Lok Sabha Election: 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ: ಸಚಿವ ಮಂಕಾಳ ವೈದ್ಯ
Team Udayavani, Dec 20, 2023, 8:00 PM IST
ಕಾರವಾರ: ರಾಜ್ಯದ ಲೋಕಸಭೆಯ 28 ಕ್ಷೇತ್ರಗಳ ಪೈಕಿ 20 ರಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು .
ಕಾರವಾರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಈ ಸಲ ಕಾಂಗ್ರೆಸ್ ಪಾಲಾಗಲಿದೆ. ಚುನಾವಣೆ ತಂತ್ರಗಾರಿಕೆ ಮತ್ತು ಅಭ್ಯರ್ಥಿ ಬಗ್ಗೆ ಈಗಲೇ ಹೇಳುವುದಿಲ್ಲ ಎಂದ ಅವರು ಜನರಿಗೆ ಮಾತುಕೊಟ್ಟಂತೆ ಗ್ಯಾರಂಟಿ ಜಾರಿಯಾಗಿವೆ. ಗ್ಯಾರಂಟಿ ಮೂಲಕ ಸಾಮಾಜಿಕ ನ್ಯಾಯ ಕಾಪಾಡಲಾಗಿದೆ ಎಂದರು .
ನಬಾರ್ಡ್ ಯೋಜನೆಯ ಕಸ ನಿರ್ವಹಣೆ , ಕಡಲತೀರ ಹಾಗೂ ಸಮುದ್ರ ಆರೋಗ್ಯ ರಕ್ಷಣೆಯ 800 ಕೋಟಿ ರೂ. ಯೋಜನೆಯಲ್ಲಿ ಓರ್ವ ವ್ಯಕ್ತಿಗೆ ವಾಸನೆ ಕಂಡು ಬರತೊಡಗಿದೆಯಂತೆ. ಆ ವ್ಯಕ್ತಿಗೆ ಮೆಡಿಕಲ್ ಕಾಲೇಜಿನ ಅವ್ಯವಹಾರದ ವಾಸನೆ ಬಡಿಯುವುದೇ ಇಲ್ಲ ಎಂದು ವ್ಯಂಗ್ಯವಾಡಿದರು.
ಕಸ ನಿರ್ವಹಣೆ ಯೋಜನೆ ಕರಾವಳಿಯ ಮೂರು ಜಿಲ್ಲೆಗೆ ಸಂಬಂಧಿಸಿದ್ದು . ಕಾರವಾರ ಜಿಲ್ಲೆಯ ಘಟ್ಟದ ಮೇಲೆ ಸಹ ಕೆಲ ಕಾರ್ಯ ಯೋಜನೆಗಳಿವೆ. ಪ್ಲಾಸ್ಟಿಕ್ ನದಿ ಹಾಗೂ ಸಮುದ್ರ ಸೇರದಂತೆ ತಡೆಯುವ ಯೋಜನೆ ಅದಾಗಿದೆ. ಕರಾವಳಿ ತೀರ ರಕ್ಷಣೆ ಹಾಗೂ ಪ್ರವಾಸೋದ್ಯಮ ಪೂರಕ ಕಾರ್ಯಗಳು ಸಹ ಯೋಜನೆಯಲ್ಲಿ ಸೇರಿವೆ ಎಂದರು .
ಉಸ್ತುವಾರಿ ಸಚಿವರಾಗಿ ನೀವು ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಸಭೆಯನ್ನು ಮಾಡಿದ ನಂತರ ಕ್ರಿಮ್ಸ್ ಅವ್ಯವಸ್ಥೆ ಸುಧಾರಣೆಯಾಗಿದೆಯಾ ಎಂಬ ಪ್ರಶ್ನೆಗೆ, ಆ ವ್ಯವಸ್ಥೆ ಒಂದು ಸಭೆಯಲ್ಲಿ ಸುಧಾರಿಸುವಂಥದ್ದಲ್ಲ. ಅದಕ್ಕೆ ಮತ್ತೆರಡು ಸಭೆಯ ಅವಶ್ಯಕತೆಯಿದೆ ಎಂದರು.
ನೀವು ಉಸ್ತುವಾರಿ ಸಚಿವರಾದ ಮೇಲೆ ಹಳಿಯಾಳ ಕ್ಷೇತ್ರದಲ್ಲಿ ಸಂಚರಿಸಿಲ್ಲವಲ್ಲ ಎಂಬ ಪ್ರಶ್ನೆಗೆ , ಅಲ್ಲಿ 9 ಸಲ ಗೆದ್ದು ಕ್ಷೇತ್ರ ಪ್ರತಿನಿಧಿಸಿದ ದೊಡ್ಡವರು ಇದ್ದಾರೆ . ಅವರ ಮುಂದೆ ನಾವು ಸಣ್ಣವರು ಎಂದು ದೇಶಪಾಂಡೆ ಅವರ ಹೆಸರು ಹೇಳದೆ ಪ್ರತಿಕ್ರಿಯಿಸಿದರು. ಹಳಿಯಾಳ ಜೊಯಿಡಾ ಭಾಗದ ಸಮಸ್ಯೆ ಪರಿಹರಿಸಲು ದೊಡ್ಡವರು ಸಮರ್ಥರಿದ್ದಾರೆಂದು ಸಚಿವ ಮಂಕಾಳು ವೈದ್ಯ ಅaಭಿಪ್ರಾಯಪಟ್ಟರು. ಮರಳು ಸಮಸ್ಯೆಗೆ ವಾರದಲ್ಲಿ ಪರಿಹಾರ ಸಿಗಲಿದೆ ಎಂದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.