ಬರಿದಾದ ಶರಾವತಿ ಒಡಲು; ಅಪಾಯಕಾರಿಯಾಗುತ್ತಿರುವ ಸಿಗಂದೂರು ಲಾಂಚ್ ಪಯಣ
Team Udayavani, Jun 27, 2023, 4:25 PM IST
ಸಾಗರ: ಲಿಂಗನಮಕ್ಕಿ ಆಣೆಕಟ್ಟೆಯ ಶರಾವತಿ ಹಿನ್ನೀರಿನ ಭಾಗಗಳಲ್ಲಿ ಜೂನ್‌ನಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಈಗಲೂ ಲಾಂಚ್‌ನಲ್ಲಿ ಸಾವಿರಾರು ಜನರನ್ನು ಅಂಬಾರಗೋಡ್ಲು ದಡದಿಂದ ಕಳಸವಳ್ಳಿ ದಡಕ್ಕೆ ಜನರನ್ನು ಸಾಗಿಸುತ್ತಿರುವುದು ಅಪಾಯಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಶರಾವತಿ ನದಿ ಸುಮಾರು ೧೪ ವರ್ಷಗಳ ನಂತರ ಬರಿದಾಗಿ ಬತ್ತಿದೆ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ಲಾಂಚುಗಳನ್ನು ಇನ್ನು ಕೆಲವೇ ದಿನಗಳಲ್ಲಿ ನಿಲ್ಲಿಸಬೇಕಾಗಬಹುದು ಎಂದು ಒಳಜಲಸಾರಿಗೆ ಮಂಡಳಿಯ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಈ ನಡುವೆ ಹಿನ್ನೀರಿನಲ್ಲಿ ಮುಳುಗಿರುವ ಮರಗಳು ಲಾಂಚಿನ ರೇಡರ್‌ಗಳಿಗೆ ಸಿಕ್ಕಿ ಅಪಾಯ ಸಂಭವಿಸಬಹುದು ಎಂಬ ಎಚ್ಚರಿಕೆ ವ್ಯಕ್ತವಾಗಿದೆ.
ನೀರು ಕಡಿಮೆಯಾದ ಜಾಗದಲ್ಲಿ ಪ್ರಯಾಣಕ್ಕೆ ಈಗಿರುವ ದೊಡ್ಡ ಲಾಂಚುಗಳು ಯೋಗ್ಯವಲ್ಲ. ದಡಕ್ಕೆ ಚಾಚಲು ಪ್ಲಾಟ್‌ಪಾರಂಗಳು ಇಲ್ಲದ ಕಾರಣ ಇಳಿಯುವ ಜನರಿಗೆ ತೀವ್ರ ತರದ ಕಷ್ಟಗಳಾಗುತ್ತಿವೆ. ಕೆಸರಿನ ಗುಂಡಿಯಲ್ಲಿ ಇಳಿದು ದಡ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಸರು ಗದ್ದೆಯಲ್ಲಿ ಲಾಂಚು ನಿಲ್ಲಿಸಿದರೆ ಮಹಿಳೆಯರು, ಬಾಣಂತಿಯರು, ಮಕ್ಕಳು ನರಕ ಯಾತನೆಯಲ್ಲಿ ಸಂಚಾರಿಸುವಂತಾಗಿದೆ. ಬೈಕ್‌ಗಳಿಗೆ ಕೂಡ ಲಾಂಚ್‌ನಿಂದ ದಡಕ್ಕೆ ತೆರಳುವುದು ಸಾಹಸಮಯವಾಗಿ ಜೀವಭಯ ಹುಟ್ಟಿಸುವಂತಾಗಿದೆ.
ಹತ್ತಿಪ್ಪತ್ತು ಸಾವಿರ ಬಂಡವಾಳ ಹಾಕಿ ಈಗಿರುವ ಲಾಂಚ್‌ಗಳ ಬಾಗಿಲಿನಲ್ಲಿ ಮಾರ್ಪಾಡು ಮಾಡಿದರೆ ಲಾಂಚ್‌ನಿಂದ ಹತ್ತಿಳಿಯುವ ಕೆಲಸ ಸುಲಭವಾಗುತ್ತದೆ. ಜಲಸಾರಿಗೆ ಇಲಾಖೆಗೆ ತಿಂಗಳಿಗೆ ಇಪ್ಪತ್ತರಿಂದ ಮೂವತ್ತು ಲಕ್ಷ ಆದಾಯ ಬರುವ ಈ ಹೊಳೆಬಾಗಿಲು ಲಾಂಚುಗಳಿಗೆ ಹತ್ತಿಪ್ಪತ್ತು ಸಾವಿರ ಖರ್ಚು ಮಾಡಿ ಈ ಬಾಗಿಲುಗಳನ್ನು ಸರಿಮಾಡುವುದು ದೊಡ್ಡ ವಿಷಯವಲ್ಲ. ಆದರೆ ಆ ಕೆಲಸವೂ ಆಗಿಲ್ಲ. ಮುಪ್ಪಾನೆಯಲ್ಲಿ ಸುಮ್ಮನೆ ನಿಂತಿರುವ ಸಣ್ಣ ಲಾಂಚು ಹಾಗೂ ಹಸಿರುಮಕ್ಕಿಯ ಲಾಂಚುಗಳನ್ನು ಇಲ್ಲಿ ತರಿಸಿದರೆ ಬಹಳ ಒಳ್ಳೆಯದು ಎಂದು ಸ್ಥಳೀಯರು ಹೇಳುತ್ತಾರೆ.
ಈ ನಡುವೆ ಹಿನ್ನೀರಿನ ಆಸ್ಪತ್ರೆಗಳಲ್ಲಿ ಬಸುರಿ ಹೆಂಗಸರಿಗೆ, ವಿಷ ಕುಡಿದವರಿಗೆ, ಹಾವು ಕಚ್ಚಿದವರಿಗೆ ತುರ್ತು ಚಿಕಿತ್ಸೆಗಳು ದೊರೆಯುತ್ತಿಲ್ಲ. ಲಾಂಚುಗಳಲ್ಲಿ ವಾಹನ ಸಂಚಾರ ಇಲ್ಲವಾದ ಕಾರಣ ದೂರದ ಕುಂದಾಪುರ ಅಥವಾ ಹೊಸನಗರ ಒಂದೆರಡು ಗಂಟೆಗಳ ವ್ಯಯ ಮಾಡಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಆಸ್ಪತ್ರೆಗಳಿಗೆ ಒಬ್ಬ ಮಹಿಳಾ ವೈದ್ಯರನ್ನಾದರೂ ನೇಮಿಸಬೇಕಿತ್ತು. ಬೇರೆ ಕಡೆಯ ಸಣ್ಣ ಲಾಂಚು ತಂದು ಅಂಬುಲೆನ್ಸ್ ಸಂಚಾರಕ್ಕೆ ಅವಕಾಶ ಕೊಡಬೇಕಿತ್ತು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ತುರ್ತು ಗಮನ ನೀಡಬೇಕು ಎಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
ಇದನ್ನೂ ಓದಿ: Mangaluru: ಜನರ ಭಾವನೆಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ: ಕಟೀಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.