Dandeli: ಹೃದಯಾಘಾತದಿಂದ ಯುವಕ ಮೃತ್ಯು
Team Udayavani, Aug 28, 2023, 2:44 PM IST
ದಾಂಡೇಲಿ : ನಗರದ ಗಾಂಧಿನಗರ, ಆಶ್ರಯ ಕಾಲೋನಿ ನಿವಾಸಿ ಹಾಗೂ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕ ಅಸ್ಲಾಂ ಖಾಸೀಂ ಸಾಬ್ ಶೇಖ ಎಂಬಾತನು ಹೃದಯಾಘಾತಕ್ಕೊಳಗಾಗಿ ಇಂದು ಮೃತಪಟ್ಟಿದ್ದಾನೆ. ಮೃತನಿಗೆ 23 ವರ್ಷ ವಯಸ್ಸಾಗಿತ್ತು.
8 ವರ್ಷವಿರುವಾಗಲೆ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಈತ ತನ್ನ ಮಾವ ದಾದಾಪೀರ್ ನದೀಮುಲ್ಲಾ ಅವರ ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿರುವ ಮನೆಯಲ್ಲಿ ವಾಸವಿದ್ದನು. ಜೆ.ಸಿ.ಬಿ ಆಪರೇಟರ್ ವೃತ್ತಿಯನ್ನು ನಿರ್ವಹಿಸುತ್ತಿದ್ದ ಈತ ಇಂದು ಬೆಳಿಗ್ಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕೆಲಸಕ್ಕೆಂದು ತೆರಳುತ್ತಿದ್ದ ಸಮಯದಲ್ಲಿ ಮನೆಯಲ್ಲಿಯೇ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಆತನನ್ನು ಕರೆತರಲಾಗಿದೆ. ಅಷ್ಟೊತ್ತಿಗಾಗುವಲೆ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತ ಯುವಕನು ಮಾವ, ಅತ್ತೆ, ಓರ್ವ ಸಹದೋರಿ, ಓರ್ವ ಸಹೋದರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾನೆ.
ಇದನ್ನೂ ಓದಿ: Vaishnavi Gowda: ಸಿನಿಮಾ-ಸೀರಿಯಲ್ ಎಂಬ ಭೇದ-ಭಾವ ನನಗಿಲ್ಲ…: ‘ಸೀತಾರಾಮ’ ನಟಿಯ ಮಾತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.