ರೇಷನ್‌ಗಾಗಿ ಇ-ಕೆವೈಸಿ ಸಲ್ಲಿಕೆ ಕಡ್ಡಾಯ

•ಪಡಿತರ ಧಾನ್ಯ ಅಂಗಡಿ ಎದುರು ಸಾಲುಗಟ್ಟಿ ನಿಂತ ಸಾರ್ವಜನಿಕರು

Team Udayavani, Jun 17, 2019, 3:25 PM IST

uk-tdy-4..

ಅಂಕೋಲಾ: ರೇಷನ್‌ ಅಂಗಡಿಯಲ್ಲಿ ಇ-ಕೆವೈಸಿ ಸಲ್ಲಿಸುತ್ತಿರುವ ಪಡಿತರ ಕಾರ್ಡದಾರರು.

ಅಂಕೋಲಾ: ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗೆ ಹೋಗಿ ತಮ್ಮ ಪಡಿತರ ಕಾರ್ಡ್‌ನಲ್ಲಿರುವ ಎಲ್ಲ ಸದಸ್ಯರ ಬೆರಳಚ್ಚು ನೀಡಿ ಇ-ಕೆವೈಸಿ ಮಾಡಿಸಲು ರೇಷನ್‌ ಅಂಗಡಿ ಎದುರು ಜಮಾಯಿಸುತ್ತಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಆದೇಶದನ್ವಯ ಇ-ಕೆವೈಸಿ ಅಪ್‌ಲೋಡ್‌ ಕಾರ್ಯಗಳು ತಾಲೂಕಿನ ಎಲ್ಲಾ ರೇಷನ್‌ ಅಂಗಡಿಗಳಲ್ಲಿ ಆರಂಭವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ನಿಯಮದಂತೆ ಅಂತ್ರ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್‌ ಮೂಲಕ ರೇಷನ್‌ ಅಂಗಡಿಯಲ್ಲಿ ಆಹಾರಧಾನ್ಯ ಪಡೆಯುತ್ತಿರುವವರು ಇ-ಕೆವೈಸಿ ಅನ್ನು ಜೂ.1 ರಿಂದ ಜು.31ರ ಒಳಗಾಗಿ ತಮ್ಮ ಕುಟುಂಬ ಸದಸ್ಯರ ಆನ್‌ಲೈನ್‌ನಲ್ಲಿ ಅಪಲೋಡ್‌ ಮಾಡಬೇಕಾಗಿದೆ. ಇದರ ಜೊತೆಯಲ್ಲಿಯೆ ಕಾರ್ಡ್‌ನಲ್ಲಿ ಬದಲಾವಣೆ ತಂದಿದ್ದು ಮನೆಯ ಯಜಮಾನಿ ಮುಖ್ಯಸ್ಥೆಯಾಗಿ ಮಾಡಲಾಗುತ್ತಿದೆ.

ಪರ ಊರಿನಲ್ಲಿರುವ ಮತ್ತು ಎರಡೆರಡು ರೇಷನ್‌ ಕಾರ್ಡ್‌ ಹೊಂದಿರುವವರು, ಮೃತಪಟ್ಟವರು ಕಾರ್ಡ್‌ನಲ್ಲಿ ಹೆಸರು ಉಳಿದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಅಂತಹದನ್ನು ಹೊರಹಾಕಲು ಮತ್ತು ಅಕ್ರಮವನ್ನು ತಪ್ಪಿಸಲು ಬೆರಳಚ್ಚು ಪಡೆಯಲಾಗುತ್ತಿದೆ. ಕಾರ್ಡ್‌ನಲ್ಲಿ ಹೆಸರಿರುವ ಎಲ್ಲರೂ ಬೆರಳಚ್ಚು ನೀಡುವುದು ಕಡ್ಡಾಯವಾಗಿದೆ.

ತಾಲೂಕಿನಲ್ಲಿ ಒಟ್ಟೂ 35 ರೇಷನ್‌ ಅಂಗಡಿಯಲ್ಲಿ ಇ-ಕೆವೈಸಿ ಆರಂಭವಾಗಿದೆ. 28161 ಪಡಿತರ ಕಾರ್ಡ್‌ ತಾಲೂಕಿನಲ್ಲಿದ್ದು ಅದರಲ್ಲಿ ಅಂತ್ರ್ಯೋದಯ 944, ಬಿಪಿಎಲ್ 25077 ಮತ್ತು ಎಪಿಎಲ್ 2140 ಕಾರ್ಡುದಾರರು ಇದ್ದಾರೆ.

ಸರ್ವರ್‌ ಸಮಸ್ಯೆ: ಜೂ.1 ರಿಂದ ಇ-ಕೆವೈಸಿ ಕಾರ್ಯ ತಾಲೂಕಿನ ಎಲ್ಲಾ ರೇಷನ್‌ ಅಂಗಡಿಗಳಲ್ಲಿ ಆರಂಭವಾಗಿದ್ದು ಎಲ್ಲೆಡೆ ಸರ್ವರ್‌ ತೊಂದರೆ ಕೊಡುತ್ತಿರುವ ಕಾರಣ ಕಾರ್ಡುದಾರರ ಇ-ಕೆವೈಸಿ ಸರಿಯಾಗಿ ಆಗುತ್ತಿಲ್ಲ. ಇದರಿಂದ ಕಾರ್ಡುದಾರರು ಪ್ರತಿನಿತ್ಯ ತಮ್ಮ ಕುಟುಂಬವನ್ನು ಕರೆದುಕೊಂಡು ರೇಷನ್‌ ಅಂಗಡಿಗೆ ಅಲೆಯುತ್ತಿರುವುದು ಕಂಡುಬರುತ್ತಿದೆ. ನಿಗದಿತ ಅವಧಿಯೊಳಗೆ ಅಪ್‌ಲೋಡ್‌ ಮಾಡದಿದ್ದಲ್ಲಿ ಆಗಸ್ಟ್‌ ತಿಂಗಳಿನಿಂದ ಆಹಾರ ಧಾನ್ಯ ವಿತರಣೆ ಸ್ಥಗಿತಗೊಳ್ಳುತ್ತದೆ.

ಅಂಗಡಿ ಮಾಲಕರಿಗೆ ತರಬೇತಿ: ಇ-ಕೆವೈಸಿ ಮಾಡುವ ಕುರಿತು ತಾಲೂಕಿನ 35 ರೇಷನ್‌ ಅಂಗಡಿ ಕಂಪ್ಯೂಟರ್‌ ಆಪೇಟರ್‌ಗಳಿಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತರಬೇತಿ ನೀಡಲಾಗಿದೆ. ಕಾರ್ಡುದಾರರಿಗೆ ಯಾವುದೇ ತೊಂದರೆ ಆಗದಂತೆ ಇ-ಕೆವೈಸಿ ಮಾಡಿಸಿಕೊಳ್ಳಲು ಅವರಿಗೆ ಸೂಚಿಸಲಾಗಿದ್ದು ಅಂಗಡಿಯವರು ಕಾರ್ಡುದಾರರಿಗೆ ಮಾಹಿತಿ ನೀಡಿ ಕಾರ್ಯ ಆರಂಭಿಸಿದ್ದಾರೆ.

ಟಾಪ್ ನ್ಯೂಸ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು

Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

10

Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್

9

Bunts Hostel, ಕರಂಗಲ್ಪಾಡಿ ಜಂಕ್ಷನ್‌: ಶಾಶ್ವತ ಡಿವೈಡರ್‌ ನಿರ್ಮಾಣ ಕಾಮಗಾರಿ

8

Mangaluru: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.