Dandeli ಬಂಗೂರನಗರದ ಐತಿಹಾಸಿಕ ಡಿಲಕ್ಸ್ ಮೈದಾನದಲ್ಲಿ ಕಟ್ಟಿಗೆ ದಾಸ್ತಾನಿಗೆ ಸಿದ್ಧತೆ
Team Udayavani, Dec 25, 2023, 5:07 PM IST
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಧೀನದಲ್ಲಿರುವ ಬಂಗೂರನಗರದ ಐತಿಹಾಸಿಕ ಡಿಲಕ್ಸ್ ಮೈದಾನದಲ್ಲಿ ಕಾರ್ಖಾನೆಯವರು ಕಟ್ಟಿಗೆ ದಾಸ್ತಾನಿಡಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.
ಮಾಹಿತಿಯ ಪ್ರಕಾರ, ಕೆಲವು ದಿನಗಳವರೆಗೆ ಇಲ್ಲಿ ಕಟ್ಟಿಗೆ ದಾಸ್ತಾನು ಮಾಡಲಾಗುತ್ತಿದ್ದು, ಶಾಶ್ವತವಾಗಿ ಕಟ್ಟಿಗೆ ಯಾರ್ಡನ್ನಾಗಿ ಡಿಲಕ್ಸ್ ಮೈದಾನವನ್ನು ಕಾಗದ ಕಾರ್ಖಾನೆಯವರು ಬಳಕೆ ಮಾಡುತ್ತಿಲ್ಲ ಎಂಬುವುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.
ಕಳೆದ ಕೆಲವು ದಿನಗಳಿಂದ ಟರ್ಬೈನ್ ಸಮಸ್ಯೆಯಿಂದಾಗಿ ಕಾರ್ಖಾನೆಯ ಎಲ್ಲಾ ಘಟಕಗಳು ಕಾರ್ಯನಿರ್ವಹಿಸದ ಕಾರಣ ಉತ್ಪಾದನಾ ಚಟುವಟಿಕೆ ತಕ್ಕಮಟ್ಟಿಗೆ ಕುಂಠಿತಗೊಂಡು ಕಚ್ಚಾ ವಸ್ತುವಾದ ಕಟ್ಟಿಗೆಗಳ ದಾಸ್ತಾನು ಗಣನೀಯವಾಗಿ ಹೆಚ್ಚಳವಾದ ಹಿನ್ನಲೆಯಲ್ಲಿ ಸದ್ಯಕ್ಕೆ ಕಟ್ಟಿಗೆ ದಾಸ್ತಾನಿನ ಕೊರತೆಯನ್ನು ನೀಗಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದ್ದು, ಇಲ್ಲಿ ದಾಸ್ತಾನಿಡಲಾಗುವ ಕಟ್ಟಿಗೆಗಳನ್ನು ಮೊದಲು ನುರಿಸುವ ಕಾರ್ಯ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿ ಹೆಚ್ಚೆಂದರೇ ಇಪ್ಪತ್ತು ದಿನಗಳಿಂದ ಒಂದು ತಿಂಗಳವರೆಗೆ ಕಟ್ಟಿಗೆ ದಾಸ್ತಾನು ಇಡಲಾಗುತ್ತದೆ ಎಂಬ ಮಾಹಿತಿ ಇಂದು ಭಾನುವಾರ ಲಭ್ಯವಾಗಿದೆ.
ಕಳೆದ ವರ್ಷ ಡಿಲಕ್ಸ್ ಮೈದಾನದಲ್ಲಿ ನೆಡುತೋಪು ಮಾಡುವ ಚಿಂತನೆ ನಡೆದು, ವೇದಿಕೆ ಕಟ್ಟಡವನ್ನು ತೆರವುಗೊಳಿಸಲಾಗಿತ್ತು. ಆನಂತರ ನಗರದ ಜನತೆಯ ಆಗ್ರಹ, ಅಂದಿನ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು, ಶಾಸಕ ಆರ್.ವಿ.ದೇಶಪಾಂಡೆಯವರು ಮತ್ತು ಜಿಲ್ಲಾಧಿಕಾರಿಯವರ ಸೂಚನೆಯ ಮೇರೆಗೆ ನೆಡುತೋಪು ಕಾರ್ಯವನ್ನು ಕೈ ಬಿಡಲಾಗಿತ್ತು.
ಡಿಲಕ್ಸ್ ಮೈದಾನಕ್ಕೆ ಮತ್ತು ದಾಂಡೇಲಿಯ ಜನತೆಗೆ ಒಂದು ಭಾವನಾತ್ಮಕವಾದ ಸಂಬಂಧವಿದೆ. ಹಾಗಾಗಿ ಡಿಲಕ್ಸ್ ಮೈದಾನ ಡಿಲಕ್ಸ್ ಮೈದಾನವಾಗಿಯೆ ಇರಬೇಕೆಂಬುವುದು ನಗರದ ಜನತೆಯ ಒತ್ತಾಸೆಯಾಗಿದೆ. ಇನ್ನೂ ಕೈಗಾರಿಕಾ ನಿಯಾಮವಳಿಯ ಪ್ರಕಾರ ಮೈದಾನ ಇರಲೆಬೇಕು. ದಕ್ಷಿಣ ಕರ್ನಾಟಕದಲ್ಲೆ ಖ್ಯಾತಿ ಪಡೆದ ರಾಮಲೀಲೋತ್ಸವ ಕಾರ್ಯಕ್ರಮವೂ ಇಲ್ಲೆ ನಡೆಯುವುದರಿಂದ ಡಿಲಕ್ಸ್ ಮೈದಾನ ಕೇವಲ ಆಟೋಟಗಳಿಗೆ ಮಾತ್ರ ಸೀಮಿತವಾಗದೇ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಚಟುವಟಿಕಗಳಿಗೂ ಸುವರ್ಣ ವೇದಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ನ. 11ರಂದು ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.