ಸಮಾಜದ ಮನೋಭಾವ ಬದಲಾಯಿಸುವುದೇ ಅಂಬೇಡ್ಕರ್ ಜಯಂತಿ ಉದ್ದೇಶ : ಡಿಸಿ ಮುಲ್ಲೈ
Team Udayavani, Apr 14, 2021, 5:34 PM IST
ಕಾರವಾರ: ಸಮಾಜದ ಮಾನದಂಡಗಳಿಗೆ ಅಂಬೇಡ್ಕರ್ ಅವರನ್ನ ಹೋಲಿಸುವ ಬದಲು, ಅವರ ವಿಚಾರಧಾರೆಗಳ ಮಟ್ಟಕ್ಕೆ ಸಮಾಜವನ್ನ ಹೋಲಿಸಿ ನೋಡುವ ದಿನವಾಗಿ ಪರಿವರ್ತಿಸುವುದೇ ಅಂಬೇಡ್ಕರ್ ಜಯಂತಿಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು .
ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಯೋಚನಾ ಶಕ್ತಿಯು ಸಮಾಜವು ಹೇಗಿದೆ ಎನ್ನುವುದನ್ನುವುದರ ಆಗುಹೋಗುಗಳನ್ನ ತೋರಿಸುವ ಕನ್ನಡಿಯಂತಿತ್ತು ಎಂದರು.
ಯಾವುದೇ ವ್ಯಕ್ತಿಗೆ ಸಾಮಾಜಿಕ ಸ್ಥಾನಮಾನಗಳನ್ನ ಅವಕಾಶಗಳನ್ನ ಅವರ ಹುಟ್ಟಿನ, ಲಿಂಗದ, ಜಾತಿಯ, ಆಧಾರದಮೇಲೆ ನೀಡುವಂತದ್ದಲ್ಲ ಅದೂ ಅವರ ಪ್ರತಿಭೆಯ ಆಧಾರದಮೇಲೆ ಸಿಗುವಂತಾಗಬೇಕು. ಸಮಾಜದಲ್ಲಿ ರಾಜಕೀಯ ಸ್ವತಂತ್ರ ಅಥವಾ ರಾಜಕೀಯ ಸಮಾನತೆ ದೊರೆತಿರಬಹುದು. ಆದರೆ, ಸಮಾಜದ ಮನೋಭಾವ ಬದಲಾಗುವವರೆಗೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆ ಸಿಗುವುದಿಲ್ಲ. ಇಂತಹ ಮನೋಭಾವನೆಗಳು ಬದಲಾವಣೆಯ ಜೊತೆಗೆ ಮೊದಲು ವೈಯಕ್ತಿಕವಾಗಿ ಬದಲಾವಣೆ ಬರಬೇಕು ಆಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ಕಾಣಲು ಸಾಧ್ಯ ಎಂದರು.
ಅಪರ ಜಿಲ್ಲಾಧಿಕಾರಿ ಕ್ರಷ್ಣಮೂರ್ತಿ ಹೆಚ್.ಕೆ.ಮಾತನಾಡಿ, ಅಂಬೇಡ್ಕರ್ ಅವರು ಮೇಧಾವಿ ಹಾಗೂ ವಿದ್ಯಾವಂತ ವ್ಯಕ್ತಿ,ಇಂತವರ ಬಗ್ಗೆ ಓದಿ ತಿಳಿದುಕೊಂಡು ಅವರ ಮೌಲ್ಯಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಮಕ್ಕಳಿಗೆ ಅತ್ಯಾವಶ್ಯಕ ಎಂದರು. ಸ್ವಾತ್ಯಂತ್ರ ಹೋರಾಟದ ಸಮಯದಲ್ಲಿ ಸಮಾನತೆಗಾಗಿ ಗಾಂಧೀಜಿಯವರ ಜೊತೆಗೆ ನಡೆದ ಒಪ್ಪಂದ ಹಾಗೂ ಸಮಾನತೆಯ ಹೋರಾಟವನ್ನು ಬಳಸಿಕೊಂಡು, ಸ್ವಾತಂತ್ರ್ಯದ ಹೋರಾಟವನ್ನು ಚುರುಕುಗೊಳಿಸಲು ಮಾಡಿದ ಉಪಾಯಗಳ ಬಗ್ಗೆ ಕೂಡ ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ.ಎಮ್ ಅವರು ಅಂಬೇಡ್ಕರ್ ಅವರ ಚಿಂತನೆಗಳು ಇಂದು ಹೆಚ್ಚು ಪ್ರಸ್ತುತ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜು, ನಗರಸಭೆ ಉಪಾಧ್ಯಕ್ಷ ಪ್ರಕಾಶ್ ನಾಯ್ಕ್, ಪೌರಯುಕ್ತ ಆರ್. ಪಿ. ನಾಯ್ಕ್, ದಲಿತ ಸಂಘನೆಗಳಿಂದ ಎಲಿಷಾ ಎಕಲಪಾಟಿ, ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.