Dandeli: ಮನೆ ಮುಂಬಾಗಿಲಲ್ಲೇ ಪ್ರತ್ಯಕ್ಷವಾದ ಮೊಸಳೆ
Team Udayavani, Jul 31, 2024, 3:18 PM IST
ದಾಂಡೇಲಿ: ಮನೆ ಮುಂಬಾಗಿಲಿಗೆ ಮೊಸಳೆಯೊಂದು ಬಂದ ಘಟನೆ ದಾಂಡೇಲಿಯಲ್ಲಿ ಜು.31ರ ಬುಧವಾರ ನಡೆದಿದೆ.
ಬುಧವಾರ ಬೆಳಗ್ಗೆ 6.30 ಗಂಟೆಗೆ ದಾಂಡೇಲಿ ನಗರದ ಅಂಬೆವಾಡಿಯಲ್ಲಿ ಇಂಡಿಯನ್ ಗ್ಯಾಸ್ ಕಾರ್ಯಾಲಯದ ಮುಂಭಾಗದಲ್ಲಿರುವ ಅರುಣಾದ್ರಿ ರಾವ್ ಎಂಬವರ ಮನೆಯ ಬಾಗಿಲ ಮುಂಭಾಗವೇ ಮೊಸಳೆಯೊಂದು ಪ್ರತ್ಯಕ್ಷವಾದ ಘಟನೆ ನಡೆದಿದೆ.
ಬೆಳಿಗ್ಗೆ ಎದ್ದ ಅರುಣಾದ್ರಿ ರಾವ್ ಮನೆಯ ಬಾಗಿಲು ತೆರೆಯುತ್ತಿದ್ದಂತೆ ಮೊಸಳೆ ಪ್ರತ್ಯಕ್ಷವಾಗಿರುವುದನ್ನು ಗಮನಿಸಿದ್ದಾರೆ. ಮೊಸಳೆ ಬಂದಿರುವ ಸುದ್ದಿ ಸುತ್ತಮುತ್ತಲು ಹಬ್ಬಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು.
ತಕ್ಷಣವೇ ಅರುಣದ್ರಿ ರಾವ್, ಉರಗ ಪ್ರೇಮಿ ರಜಾಕ್ ಶಾಗೆ ಮಾಹಿತಿ ನೀಡಿದ್ದಾರೆ. ರಜಾಕ್ ಶಾ ಕೂಡಲೇ ತನ್ನ ಸಂಗಡಿಗರನ್ನು ಕಳುಹಿಸಿ ಸ್ಥಳೀಯರ ಸಹಕಾರದೊಂದಿಗೆ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.