ಧಾರಾನಾಥ ಗಂಗಾ ವಿವಾಹ ಮಹೋತ್ಸವ
ಸಾಂಪ್ರದಾಯಿಕ ಮತ್ತು ವೈದಿಕ ಆಚರಣೆಯೊಂದಿಗೆ ಕಳೆಗಟ್ಟಿತು.
Team Udayavani, Nov 6, 2021, 3:31 PM IST
ಕುಮಟಾ: ತಾಲೂಕಿನ ಕಡೆಕೋಡಿಯಲ್ಲಿ ಧಾರೇಶ್ವರದ ಶ್ರೀ ಧಾರಾನಾಥ ದೇವರ ಉತ್ಸವ ಮತ್ತು ಶಿವಗಂಗಾ ವಿವಾಹ ಕಾರ್ಯಕ್ರಮ ಪಾರಂಪರಿಕ, ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಜೃಂಭಣೆಯಿಂದ ನಡೆಯಿತು.
ಧಾರೇಶ್ವರದಲ್ಲಿ ದೋರೇಶ್ವರನಾದ ಪರಶಿವನು ದೇವಿ ಗಂಗೆಯನ್ನು ವರಿಸಿದ ಪುಣ್ಯಪರ್ವವು ಕಡೆಕೋಡಿಯ ಜೋಡಿ ವೀರಗಲ್ಲುಗಳಿರುವ ಅಶ್ವತ್ಥಕಟ್ಟೆಯಲ್ಲಿ ಸಾಂಪ್ರದಾಯಿಕ ಮತ್ತು ವೈದಿಕ ಆಚರಣೆಯೊಂದಿಗೆ ಕಳೆಗಟ್ಟಿತು.
ತಳಿರು ತೋರಣ, ದೀಪಾಲಂಕಾರಗಳಿಂದ ಸಿಂಗರಿಸಿದ ವಧು ಗಂಗೆಯ ನೈಸರ್ಗಿಕ ಕಲ್ಯಾಣ ಮಂಟಪಕ್ಕೆ ಪಂಚವಾದ್ಯದೊಂದಿಗೆ ಆಗಮಿಸಿದ ವರ ಧಾರೇಶ್ವರನ ದಿಬ್ಬಣವನ್ನು ಸ್ಥಳೀಯರು ಎದುರುಗೊಂಡು ಸಭಾ ಪೂಜೆಯೊಂದಿಗೆ ಬರಮಾಡಿಕೊಂಡರು. ಬಳಿಕ ಅಷ್ಟಾವಧಾನ ಸೇವೆಯೊಂದಿಗೆವಿವಾಹ-ಉತ್ಸವಾದಿ ಮಹಾಪೂಜೆ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಪ್ರತಿವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ವಿಶೇಷ ಘಳಿಗೆಯನ್ನು ವೀಕ್ಷಿಸಿ, ಪೂಜೆ ಸಲ್ಲಿಸುವ ಉದ್ದೇಶದಿಂದ ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ವಿವಾಹದ ಬಳಿಕ ದೋರೇಶ್ವರನೊಟ್ಟಿಗೆ ಧಾರೇಶ್ವರಕ್ಕೆ ಹೊರಟ ದೇವಿಗಂಗೆಯ ಉತ್ಸವಕ್ಕೆ ಭಕ್ತಾದಿಗಳು ಜಯಘೋಷಗೈದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.