ಸೋಂಕು ಲಕ್ಷಣ ಗುಟ್ಟು ಮೃತ್ಯುವಿನೆದುರು ರಟ್ಟು
ಮನೆಮದ್ದಿಗೆ ಮೊರೆ | ಕೊನೆ ಹಂತದಲ್ಲಿ ಆಸ್ಪತ್ರೆಗೆ ದೌಡು
Team Udayavani, May 20, 2021, 10:38 PM IST
ವರದಿ : ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ಸೋಂಕಿನ ಲಕ್ಷಣಗಳು ಇದ್ದರೂ ಯಾರಿಗೂ ಹೇಳದೇ ಮನೆ ಮದ್ದಿಗೆ ಮುಂದಾಗಿ ಕೊನೇ ಹಂತದಲ್ಲಿ ಆಸ್ಪತ್ರೆಗೆ ದಾಖಲಾದವರೇ ಸಾವಿಗೆ ಬಲಿಯಾಗುತ್ತಿದ್ದಾರೆ. ಆರೋಗ್ಯ ಇಲಾಖೆ ಅಂಕಿ-ಅಂಶಗಳು ಇದನ್ನೇ ಪ್ರತಿಪಾದಿಸುತ್ತಿದ್ದು, ಕೊರೊನಾ ಸೋಂಕಿನಿಂದ ಬಳಲುತ್ತಿದ್ದರೂ ಎಂಟತ್ತು ದಿನಗಳ ಬಳಿಕ ಆಸ್ಪತ್ರೆಗೆ ಉಸಿರಾಟದ ಸಮಸ್ಯೆಯಿಂದ ಬರುತ್ತಿರುವುದೇ ಸಾವಿನ ಪ್ರಮಾಣ ಅಧಿಕವಾಗಲು ಕಾರಣಾಗುತ್ತಿದೆ.
ವಿದ್ಯಾವಂತರೇ ತಪಾಸಣೆಗೆ ಒಳಗಾಗದೆ, ಆಸ್ಪತ್ರೆಗೆ, ವೈದ್ಯರನ್ನು ಸಂಪರ್ಕಿಸಿ ಔಷಧೋಪಚಾರ ಮಾಡಿಕೊಳ್ಳದೆ ಇರುವುದು ಮರಣ ಅಥವಾ ಸೋಂಕಿನ ತೀವ್ರತೆ ಅನುಭವಿಸಲು ಕಾರಣವಾಗುತ್ತಿದೆ. ಎಷ್ಟೋ ಜನರು ಜ್ವರದ, ಥಂಡಿ ಔಷಧ ಪಡೆದು ತಾತ್ಕಾಲಿಕ ಉಪಶಮನಕ್ಕೆ ಪ್ರಯತ್ನಿಸುತ್ತಿದ್ದಾರೆ. ಇದೇ ಕಾರಣದಿಂದ ಸೋಂಕಿತರು ಇನ್ನುಳಿದವರಿಗೂ ಸೋಂಕು ಹಂಚುವಂತೆ ಆಗಿದೆ. ತಾಲೂಕಿನಲ್ಲಿ ಕೊನೇ ಹಂತದಲ್ಲಿ ಚಿಕಿತ್ಸೆ ಪಡೆಯಲು ಬಂದವರು ಚಿಕಿತ್ಸೆ ಫಲಿಸದೇ ಮೃತರಾಗುತ್ತಿದ್ದಾರೆ.
ಯುವ ಜನರಿಗೂ ಉಸಿರಾಟದ ಸಮಸ್ಯೆ ಜೋರಾಗಿದೆ. ಜ್ವರ, ಥಂಡಿ, ಕೆಮ್ಮು, ಮೈ ಕೈ ನೋವು ಇದ್ದರೂ ಮನೆಯಲ್ಲೇ ಚಿಕಿತ್ಸೆ ಮಾಡಿಕೊಂಡು ಆಸ್ಪತ್ರೆಗೆ ಬಾರದೇ ಔಷಧ ಅಂಗಡಿಯಲ್ಲಿ ಪ್ಯಾರಾಸಿಟಮಲ್, ಡೋಲೋ 650 ಇತರ ಔಷಧ ಪಡೆಯುತ್ತಿದ್ದಾರೆ. ಗುಣವಾಗದೇ ಕೊನೇ ಘಳಿಗೆಯಲ್ಲಿ ಆಸ್ಪತ್ರೆಗೆ ಬರುವುದು ಸಮಸ್ಯೆಯ ಮೂಲ ಎನ್ನುತ್ತಾರೆ ತಾಲೂಕು ವೈದ್ಯಾಧಿಕಾರಿ ಡಾ| ವಿನಾಯಕ ಕಣ್ಣಿ.
ಇದೊಂದು ಸಮಸ್ಯೆ: ಈ ಮಧ್ಯೆ ಸೋಂಕಿನ ತಪಾಸಣೆಗೆ ಕೊಟ್ಟ ಬಳಿಕ 48 ಗಂಟೆ ಒಳಗೆ ಕಾರವಾರಕ್ಕೆ ಹೋಗಿ ಪಾಸಿಟೀವೋ, ನೆಗಟೀವೋ ವರದಿ ಬರಬೇಕು. ಪಾಸಿಟೀವ್ ಬಂದ ಬಳಿಕ ಹೋಮ್ ಕ್ವಾರಂಟೈನ್ ಆಗಬೇಕು. ಆದರೆ, ವರದಿ ಬರುವ ಮೊದಲೇ ಅಲ್ಲಿ ಇಲ್ಲಿ ಓಡಾಟ ಮಾಡಿ ಸೋಂಕು ಹಂಚುವ ಕಾರ್ಯ ಆಗುತ್ತಿದೆ. ಇದಕ್ಕೆ ಸ್ವಯಂ ಜಾಗೃತಿ ಆಗಬೇಕು ಎನ್ನುತ್ತಾರೆ ಕೊರೊನಾ ವಾರಿಯರ್. ಈ ಮಧ್ಯೆ ಸೋಂಕಿತರು ಎಂದು ಗೊತ್ತಾಗಿ ಔಷಧ ಪಡೆಯುತ್ತಿದ್ದರೂ ಅಲ್ಲಿ ಇಲ್ಲಿ ಹಳ್ಳಿಗಳಲ್ಲಿ, ಪೇಟೆಗಳಲ್ಲಿ ಓಡಾಡುತ್ತಿರು ವವರೂ ಕಾಣುತ್ತಿದ್ದಾರೆ. ಇದರ ನಿಯಂತ್ರಣ ಸ್ಥಳೀಯ ಆಡಳಿತಕ್ಕೆ ತಲೆನೋವಾಗುತ್ತಿದೆ. ಕೋವಿಡ್ ಸೋಂಕಿನ ಲಕ್ಷಣ ಕಂಡು ಕೋವಿಡ್ ತಪಾಸಣೆ ಮಾಡಿಸಿಕೊಂಡರೆ ಫಲಿತಾಂಶ ಬರುವ ತನಕ ಸ್ವಯಂ ಕ್ವಾರಂಟೈನ್ ಆಗಬೇಕು, ಕ್ವಾರಂಟೈನ್‌ಗೆ ಹೆದರಿ ಚಿಕಿತ್ಸೆ ಪಡೆಯದೇ ಇರಬಾರದು. ಸರಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳೂ ಚಿಕಿತ್ಸೆ ಕೊಡುತ್ತಿದೆ.
ಸರಕಾರಿ ವ್ಯವಸ್ಥೆಯಲ್ಲಿ ಶಿರಸಿಯಲ್ಲೇ ಇನ್ನೂ 20 ಬೆಡ್ ಇದೆ. ಮನೆಯಲ್ಲಿ ಪ್ರತ್ಯೇಕವಾಗಿ ಉಳಿಯಲು ಆಗದೇ ಇದ್ದವರಿಗೆ ಶಿರಸಿಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. ಬನವಾಸಿ, ದಾಸನಕೊಪ್ಪದಲ್ಲೂ ಸೋಂಕಿತರ ವಾಸ್ತವ್ಯಕ್ಕೆ ತಾಲೂಕು ಆಡಳಿತ ಯೋಜಿಸಿದೆ. ಅನಾರೋಗ್ಯ, ಪಾಸಿಟೀವ್ ಎರಡನ್ನೂ ಗಪ್‌ಚುಪ್ ಮಾಡುವುದೇ ಕೊರೊನಾ ನಿಯಂತ್ರಣಕ್ಕೆ ಕಷ್ಟವಾಗಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.