ಕೋವಿಡ್ ಸೋಂಕು ಹೆಚ್ಚಳದ ಕಳವಳ

ಜಾಗೃತಿ ಮೂಡಿಸುತ್ತಿದ್ದರೂ ಹಳ್ಳಿಯ ಜನತೆ ಮಾತು ಕೇಳುತ್ತಿಲ್ಲ-ವಾರಿಯರ್ಗಳ ಪೀಕಲು

Team Udayavani, May 15, 2021, 9:35 PM IST

cats

ಜೀಯು, ಹೊನ್ನಾವರ

ಹೊನ್ನಾವರ: ಕಳೆದೆರಡು ತಿಂಗಳಲ್ಲಿ ತಾಲೂಕು ಆಡಳಿತ ಸಂಪ್ರದಾಯದಂತೆ ಜಾತ್ರೆ ಆಚರಿಸಲು, 50 ಜನ ಮಿತಿಯಲ್ಲಿ ಮದುವೆ ನಡೆಸಲು ಅನುಮತಿ ಕೊಟ್ಟಿದ್ದೇ ತಪ್ಪಾಯಿತೇನೋ ಎಂಬಂತೆ ಹಳ್ಳಿಗಳಲ್ಲಿ ಕೊರೊನಾ ಕಾಡ್ಗಿಚ್ಚಿನಂತೆ ಹಬ್ಬಿದೆ.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ, ವೈದ್ಯರು ಶ್ರಮಪಟ್ಟು ಹಾಸಿಗೆಗಳನ್ನು ಹೆಚ್ಚಿಸಿ ಆಕ್ಸಿಜನ್‌, ಔಷಧ, ಇತ್ಯಾದಿಗಳನ್ನು ವ್ಯವಸ್ಥೆ ಮಾಡಿಕೊಟ್ಟು ಜೊತೆಯಲ್ಲಿ ಹಳ್ಳಿಯ ಮನೆಮನೆಗಳಿಗೆ ಆಶಾ ಕಾರ್ಯಕರ್ತೆಯರನ್ನು ಕಳಿಸಿ ಎಚ್ಚರಿಕೆ ಹೇಳಿ, ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡರೂ ಸಹ ಜನ ಇದಾವುದೂ ಸಂಬಂಧವಿಲ್ಲ ಎಂಬಂತೆ ನಿರ್ಲಕ್ಷಿಸಿದ ಕಾರಣ ಕೊರೊನಾ ಅನಿಯಂತ್ರಿತವಾಗುತ್ತಿದೆ.

ಮದುವೆ ಮಾಡಲು 50ಜನಕ್ಕೆ ಪರವಾನಿಗೆ ಕೊಟ್ಟರೆ 200-300ಜನ ಉಂಡರು, ಕವಳ ಜೆಗೆದು ಉಗುಳಿದರು. ಸೋಂಕು ತಗಲಿದವರು ಒಂದಿಬ್ಬರಿದ್ದರೆ ಮದುವೆಗೆ ಹೋದವರಿಗೆಲ್ಲಾ ಸೋಂಕು ತಗಲಿತು. ಈಗ ಬರುತ್ತಿರುವ ಸೋಂಕಿತರು ಬಹುಪಾಲು ಮದುವೆಗೆ ಹೋಗಿ ಬಂದವರು. ಮನೆಯಲ್ಲೂ ಮದುವೆ ಮಾಡದೆ ಹಿತ್ತಲಲ್ಲಿ ಬಾಳೆ ಮರದ ಬುಡದಲ್ಲಿ ಮಾಲೆ ಹಾಕಿಕೊಂಡು ವರ-ವಧು ಕೈಕೈಹಿಡಿದು ಮನೆಗೆ ಹೋಗಿದ್ದರೆ ಇಂಥ ದುರಂತ ಸಂಭವಿಸುತ್ತಿರಲಿಲ್ಲ.

ಎಲ್ಲೋ ಕುಂಭಮೇಳ ನಡೆಯಿತು, ಜಾತ್ರೆ ಆಯಿತು, ಚುನಾವಣೆಯಾಯಿತು ಎಂದು ಇಲ್ಲಿ ಜಾತ್ರೆಗೆ ಹೋದವರು ಸೋಂಕು ಹೆಚ್ಚಿಸಿಕೊಂಡರು. ಕವಳದ ಬಟ್ಟಲು ವಿನಿಮಯ ಮಾತ್ರವಲ್ಲ ಊಟದ ಬಟ್ಟಲು ಸರಿಯಾಗಿ ತೊಳೆಯದೇ ಇರುವುದು ಸಹ ಕೋವಿಡ್‌ ವಿಸ್ತರಣೆಗೆ ಕಾರಣವಾಗಬಹುದು. ಯೋಗ, ಪ್ರಾಣಾಯಾಮ, ಪ್ರಾರ್ಥನೆಗಳು ಮನಸ್ಸನ್ನು ಶಾಂತವಾಗಿಟ್ಟುಕೊಂಡು ಕೋವಿಡ್‌ ನಿಯಮ ಪಾಲಿಸಿ ಸೋಂಕಿನಿಂದ ದೂರವಿರಲು ಸಹಾಯ ಮಾಡುತ್ತದೆ.

ಬಾಯ್ತುಂಬ ರಸಗವಳ ತುಂಬಿಕೊಂಡು ಅದನ್ನು ಉಗಿದರೆ ಅಲ್ಲಿ ಇನ್ನೊಬ್ಬ ಬಾಯೊ¤ಳೆದರೆ ಅವನಿಗೆ ಸೋಂಕು ಖಂಡಿತ. ಕವಳದ ಸ್ಪ್ರೆà ಕೊರೊನಾ ವಾಹಕ ಎಂದು ಡಾ| ಪ್ರಕಾಶ ನಾಯ್ಕ, ಡಾ| ಗಜಾನನ ಭಟ್‌ ಹೇಳುತ್ತಾರೆ. ಕೊರೊನಾ ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸಿದ ಕಾರಣ ಗಂಭೀರ ಪರಿಸ್ಥಿತಿ ಉಂಟಾಗಿದೆ.

ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 14ಜನ ಮೃತಪಟ್ಟಿದ್ದಾರೆ. 791ಸೋಂಕಿತರು ಪತ್ತೆಯಾಗಿದ್ದಾರೆ. 752ಜನ ಗುಣಮುಖರಾಗಿದ್ದಾರೆ. ಹಳ್ಳಿಯ ಮನೆಮನೆಗಳಲ್ಲಿ ಜನ ಟಿವಿ ನೋಡುತ್ತಾರೆ. ಆಸ್ಪತ್ರೆಯಲ್ಲಿ ಜಾಗವಿಲ್ಲ, ಆಕ್ಸಿಜನ್‌ ಇಲ್ಲ, ಆಂಬ್ಯುಲೆನ್ಸ್‌ ಇಲ್ಲ, ಕೊನೆಗೆ ಸತ್ತರೆ ಹೆಣ ಸುಡಲೂ ಸ್ಥಳವಿಲ್ಲ. ಗಂಗಾನದಿಯಲ್ಲಿ ಹೆಣ ತೇಲಿಬರುತ್ತಿದೆ. ಈ ಪರಿಸ್ಥಿತಿಯನ್ನು ನೋಡಿಯೂ ಹಳ್ಳಿಯ ಜನ ಜ್ವರ ಬಂದರೆ ಔಷಧ ಅಂಗಡಿಗೆ ಹೋಗಿ ಡೋಲಾ 650, ವಿಕ್ಸ್‌ಎಕ್ಷನ್‌500, ಫೆರಾಸಿಟಮೋಲ್‌ ನುಂಗುತ್ತಾರೆ.

ಮರುದಿನ ಹಳ್ಳಿಯ ವೈದ್ಯರಲ್ಲಿ ಹೋಗುತ್ತಾರೆ. ಕುಟುಂಬ ವೈದ್ಯನ ಪಾಲಿಗೆ ರೋಗಿ ಕಾಮಧೇನು. ಅವರು ಒಂದಿಷ್ಟು ಗುಳಿಗೆ ಕೊಡುತ್ತಾರೆ, ಕೊನೆಗೆ ಉಸಿರು ಬಿಡಲಾಗದ ಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬರುವಾಗಲೇ ಬೆಡ್‌ ಉಂಟಾ, ಆಕ್ಸಿಜನ್‌ ಉಂಟಾ, ವೆಂಟಿಲೇಟರ್‌ ಉಂಟಾ, ಡಾಕ್ಟರ್‌ ಒಳಗೆ ಬರುತ್ತಾರಾ ಎಂದು ಕೇಳುತ್ತಾ ಬರುತ್ತಾರೆ, ಅವರಿವರಿಂದ ಫೋನ್‌ ಮಾಡಿಸುತ್ತಾರೆ, ಚಡಪಡಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ವೈದ್ಯರು ಜೀವ ಉಳಿಸಲು ತುಂಬ ಶ್ರಮಪಡಬೇಕಾಗುತ್ತದೆ. ವೈದ್ಯಕೀಯ ಸಿಬ್ಬಂದಿಯದೂ, ಅವರ ಸಹಾಯಕರದೂ ಒಂದು ಜೀವ. ವರ್ಷದಿಂದ ದಣಿವಿಲ್ಲದೇ ದುಡಿಯುತ್ತಿದ್ದಾರೆ, ಜನ ಇದನ್ನು ಅರ್ಥಮಾಡಿಕೊಳ್ಳಬೇಕು.

ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಮತ್ತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಎಲ್ಲ ಶಾಸಕರು ವ್ಯವಸ್ಥೆಗೆ ಬೆಂಬಲವಾಗಿ ನಿಂತು ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ವ್ಯಾಕ್ಸಿನ್‌ ಬರುತ್ತಲೇ ಇದೆ, ಅವಸರ ಮಾಡದೆ ಸುಮ್ಮನೆ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.

 

 

ಟಾಪ್ ನ್ಯೂಸ್

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

5-dandeli

Dandeli: ವಿದ್ಯುತ್ ಕಂಬದ ಜಿಓಎಸ್ ಕಳವು‌ ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

school

KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.