ಶಿರಸಿಯೇ ಜಿಲ್ಲಾ ಕೇಂದ್ರಕ್ಕೆ ಸೂಕ್ತ: ಭೀಮಣ್ಣ
Team Udayavani, Dec 24, 2022, 12:58 PM IST
ಶಿರಸಿ: ಘಟ್ಟದ ಮೇಲ್ಭಾಗದ ಮೂರು ವಿಧಾನ ಸಭಾ ಕ್ಷೇತ್ರದ ಕೇಂದ್ರವಾಗಿ ಶಿರಸಿಯನ್ನೇ ಜಿಲ್ಲಾ ಕೇಂದ್ರವಾಗಿ ಘೊಷಿಸುವುದು ಸೂಕ್ತ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಬೆಂಬಲಿಸಿದ್ದಾರೆ. ಅವರ ಅವಧಿಯಲ್ಲಿ ಇದು ಘೋಷಣೆಯಾಗಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹಕ್ಕೊತ್ತಾಯ ಮಾಡಿದರು.
ಅವರು ಶಿರಸಿ ಜಿಲ್ಲಾ ಹೋರಾಟ ವೇದಿಕೆ ಕರೆ ನೀಡಿದ್ದ ಶಿರಸಿ ಜಿಲ್ಲೆ ಘೋಷಣೆ ಬೆಂಬಲಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿರಸಿ ಯಲ್ಲಿ ಜಿಲ್ಲಾ ಕೇಂದ್ರ ಕಚೇರಿ ಮಾಡಲು ಎಲ್ಲ ಅವಕಾಶಗಳೂ ಇದೆ. ನೂರಾರು ಎಕರೆ ಭೂಮಿಗಳೂ ಇದೆ. ಅದಕ್ಕಿಂತ ಮುಖ್ಯವಾಗಿ ಯಲ್ಲಾಪುರ, ಮುಂಡಗೋಡ, ಸಿದ್ದಾಪುರ, ಯಲ್ಲಾಪುರಕ್ಕೂ ಹತ್ತಿರವಿದೆ ಎಂದ ಅವರು, ಕಾರವಾರಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದೇ ಕಷ್ಟವಾಗಿದೆ. ದೂರ ಕೂಡ ಹೌದು. ಜಿಲ್ಲೆ ವಿಭಜನೆ ಎಂಬ ಅರ್ಥವಲ್ಲ. ಅಭಿವೃದ್ದಿ ಹಾಗೂ ಸೌಲಭ್ಯದ ದೃಷ್ಟಿಯಿಂದ ಇದು ಅನುಕೂಲ ಆಗಲಿದೆ ಎಂದರು.
ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, 45ಕ್ಕೂ ಅಧಿಕ ಸಂಘ ಸಂಸ್ಥೆಗಳು ಬೆಂಬಲ ನೀಡಿವೆ. ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಭಾಗಗಳಿಂದಲೂ ಜನರು ಬಂದಿದ್ದಾರೆ. ಶೀಘ್ರ ಶಿರಸಿ ಜಿಲ್ಲೆ ಘೋಷಣೆ ಆಗಲಿದೆ ಎಂಬ ನಂಬಿಕೆ ಇದೆ. ಸ್ಪೀಕರ್ ಕಾಗೇರಿ ಅವರೂ ಬೆಂಬಲಿಸಿದ್ದಾರೆ. ಪಕ್ಷಾತೀತ, ಜಾತ್ಯಾತೀತ ಹೋರಾಟದ ಫಲ ಇದು ಎಂದರು.
ಈ ವೇಳೆ ಬಿಜೆಪಿ ವಕ್ತಾರ ಸದಾನಂದ ಭಟ್, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಉಷಾ ಹೆಗಡೆ, ಶ್ಯಾಂ ಭಟ್ಟ, ಎಂ.ಎಂ. ಭಟ್ಟ, ಸಂತೋಷ ಶೆಟ್ಟಿ, ಪ್ರದೀಪ ಶೆಟ್ಟಿ, ಮಂಜು ಶೆಟ್ಟಿ, ಉದಯ ಕುಮಾರ ಕಾನಳ್ಳಿ, ಸಿ.ಎಸ್.ಗೌಡರ್, ಬಸವರಾಜ್ ಓಶಿಮಠ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
T20; ಸ್ಯಾಮ್ಸನ್ ಸತತ 2ನೇ ಶತಕ:ದಕ್ಷಿಣ ಆಫ್ರಿಕಾ ಎದುರು ಭಾರತಕ್ಕೆ ಅಮೋಘ ಜಯ
Manipal: ಸವಾಲು ಮೆಟ್ಟಿ ನಿಂತಾಗ ಸುಸ್ಥಿರ ಜೀವನ: ಡಾ| ಜಗದೀಶ್
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.