ಅನಾನಸ್ ಬೆಳೆಗಾರರಿಗೆ ಕೋವಿಡ್ ಸಂಕಷ್ಟ
Team Udayavani, Apr 21, 2021, 6:48 PM IST
ಶಿರಸಿ: ಅಂತೂ ಇಂತು ಚೇತರಿಕೆಯಲ್ಲಿದ್ದ ಅನಾನಸ್ ಬೆಳೆಗಾರರಿಗೆ ಕೋವಿಡ್ ಎರಡನೇ ಹಂತದಅಲೆ ಮತ್ತೆ ಸಂದಿಗ್ಧಕ್ಕೆ ದೂಡುತ್ತಿದೆ. ಬನವಾಸಿರಾಣಿ ಎಂದರೆ ದೆಹಲಿಗರಿಗೆ ಪ್ರಿಯವಾಗಿದ್ದಅನಾನಸ್ ಈಗ ಕೋವಿಡ್ ಕಾರಣದಿಂದಅದರ ಬೆಳೆಗಾರರನ್ನು ಬಾಣಲೆಯಿಂದ ಬೆಂಕಿಗೆ ಬೀಳಿಸಿದೆ.
ಕಳೆದ ವರ್ಷ ಅನಾನಸ್ ಬೆಳೆ ಕೈಗೆ ಬರುವ ಹೊತ್ತಿಗೆ ಕೋವಿಡ್ ಲಾಕ್‌ಡೌನ್‌ನಿಂದ ಬೆಳೆಯೆಲ್ಲಕೃಷಿಭೂಮಿಯಲ್ಲೇ ಕೊಳೆತು ಹಾನಿಯಾಗುವಂತೆಆಗಿತ್ತು. ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಟಾರ್ 8 ರೂ. ಕೆಜಿಯಂತೆ ಖರೀದಿಸಿ ಕ್ಷೇತ್ರದಜನರಿಗೆ ಹಂಚಿಕೆ ಮಾಡಿದ್ದರು. ಈಗಲೂ 2020ರ ಮಾರ್ಚ್ ಕೊನೆಯ ಸಂಕಷ್ಟ ಈ ವರ್ಷ ಎಪ್ರಿಲ್ ನಡುಗೆ ತಂದು ನಿಲ್ಲಿಸುವಂತಾಗಿದೆ.
ತಾಲೂಕಿನ ಅರೆಬಯಲುಸೀಮೆ ಪ್ರದೇಶವಾದ ಬನವಾಸಿ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಅನಾನಸ್‌ಬೆಳೆ ದೆಹಲಿ ಮಾರುಕಟ್ಟೆಯನ್ನೇ ಅವಲಂಭಿಸಿದೆ. ಈಗ ಅಲ್ಲಿ ಲಾಕ್‌ಡೌನ್, ಕೊರೊನಾ ಕಾರಣದಿಂದಮಂಗಲ ಕಾರ್ಯ ಆಗದೇ ಇರುವದು, ರಸ್ತೆಪಕ್ಕದಲ್ಲಿ ಅನಾನಸ್ ಲೇಸ್, ಜ್ಯೂಸ್‌ಗಳಿಗೂಅಪಾರ ಬೇಡಿಕೆ ಇತ್ತು. ಅಲ್ಲಿ ಬೇಡಿಕೆ ಕುಂಠಿತಆಗಿದ್ದರಿಂದ ಇಲ್ಲೂ ಕಳೆದ ವಾರದಿಂದ ಬೆಲೆಇಳಿಮುಖದತ್ತ ಸಾಗಿದೆ. ಇದರಿಂದ ಬೆಳೆ ಕೊಯ್ಲುಮಾಡಬೇಕಾದ ಬೆಳೆಗಾರರು ಸಂಕಷ್ಟದ ಫಜೀತಿಗೆ ಬಿದ್ದಿದ್ದಾರೆ. ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಹೆಕ್ಟೇರ್‌ಪ್ರದೇಶದಲ್ಲಿ ಅನಾನಸ್ ಬೆಳೆಯಲಾಗುತ್ತದೆ.ಅದರಲ್ಲಿ ಹೆಚ್ಚಿನ ಬೆಳೆ ದೆಹಲಿ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ. ಆದರೆ ದಿಲ್ಲಿಯಲ್ಲಿ ಕೋವಿಡ್ ಹೆಚ್ಚಳವಾದ ಕಾರಣದಿಂದ ಬೇಡಿಕೆ ತಗ್ಗಿದೆ.
ಲಕ್ಷಾಂತರ ರೂ.ಖರ್ಚು ಮಾಡಿ ಅನಾನಸ್ ಬೆಳೆದಿದ್ದ ರೈತರಿಗೆ ಕಳೆದ ವರ್ಷ ದೊಡ್ಡ ಪಮಾಣದಲ್ಲಿ ಏಟಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅನಾನಸ್ ಕೆಜಿಗೆ 12-16 ರೂ.ಇತ್ತು. ನಂತರ ಏಪ್ರಿಲ್ ತಿಂಗಳಆರಂಭದಲ್ಲಿ 20-22 ರೂ. ವರೆಗೆ ಏರಿಕೆಯಾಗಿತ್ತು. ಆದರೀಗ ಕಳೆದ ವಾರದಿಂದ ಈಚೆಗೆ 8-10ರೂ.ವರೆಗೆ ಬೆಲೆ ಇಳಿಕೆಯಾಗಿದ್ದು ವಾಸ್ತವಿಕವಾಗಿದೆ.ಇತ್ತ ಕಾಮಧೇನುವಿನಂಥ ಫ್ಯಾಕ್ಟರಿಗಳು ನೆರವಿಗೆ ಬಂದರೂ ಅದನ್ನು ಪುನಃ ಮಾರುಕಟ್ಟೆ ಮಾಡುವುದೂದೊಡ್ಡ ಸವಾಲೇ ಆಗಿವೆ ಎಂಬುದೂ ಸುಳ್ಳಲ್ಲ. ಜನ ಕೂಡ ಹಣ್ಣನ್ನೇ ಕೋಯ್ದು ತಿನ್ನುವ ರೂಢಿ ಪಲ್ ಗಳಿಗಿಂತ ಹೆಚ್ಚು ಇಷ್ಟ ಪಡುತ್ತಾರೆ ಎಂಬುದು ನಿಜ ಸಂಗತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.