ಹದಗೆಟ್ಟ ಹೆದ್ದಾರಿ: ಪ್ರಯಾಣಿಕರ ಪ್ರಯಾಸ
Team Udayavani, Dec 18, 2019, 2:41 PM IST
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ವಿಶೇಷವಾಗಿ ಯಲ್ಲಾಪುರ ಮಾಗೋಡ ಕ್ರಾಸ್‌ನಿಂದ ಅರಬೈಲ್ ವರೆಗೆ ಮತ್ತು ಹೆಚ್ಚಿನದಾಗಿ ಘಟ್ಟ ಮತ್ತು ತಿರುವು ಪ್ರದೇಶದಲ್ಲಿ ಸಂಪೂರ್ಣ ಹದಗೆಟ್ಟಿದ್ದು ಇದು ಹೆದ್ದಾರಿಯೋ ಅಥವಾ ಕಂದಕದೊಳಗೆ ಕಾಲುವೆಯೊಳಗೇ ದಾರಿಯೋ ಎನ್ನುವ ಸ್ಥಿತಿಯಾಗಿದ್ದು ಹೆದ್ದಾರಿ ಮೂಲಕ ಸಂಚಾರ ಸಂಚಕಾರ ತರುತ್ತಿದ್ದುದಲ್ಲದೇ ಓಡಾಡುವ ಜನತೆ ನಿತ್ಯ ಸಮಸ್ಯೆ ಎದುರಿಸುತ್ತ ಶಪಿಸುತ್ತ ಸಾಗಬೇಕಿದೆ.
ಹೆದ್ದಾರಿ 63ರ ಆರತಿಬೈಲ್ ಘಟ್ಟ ಪ್ರದೇಶದಲ್ಲಿ ಕಳೆದ ಜೂನ್‌ನಲ್ಲಿಯೇ ಹದಗೆಟ್ಟಿದೆ. ಮೇ ಕೊನೇ ಇಲ್ಲವೇ ಜೂನ್ ಪ್ರಾರಂಭದ ವೇಳೆಗೆ ಮರು ಡಾಂಬರೀಕರಣ ಮಾಡುತ್ತಾರೆ. ನಂತರ ಪ್ರಾರಂಭವಾಗುವ ಮಳೆಗೆ ತೊಳೆದು ಹೋಗುತ್ತದೆ. ಇದು ವರ್ಷದ ಮಾಮೂಲಿಯಾಗಿದೆ. ಒಂದೆರೆಡು ಕಡೆ ಇಲ್ಲಿ ಅಪಾಯಕಾರಿ ತಿರುವುಗಳನ್ನು ಹೊಂದಿದೆ. ಇಲ್ಲಿ ನಿತ್ಯವೂ ಅಪಘಾತಗಳು ಸಾಮಾನ್ಯವಾಗಿದೆ. ಈ ಪ್ರದೇಶದಲ್ಲಿ ಹೆದ್ದಾರಿ ಹದಗೆಟ್ಟು ಸಂಪೂರ್ಣ ಕೊರಕಲು ಬಿದ್ದಿದೆ. ಹಳ್ಳದಲ್ಲಿ ಸರ್ಕಸ್ ಮಾಡಿ ವಾಹನ ಚಲಾಯಿಸಿದ ಅನುಭವವಾಗುತ್ತದೆ.
ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದು ವಾಹನ ಚಲಾಯಿಸಬೇಕಾಗಿದೆ. ಸ್ವಲ್ಪ ಆಯ ತಪ್ಪಿದರೂ, ಅಪಾಯ ಗ್ಯಾರಂಟಿ. ಆದರೂ ಕನಿಷ್ಠ ನಿರ್ವಹಣೆ ಬಗೆಗೂ ಹೆದ್ದಾರಿ ಇಲಾಖೆ ಮುತುವರ್ಜಿ ವಹಿಸದೇ ನಿರ್ಲಕ್ಷé ತಾಳಿದೆ. ಮಡಿದ ಕೆಲಸವನ್ನೂ ಕಳಪೆಯಾಗಿ ಮಡುವುದಲ್ಲದೇ ಸಕಾಲಕ್ಕೆ ಮಾಡದೇ ಕಾಟಾಚಾರಕ್ಕೆ ಕಳೆದ ಎಂಟತ್ತು ವರ್ಷಗಳಿಂದ ಮಾಡಿದಲ್ಲೇ ಕಾಮಗಾರಿ ಮಾಡುತ್ತಿದೆ.
ಹಾಳಾದ ಹೆದ್ದಾರಿ ಡಾಂಬರೀಕರಣ ಮಾಡಿ ದುರಸ್ತಿಪಡಿಸಲು ಅನುದಾನ ನೀಡುವಂತೆ ಹೆದ್ದಾರಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುತ್ತಿದೆ. ಆದರೆ ಅದರ ಕಡತದ ಬಗ್ಗೆ ನಿಗಾವಹಿಸಿ ಲಾಬಿ ಮಾಡಿ ಈ ಜಿಲ್ಲೆಯ ಹೆದ್ದಾರಿ ನಿರ್ವಹಣೆಗೆ ಉತ್ತರ ಕನ್ನಡದ ಜನಪ್ರತಿನಿಧಿಗಳಿಂದ ಕೇಂದ್ರ ಮಟ್ಟದಲ್ಲಿ ಅನುದಾನ ತರುವಲ್ಲಿ ಸಾಧ್ಯವಾಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದ್ದು ಹಂಚಿಕೆ ಸಂದರ್ಭದಲ್ಲಿ ಬೇರೆ ಭಾಗದ ಜನಪ್ರತಿನಿಧಿಗಳು ಈ ತರಹದ ಅನುದಾನವನ್ನು ಸರಾಗವಾಗಿ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ. ಘಟ್ಟ ಪ್ರದೇಶದಲ್ಲಿ ಪ್ರತಿವರ್ಷ ರಸ್ತೆ ಹಾಳಾಗುತ್ತಿದ್ದು, ತೇಪೆ ಹಾಕುವ ಕಾರ್ಯ ಮಾಡಲಾಗುತ್ತದೆ. ಕಾಮಗಾರಿ ಕಳಪೆತನವೋ ಅಥವಾ ಇಳಿಜಾರಿನ ಪ್ರದೇಶದಲ್ಲಿ ವಾಹನಗಳ ಒತ್ತಡದಿಂದ ಹೀಗೆ ಆಗುತ್ತಿದೆಯೋ ಗೊತ್ತಿಲ್ಲ. ಆದರೆ ರಸ್ತೆ ಹಾಳಾಗಿ ಜನ, ವಾಹನಗಳು ಸಂಕಷ್ಟ ಪಡುವುದು ಮಾತ್ರ ತಪ್ಪುತ್ತಿಲ್ಲ. ಅರಬೈಲ್‌ದಿಂದ ಯಲ್ಲಾಪುರದವರೆಗೆ ಡಾಂಬರೀಕರಣ ಮಾಡಲು ಅನುದಾನಕ್ಕೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು.
-ನರಸಿಂಹ ಸಾತೊಡ್ಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.