Digitalization: ಶಿರಸಿಯಲ್ಲಿ ಭೂ ದಾಖಲೆಗಳ ಡಿಜಟಲೀಕರಣಕ್ಕೆ ಚಾಲನೆ
Team Udayavani, Feb 5, 2024, 11:33 AM IST
ಶಿರಸಿ: ತಾಲೂಕಿನ ಭೂ ದಾಖಲೆಗಳ ಡಿಜಟಲೀಕರಣಗೊಳಿಸುವ ಭೂ ಸುರಕ್ಷಾ ಯೋಜನೆಗೆ ನಗರದ ಮಿನಿ ವಿಧಾನ ಸೌಧದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿ, ಆ ಕಾಲದಲ್ಲಿ ಮಾಡಲಾದ ಭು ದಾಖಲೆಗಳು ಶಾಶ್ವತವಾಗಿ ಉಳಿಯಬೇಕು, ತಕ್ಷಣ ಸಿಗಬೇಕು, ತಿದ್ದುಪಡಿ ಮಾಡಲು ಅವಕಾಶ ಇರಬಾರದು ಎಂದು ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತರಲಾಗಿದೆ. ತಾಲೂಕಿನಲ್ಲಿ ಸುಮಾರು 3.31 ಲ ದಾಖಲೆಗಳು 100 ದಿನದಲ್ಲಿ ಸ್ಕಾನಿಂಗ್ ಆಗಲಿದೆ. ರಾಜ್ಯದ 31 ಜಿಲ್ಲೆಯ 31 ತಾಲೂಕುಗಳಲ್ಲಿ ಅನುಷ್ಠಾನ ಆಗಲಿದೆ. ಶಿರಸಿ ಪ್ರಥಮ ಹಂತದಲ್ಲಿ ಅನುಷ್ಠಾನಕ್ಕೆ ಮುಂದಾಗಿದೆ ಎಂದರು.
ರಾಜ್ಯ ಸರಕಾರದ ಈ ವಿಶಿಷ್ಟ ಯೋಜನೆ ಜಾರಿಗೆ ತಂದಿದ್ದು 14 ಲ.ರೂ. ಹಣ ನೀಡಲಿದೆ. 10 ಕಂಪ್ಯೂಟರ್ ಮೂಲಕ 10 ಡಾಟಾ ಆಪರೇಟ್ ರಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದೆ ಎಂದು ತಹಸೀಲ್ದಾರ ಶ್ರೀಧರ ಮುಂದಲಮನಿ ಹೇಳಿದರು.
ಸಹಾಯಕ ಆಯುಕ್ತೆ ಅಪರ್ಣಾ ರಮೇಶ, ಗ್ರೇಟ್ ೨ ತಹಸೀಲ್ದಾರ ಡಿ.ಆರ್.ಬೆಳ್ಳಿಮನೆ, ರಮೇಶ ಹೆಗಡೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.