ಇ-ಜನ್ಮತಂತ್ರಾಂಶ ನಿರ್ವಹಣೆ ತರಬೇತಿ
Team Udayavani, Jan 6, 2021, 3:36 PM IST
ಕಾರವಾರ: ಜನನ-ಮರಣ ನೋಂದಣಿ ಹಾಗೂ ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತು ಜ.15 ರಿಂದ ತರಬೇತಿ ಆಯೋಜಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಕಡ್ಡಾಯ ವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ಹರೀಶಕುಮಾರ್ ಸೂಚಿಸಿದರು.
ಕಾರವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನನ, ಮರಣ ನೋಂದಣಿ ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಜನನ,ಮರಣ ನೋಂದಣಿ ಕಾರ್ಯವು ಈಗಾಗಲೇಇ-ಜನ್ಮ ತಂತ್ರಾಂಶದಲ್ಲಿ ನಡೆಯುತ್ತಿದೆ. ಹೀಗಾಗಿ ಈ ತಂತ್ರಾಂಶದ ನಿರ್ವಹಣೆ ಕುರಿತುಜ.15 ರಿಂದ ಜಿಲ್ಲೆಯಾದ್ಯಂತ ತರಬೇತಿಆಯೋಜಿಸಲಾಗಿರುವುದರಿಂದ ಜನನ-ಮರಣನೋಂದಣಿ ಹಾಗೂ ಇ-ಜನ್ಮ ತಂತ್ರಾಂಶನಿರ್ವಹಣೆಗೆ ಒಳಪಡುವ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಇಓ, ಗ್ರಾಮ ಲೆಕ್ಕಾಧಿಕಾರಿ ಹಾಗೂಡಾಟಾ ಎಂಟ್ರಿ ಆಪರೇಟರ್‌ಗಳು ಕಡ್ಡಾಯವಾಗಿತರಬೇತಿಗೆ ಹಾಜರಾಗಬೇಕು. ಜೊತೆಗೆಪ್ರತಿಯೊಬ್ಬರೂ ಕೋವಿಡ್-19 ಮುನ್ನೆಚ್ಚರಿಕೆಕ್ರಮ ಪಾಲಿಸಬೇಕು ಎಂದರು.
ಡಾಟಾ ಎಂಟ್ರಿ ಆಪರೇಟರ್‌ಗಳು ಇ-ಜನ್ಮ ತಂತ್ರಾಂಶದಲ್ಲಿ ಜನನ-ಮರಣ ನೋಂದಣಿ ಸಮಯದಲ್ಲಿ ಎಂಟ್ರಿ ಮಾಡಿದಡಾಟಾವನ್ನು ನೋಂದಣಾಧಿಕಾರಿಗಳುಕೂಲಂಕಷವಾಗಿ ಪರಿಶೀಲಿಸಿದ ನಂತರವೇಅನುಮತಿ ನೀಡಬೇಕು. ಸರಕಾರಿ,ಖಾಸಗಿ ಆಸ್ಪತ್ರೆಗಳ ವೈದ್ಯಾಧಿ ಕಾರಿಗಳು ಮರಣಕಾರಣ ವೈದ್ಯಕೀಯ ಪ್ರಮಾಣ ಪತ್ರಗಳನ್ನುಬೆಂಗಳೂರಿನಲ್ಲಿರುವ ಜನನ-ಮರಣಗಳ ಮುಖ್ಯ ನೋಂದಣಾಧಿ ಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಜನನ-ಮರಣಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಡಿಜಿಟಲ್‌ಸಹಿಯೊಂದಿಗೆ ಸಾರ್ವಜನಿಕರಿಗೆ ವಿತರಿಸಬೇಕು. ಡಿಎಸ್‌ಸಿ ಎಕ್ಸ್‌ಪೈರ್ ಆಗುವ ಪೂರ್ವದಲ್ಲಿಯೇ ನವೀಕರಣ ಮಾಡಿಕೊಳ್ಳಲು ಕ್ರಮ ವಹಿಸಬೇಕು.ಜನನ-ಮರಣ ನೋಂದಣಿ ವ್ಯವಸ್ಥೆಸು ವ್ಯವಸ್ಥಿತವಗಿ ನಡೆಯಲು ಹಾಗೂ ವಿವಿಧಇಲಾಖೆಗಳ ಸಮನ್ವಯತೆಯಿಂದ ನೋಂದಣಿಕಾರ್ಯ ಶೇ.100 ರಷ್ಟು ಉತ್ತಮ ಪಡಿಸುವ ಉದ್ದೇಶದಿಂದ ಸರಕಾರ ತಾಲೂಕ ಮಟ್ಟದಸಮನ್ವಯ ಸಮಿತಿ ತಚಿಸಿದೆ. ಈ ಸಮಿತಿ ಪ್ರತಿತಿಂಗಳು ಸಭೆ ನಡೆಸುವ ಮೂಲಕ ಜನನ-ಮರಣಘಟನೆಗಳು ಬಿಟ್ಟು ಹೋಗದಂತೆ ಹಾಗೂ ಶೇ.100ರಷ್ಟು ನೋಂದಣಿಯಾಗುವಂತೆ ಕ್ರಮವಹಿಸಬೇಕು. ಜನನ-ಮರಣ ನೋಂದಣಿ ಮತ್ತು ಪ್ರಮಾಣ ಪತ್ರ ನೀಡಿಕೆಗಳಲ್ಲಿ ಸಂಗ್ರಹಿಸಲಾಗುವ ಶುಲ್ಕವನ್ನು ರಾಜಸ್ವ ಲೆಕ್ಕಶೀರ್ಷಿಕೆ 1475ಕ್ಕೆ ಜಮಾ ಮಾಡಬೇಕು.2021ನೇ ಸಾಲಿಗೆ ಜನನ-ಮರಣ ಖಾಲಿನಮೂನೆಗಳನ್ನು ಈಗಾಗಲೇ ಪೂರೈಸಲಾಗಿದ್ದುಮತ್ತು ಅವಶ್ಯಕತೆಯಿದ್ದಲ್ಲಿ ಸಂಬಂಧಪಟ್ಟಕಚೇರಿಗೆ ಬೇಡಿಕೆ ಸಲ್ಲಿಸಿ ಪಡೆದುಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್. ಕೆ., ಜಿಪಂ ಸಿಇಓ ಪ್ರಿಯಂಕಾ ಎಂ., ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂತಾಲೂಕು ಮಟ್ಟದ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.