ಅಭಿವೃದ್ಧಿಗೆ ಒಂದಾದ ಶಾಸಕರು-ಒದಗಿದ ಅನುದಾನ
Team Udayavani, Mar 26, 2021, 7:40 PM IST
ಹೊನ್ನಾವರ: ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿಈವರೆಗೆ ಜನ ಬಯಸುತ್ತ ಬಂದರೂ ನಡೆಯದವಿದ್ಯಮಾನ ನಡೆಯುತ್ತಿದೆ.ಅಭಿವೃದ್ಧಿಗಾಗಿ ಜಿಲ್ಲೆಯ ಶಾಸಕರು, ಸಚಿವರುಒಂದಾಗಿ ಪದೇಪದೇ ಸಭೆ ನಡೆಸುತ್ತಿದ್ದು ಅನುದಾನಒದಗಿ ಬರುತ್ತಿದೆ.
ಜಿಲ್ಲೆಗೆ ಬಹುಕಾಲ ಒಬ್ಬರೇ ಮಂತ್ರಿ ಪರಿಚಯವಿತ್ತು. ಅವರು ಹೇಳಿದಲ್ಲಿ ಹೆಜ್ಜೆ ಹಾಕುತ್ತಿದ್ದ ಶಾಸಕರು ತಮಗೆ ಸಹಜವಾಗಿ ಸಿಗುವಅನುದಾನದಲ್ಲಿ ತೃಪ್ತಿಪಟ್ಟುಕೊಂಡಿದ್ದರು. ಪಕ್ಷ ಒಂದೇ ಆದರೂ ಮನಸ್ಸು ಒಂದಾಗಿರಲಿಲ್ಲ. ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಯಡಿಯೂರಪ್ಪನವರು ಹಿಂದೆಎರಡು ಮಂತ್ರಿ ಸ್ಥಾನ, ನಾಲ್ಕು ನಿಗಮ ಮಂಡಳಿಸ್ಥಾನ ಕೊಟ್ಟು ಜಿಲ್ಲೆಯ ಅಭಿವೃದ್ಧಿಗೆ ನೀವು ಕೇಳಿದ್ದು ಕೊಡುತ್ತೇನೆ ಎಂದಿದ್ದರು. ಆದರೂ ಯಾಕೋಶಾಸಕರು ಒಂದಾಗಿ 5ವರ್ಷದಲ್ಲಿ ಒಂದೇ ಒಂದುಸಭೆ ನಡೆಸಿರಲಿಲ್ಲ. ಅಂತೂ ಜನರ ಆಸೆ ಕೈಗೂಡಿದೆ,ಅಪೇಕ್ಷೆಗಳು ಕಾರ್ಯರೂಪಕ್ಕೆ ಬರುತ್ತಿವೆ ಎಂಬುದು ಸಮಾಧಾನದ ಸಂಗತಿ.
ಬಿಜೆಪಿ ಹಿರಿಯ ಕಾಗೇರಿ, ಕಿರಿಯರಾದ ಸುನೀಲ, ರೂಪಾಲಿ ನಾಯ್ಕ, ಜೆಡಿಎಸ್‌ನಿಂದ ಹೋದ ದಿನಕರ ಶೆಟ್ಟಿ, ಕಾಂಗ್ರೆಸ್‌ಗೆ ಹೋಗಿ ಮರಳಿಬಂದಿರುವ ಶಿವರಾಮ ಹೆಬ್ಟಾರ್ ಒಂದಾಗಿ ಸಭೆ ನಡೆಸುತ್ತಿರುವುದು ಮಾತ್ರವಲ್ಲ ಹಳಿಯಾಳ ಶಾಸಕ,ಮಾಜಿ ಮಂತ್ರಿ ಆರ್.ವಿ. ದೇಶಪಾಂಡೆ ಕೂಡಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾರ್ವಜನಿಕ ಸಭೆಗಳಿಗೆ ಸಚಿವರು ಬಂದಾಗ ಎಲ್ಲ ಶಾಸಕರು ಉಪಸ್ಥಿತರಿರುತ್ತಾರೆ.
ವಿಧಾನಸಭಾ ಅಧ್ಯಕ್ಷ ಕಾಗೇರಿಯವರ ಕ್ಷೇತ್ರದ ಕಾರ್ಯಕ್ರಮಕ್ಕೆ ಸಚಿವ ಹೆಬ್ಟಾರರು ಮತ್ತು ಶಾಸಕರು ಹೋಗಿ ಬರುತ್ತಾರೆ. ವಿಧಾನಸಭಾ ಅಧ್ಯಕ್ಷರ ಕೊಠಡಿಯಲ್ಲಿ, ಸಚಿವ ಹೆಬ್ಟಾರರ ಕೊಠಡಿಯಲ್ಲಿ ಆಗಾಗ ಸಭೆ ನಡೆಯುತ್ತದೆ. ಬೇರೆ ಖಾತೆ ಸಚಿವರನ್ನು ಕರೆಸಿ ಮಾತನಾಡಿಸಿ, ಅನುದಾನ ಪಡೆದುಕೊಂಡು ಅವರನ್ನು ಸನ್ಮಾನಿಸಿಯೇ ಕಳಿಸುತ್ತಾರೆ. ಜಿಲ್ಲೆಗೆ ಯಾವ ಸಚಿವರೂ ಬರುತ್ತಿರಲಿಲ್ಲ. ಈ ಬಾರಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಉಪಮುಖ್ಯಮಂತ್ರಿಗಳು, ಕಂದಾಯ, ನಗರಾಭಿವೃದ್ಧಿ, ಸಮಾಜ ಕಲ್ಯಾಣ,ಸಾರಿಗೆ ಸಹಿತ ಜಿಲ್ಲೆಗೆ ಸಂಬಂಧಿಸಿದ ಎಲ್ಲ ಸಚಿವರು ಬಂದು ತಮ್ಮ ಇಲಾಖೆ ಕಾಮಗಾರಿ ಪರಿಶೀಲನೆ ಮಾಡಿ ಹೊಸ ಭರವಸೆಕೊಟ್ಟು ಹೋಗಿದ್ದಾರೆ. ಇದು ಜನರಿಗೂ ಖುಷಿ ತಂದಿದೆ.
ಭಟ್ಕಳ, ಹೊನ್ನಾವರ, ಶಿರಸಿ, ಯಲ್ಲಾಪುರಗಳಿಗೆ ಹೊಸ ಬಸ್‌ಸ್ಟ್ಯಾಂಡ್, ಕುಡಿಯುವ ನೀರಿನ ಯೋಜನೆ, ಸಣ್ಣದೊಡ್ಡ ನೀರಾವರಿ ಯೋಜನೆ, ಹೊನ್ನಾವರ ವಾಣಿಜ್ಯ ಬಂದರು, ಬೇಲೆಕೇರಿ ಬಂದರು ಸಮೀಕ್ಷೆ, ಶಿರಸಿ, ಕಾರವಾರದಲ್ಲಿ ದೊಡ್ಡ ಆಸ್ಪತ್ರೆ, ಐಟಿಐ ನವೀಕರಣ, ಗ್ರಾಮೀಣ ರಸ್ತೆ, ಸರ್ಕಾರಿ ಕಾಲೇಜುಗಳಿಗೆ ನೂತನ ಕಟ್ಟಡ ಸಹಿತ ಹಲವಾರು ಯೋಜನೆಗಳು ಬಂದಿವೆ. ಶರಾವತಿ ಎಡದಂಡೆಗೆ ನೀರಾವರಿ, ಕುಡಿಯುವ ನೀರು, ಕುಮಟಾದ ಅಳಕೋಡ ಮತ್ತು ಇತರ ಗ್ರಾಮಗಳಿಗೆಕುಡಿಯುವ ನೀರಿನ ಯೋಜನೆ ಸಮೀಕ್ಷೆಗಾಗಿ ತಲಾ 50ಲಕ್ಷ ರೂ. ಬಿಡುಗಡೆಯಾಗಿದೆ. ಬೇಸಿಗೆಯಲ್ಲೂಬತ್ತದ ಜಿಲ್ಲೆಯ 6ನದಿಗಳಿಂದ ಜಿಲ್ಲೆಯಾದ್ಯಂತ ಕುಡಿಯುವ ನೀರು, ನೀರಾವರಿ ಯೋಜನೆ,
ಬಂದರು ಮತ್ತು ಪ್ರವಾಸೋದ್ಯಮ ಅಭಿವೃದ್ಧಿ,ಕುಮಟಾ-ಶಿರಸಿ ಹೆದ್ದಾರಿ ವಿಸ್ತರಣೆ, ರೈಲು ಮಾರ್ಗಸಮೀಕ್ಷೆ ಸಹಿತ ಹಲವು ದೊಡ್ಡ ಯೋಜನೆಗಳುಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ.ಆಗೆಲ್ಲಾ ವಿರೋಧಿಸುತ್ತಿದ್ದವರು ಈಗಆಡಳಿತ ಪಕ್ಷದಲ್ಲಿರುವುದು ಸಹ ಇದಕ್ಕೆ ಒಂದುಕಾರಣವಾದರೆ, ಇನ್ನೊಂದು ಕಾರಣ ಎಲ್ಲ ಶಾಸಕರುಅಭಿವೃದ್ಧಿ ದೃಷ್ಟಿಯಿಂದ ಒಂದಾಗಿರುವುದು ಮತ್ತುಸರಿಯಾದ ಮಾರ್ಗದಲ್ಲಿ ಸಾಗಿರುವುದಾಗಿದೆ.ಐದು ದಶಕಗಳಿಂದ ಜಿಲ್ಲೆಯ ರಾಜಕೀಯನೋಡುತ್ತ ಬಂದವರಿಗೆ ಈ ಬೆಳವಣಿಗೆ ಆಶಾದಾಯಕವಾಗಿದೆ.
ನಮ್ಮ ಜಿಲ್ಲೆಗಿಂತ 500 ಕಿಮೀ ದೂರವಿರುವ ರಾಜಧಾನಿಗೆ ಶಾಸಕರೆಲ್ಲಾ ಒಂದಾಗಿ ಹೋಗದಿದ್ದರೆ ಒಂದೇ ಒಂದು ಕೆಲಸ ಆಗುವುದಿಲ್ಲ, ಮಧ್ಯೆ ಪರಿಸರ ಪಂಡಿತರು ಅಡ್ಡಗಾಲು ಹಾಕಿದರೆ ಯಾವ ಕೆಲಸವೂಆಗುವುದಿಲ್ಲ, ಆದ್ದರಿಂದ ನಾವು ಎಲ್ಲರೂಅಭಿವೃದ್ಧಿಗಾಗಿ ಒಂದು ಎಂಬ ಪರಂಪರೆಬೆಳೆಸಿದ್ದೇವೆ. ಚುನಾವಣೆಯಲ್ಲಿ ಪಕ್ಷ. ನಂತರ ಅಭಿವೃದ್ಧಿಗಾಗಿ ಎಲ್ಲರೂ ಒಂದೇ ಅನ್ನುತ್ತಿದ್ದರುದಿ| ವಿ.ಎಸ್. ಆಚಾರ್ಯ. ಅದನ್ನು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಈಗ ಕಲಿತಿದ್ದಾರೆ.
-ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.