ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ
ರಾಹುಲ್ ಗಾಂಧಿ, ಶರದ್ ಪವಾರ್, ಜುಅಲ್ ಓರಾಮ್ ಕಾರವಾರಕ್ಕೆ
Team Udayavani, Jan 18, 2021, 10:12 PM IST
ಕಾರವಾರ : ದೇಶದ ರಕ್ಷಣಾ ಇಲಾಖೆಯ ಸಂಸದೀಯ ಸಮಿತಿ ಜ.20 ಮತ್ತು 21 ರಂದು ಕಾರವಾರ ಬಳಿಯ ಐಎನ್ ಎಸ್ ಕದಂಬ ನೌಕಾನೆಲೆಗೆ ಭೇಟಿ ನೀಡಲಿದೆ.
ಸಮಿತಿಯ ಅಧ್ಯಕ್ಷ ಜುಅಲ್ ಓರಾಮ್, ಸಮಿತಿಯ ಸದಸ್ಯರಾದ ಸಂಸದ ರಾಹುಲ್ ಗಾಂಧಿ,ಶರದ್ ಪವಾರ್, ಸಂಜಯ್ ರಾಹುತ್ , ಜುಗಲ್ ಕಿಶೋರ್ ಶರ್ಮ, ಅಶೋಕ್ ಬಾಜಪೇಯಿ, ಪ್ರೇಮಚಂದ ಗುಪ್ತಾ , ಟಿ.ಆರ್.ಪರವಿಂದರ್ ಸೇರಿದಂತೆ ಒಟ್ಟು 31 ಜನ ಸಮಿತಿ ಸದಸ್ಯರು ಕಾರವಾರ ನೇವಿಯ ಪ್ರಗತಿ ಕಾಮಗಾರಿಗಳು ಹಾಗೂ ಈಗ ಲಭ್ಯ ಇರುವ ಸೌಕರ್ಯಗಳನ್ನು ವೀಕ್ಷಿಸಿ ಮಾಹಿತಿ ಪಡಯಲಿದ್ದಾರೆ.
21ಜನ ಲೋಕಸಭಾ ಸದಸ್ಯರು, 11 ಜನ ರಾಜ್ಯ ಸಭಾ ಸದಸ್ಯರು ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಇರಲಿದ್ದಾರೆ. ಸದಸ್ಯರು ಜ.21 ರಂದು ಗೋವಾಕ್ಕೆ ಆಗಮಿಸಿ, ನಂತರ ಕಾರವಾರ ಬಳಿಯ ನೇವಿ ತಲುಪಲಿದ್ದಾರೆ. ಅಜ್ಜಿ ಇಂದಿರಾ ಗಾಂಧಿ ಕಾಲದ ಕನಸಿನ ನೌಕಾನೆಲೆ, ರಾಜೀವ್ ಗಾಂಧಿ ಪ್ರಧಾನಿಯಾದಾಗ ಶಂಕುಸ್ಥಾಪನೆಯಾಗಿತ್ತು.ಆದರೆ ಅನುಷ್ಠಾನಕ್ಕೆ ಬಂದದ್ದು ಜಾರ್ಜ ಪರ್ನಾಂಡೀಸ್ ರಕ್ಷಣಾ ಸಚಿವರಾಗಿದ್ದಾಗ ,1998 ರಲ್ಲಿ.
ನೌಕಾನೆಲೆ ದೇಶಕ್ಕೆ ಸಮರ್ಪಣೆಯಾದದ್ದು ಪ್ರಣವ್ ಮುಖರ್ಜಿ ರಕ್ಷಣಾ ಸಚಿವರಾದ 2005 ನೇ ಇಸ್ವಿಯಲ್ಲಿ. ಆಗ ಸಂಸದೆ ಸೋನಿಯಾ ಗಾಂಧಿ ಕಾರವಾರ ನೇವಿಗೆ ಭೇಟಿ ನೀಡಿದ್ದು ಸ್ಮರಣೀಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.