ಪ್ರತಿಭಟನೆಗೆ, ಆಕ್ರೋಶಕ್ಕೆ ತುತ್ತಾಗಿದ್ದರು.
ತಡೆಗೋಡೆ ತೆರವುಗೊಳಿಸುವಂತೆ ಸ್ಥಳೀಯರು ಪ್ರತಿಭಟನೆಯನ್ನು ನಡೆಸಿದ್ದರು. ಇತ್ತ ಪೌರಾಯುಕ್ತರು ತೆರವಿಗಾಗಿ ನಗರ ಸಭೆಯಿಂದ ಪತ್ರ ಬರೆದು ತಿಳಿಸಿದ್ದರು. ತೆರವುಗೊಳಿಸದೇ ಇದ್ದಲ್ಲಿ ಬೃಹತ್ ಪ್ರತಿಭಟನೆಗೂ ಸ್ಥಳೀಯರು ನಿರ್ಧರಿಸಿದ್ದರು. ಈ ನಡುವೆ ಇದೀಗ ರಸ್ತೆಗೆ ನಿರ್ಮಿಸಲಾದ ತಡೆಗೋಡೆಯನ್ನು ತೆರವುಗೊಳಿಸಲಾಗಿದೆ.
ಈ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಸಹ ಸ್ಥಳೀಯರು ಕೈ ಬಿಟ್ಟಿದ್ದಾರೆಂದು ತಿಳಿದು ಬಂದಿದೆ. ಬಹಳಷ್ಟು ವರ್ಷಗಳಿಂದ ಈ ರಸ್ತೆಯನ್ನೆ ಅವಲಂಭಿಸಿದ್ದ ಸ್ಥಳೀಯರಿಗೆ ಇದೀಗ ತಡೆಗೋಡೆ ತೆರವು ನೆಮ್ಮದಿಯನ್ನು ತಂದೊಡ್ಡಿದೆ. ತಡೆಗೋಡೆ ತೆರವುಗೊಳಿಸಿದ ನಂತರ ಸ್ಥಳೀಯರಿಗೆ ಅರಣ್ಯ ಇಲಾಖೆಯ ಮೇಲಿದ್ದ ಆಕ್ರೋಶ ಕ್ಷೀಣಗೊಂಡಿದೆ.
ಒಟ್ಟಿನಲ್ಲಿ ಸ್ಥಳೀಯರ ದೈನಂದಿನ ಬದುಕಿಗೆ ತೊಂದರೆಯಾಗದಿರಲೆಂದು ತಡೆಗೋಡೆ ತೆರವುಗೊಳಿಸಲಾಗಿದೆ ಎಂಬ ಮಾತುಗಳು ನಗರದಲ್ಲಿ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.