Dandeli: ತಂಡದಿಂದ ಮನೆಗೆ ನುಗ್ಗಿ ಮೂವರ ಮೇಲೆ ಮರಣಾಂತಿಕ ಹಲ್ಲೆ
Team Udayavani, Jul 6, 2024, 7:06 PM IST
ದಾಂಡೇಲಿ : ತಂಡವೊಂದು ಮನೆಯ ಒಳಗಡೆ ನುಗ್ಗಿ ಮೂವರ ಮೇಲೆ ಮರಣಾಂತಿಕ ನಡೆಸಿದ ಘಟನೆಯ ಕುರಿತಂತೆ ಶನಿವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಂಡೇಲಿಯ ಗಾಂಧಿನಗರದ ನಿವಾಸಿಗಳಾದ ಮಾರುತಿ ಶಿನ್ನೂರು ಆತನ ತಂದೆ ಸಂಗಪ್ಪ ಈರಪ್ಪ ಶಿನ್ನೂರು, ತಾಯಿ ಮಹದೇವಿ ಸಂಗಪ್ಪ ಶಿನ್ನೂರು ಎಂಬವರೇ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡವರಾಗಿದ್ದಾರೆ.
ಶುಕ್ರವಾರ ರಾತ್ರಿ ಗಾಂಧಿನಗರದ ಮನೆಯಲ್ಲಿ ಮಾರುತಿ ಶಿನ್ನೂರು ಒಬ್ಬನೇ ಇದ್ದ ಸಂದರ್ಭದಲ್ಲಿ ಸ್ಥಳೀಯರಾದ ಚಂದ್ರನ್ ಮಲ್ನಾಡ್, ಸಂತೋಷ್ ಚಂದ್ರನ್ ಮಲ್ನಾಡ್ ಸೇರಿದಂತೆ ಮೂರ್ನಾಲ್ಕು ಜನರ ತಂಡವೊಂದು ಏಕಾಏಕಿ ಮಾರುತಿ ಶಿನ್ನೂರು ಮೇಲೆ ಹಲ್ಲೆ ನಡೆಸಿದೆ. ಮನೆಯಿಂದ ಎಳೆತಂದು ಹತ್ತಿರದಲ್ಲಿರುವ ಮೈದಾನದಲ್ಲಿ ಮತ್ತೆ ಈ ತಂಡ ಹೊಡೆದಿದೆ. ಅಷ್ಟೊತ್ತಿಗಾಗುವಾಗಲೇ ಹೊರಗಡೆ ಹೋಗಿ ಮರಳಿ ಮನೆಗೆ ಬರುತ್ತಿರುವಾಗ ಮಾರುತಿ ಶಿನ್ನೂರು ಅವರ ತಂದೆ ಮತ್ತು ತಾಯಿ ತತ್ ಕ್ಷಣವೇ ಅಲ್ಲಿಂದ ಕರೆದುಕೊಂಡು ಬಂದು ಮನೆಯ ಒಳಗಡೆ ಕಳುಹಿಸಿ ಬಾಗಿಲು ಮುಚ್ಚಿ ಚಿಲಕ ಹಾಕಿದ್ದಾರೆ. ಆದರೆ ಸಂತೋಷ್ ಮತ್ತೆ ಚಂದ್ರನ್ ಅವರ ತಂಡ ಬಾಗಿಲ ಚಿಲಕ ತೆಗೆದು ಮತ್ತೆ ಮಾರುತಿ ಶಿನ್ನೂರು ಮೇಲೆ ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಸಂಗಪ್ಪ ಈರಪ್ಪ ಶಿನ್ನೂರು ಮತ್ತು ಮಹಾದೇವಿ ಸಂಗಪ್ಪ ಶಿನ್ನೂರು ಇವರ ಮೇಲೆ ಹಲ್ಲೆ ನಡೆಸಿದೆ. ಗಂಭೀರ ಗಾಯಗೊಂಡಿದ್ದ ಮೂವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಮೂವರಿಗೂ ತಲೆಗೆ ಹಾಗೂ ದೇಹದ ಇನ್ನಿತರ ಭಾಗಗಳಿಗೆ ಗಾಯವಾಗಿದೆ.
ಈ ಘಟನೆಯ ದೃಶ್ಯಾವಳಿ, ಸಿಸಿ ಕೆಮರದಲ್ಲಿ ದಾಖಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಮಾರುತಿ ಶಿನ್ನೂರು ಅವರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರನ್ನು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.