![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Apr 3, 2024, 4:32 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಚುನಾವಣಾ ಬ್ಯಾನರ್ ಗಳಲ್ಲಿ ಬಿಜೆಪಿ ಶಾಸಕ ಹೆಬ್ಬಾರ್ ಭಾಚಚಿತ್ರಕ್ಕೆ ಕೋಕ್ ನೀಡಲಾಗುತ್ತಿದೆ. ಮುಂಡಗೋಡ ಪಟ್ಟಣದ ಬಿಜೆಪಿ ಸಮಾವೇಶದ ವೇದಿಕೆಯ ಬೃಹತ್ ಪೋಸ್ಟರ್ ನಿಂದ ಶಾಸಕ ಶಿವರಾಮ ಹೆಬ್ಬಾರ್ ಭಾಚಚಿತ್ರಕ್ಕೆ ಕೋಕ್ ನೀಡಲಾಗಿದೆ.
ಮುಂಡಗೋಡ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಬುಧುವಾರ ಅಪರಾಹ್ನ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಮಾವೇಶದ ವೇದಿಕೆಯ ಮೇಲೆ ಹಾಕಿರುವ ಬ್ಯಾನರನಲ್ಲಿ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರ ಪೋಟೋ ತೆಗೆದು ಹಾಕಿರುವುದು ಕಂಡುಬಂದಿದೆ.
ಬುಧವಾರ ನಡೆದ ಕಾರ್ಯಕರ್ತ ಸಮಾವೇಶದಲ್ಲಿ ಬಿಜೆಪಿ ಉಪಾಧ್ಯಕ್ಷ ರೂಪಾಲಿ ನಾಯ್ಕ, ವಿಧಾನ ಪರಿಷತ್ ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ, ಸೇರಿದಂತೆ ಜೆಡಿಎಸ್ ಮುಖಂಡರ ಪೋಟೋ ವೇದಿಕೆಯ ಬ್ಯಾನರನಲ್ಲಿ ಹಾಕಲಾಗಿದೆ. ಆದರೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಇಲ್ಲದೆ ಇರುವುದು ಊಹಾಪೋಹಗಳಿಗೆ ಕಾರಣವಾಗಿದೆ.
ಬಿಜೆಪಿ ಶಾಸಕ ಶಿವರಾಮ ಹೆಬ್ಬಾರರನ್ನು ಬಿಟ್ಟು ಲೋಕಸಭಾ ಚುನಾವಣಿಗೆ ಬಿಜೆಪಿ ಮುಂದಾದಂತೆ ಕಾಣುತ್ತಿದೆ. ಅಲ್ಲದೆ ಶಾಸಕರೂ ಸಹ ಕೆಲ ತಿಂಗಳಿಂದ ಬಿಜೆಪಿ ಕಾರ್ಯ ಚಟುವಟಿಕೆಗಳಿಂದ ದೂರು ಉಳಿದಿದ್ದರಿಂದ ಬಿಜೆಪಿ ಅವರನ್ನು ಕೈ ಬಿಟ್ಟರಬಹುದು ಎಂಬ ಪ್ರಶ್ನೆ ಮೂಡಿದೆ. ಸಂಸದ ಅನಂತ ಕುಮಾರ್ ಹೆಗಡೆ ಭಾವಚಿತ್ರ ಬಳಸಲಾಗುತ್ತದೆ. ಆದರೆ ಅವರು ಪಕ್ಷದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ.
ಇದನ್ನೂ ಓದಿ: Cinema; ಏಪ್ರಿಲ್ ನಲ್ಲಿ ಸೌತ್ ಸಿನಿಮಾಗಳದ್ದೇ ಅಬ್ಬರ: ಯಾವ ಸಿನಿಮಾಗಳು ಬರಲಿವೆ ನೋಡಿ..
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.