![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Oct 23, 2022, 7:54 PM IST
ಶಿರಸಿ: ಗ್ರಹಣಮೋಕ್ಷ ಕಾಲಕ್ಕೆ ಉಂಟಾದ ಗೊಂದಲಕ್ಕೆ ಸಂಬಂಧಿಸಿ ಜ್ಯೋತಿಷ್ಯಾಸ್ತ್ರದ ವಿದ್ವಾಂಸರು ನೀಡಿದ ಸ್ಪಷ್ಟ ಅಭಿಪ್ರಾಯ ವಿಳಂಬವಾಗಿ ಸಿಕ್ಕಿದ್ದರಿಂದ ಮಂಗಳವಾರ ಸಂಭವಿಸಲಿರುವ ಸೂರ್ಯಗ್ರಹಣದ ವಿಷಯದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಮರು ಪ್ರಕಟಣೆ ನೀಡಿದೆ.
ಜ್ಯೋತಿಷ್ಯಶಾಸ್ತ್ರದ ವಿದ್ವಾಂಸರ ಮತ್ತು ಖಗೋಳ ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯ ತಡವಾಗಿ ಸಿಕ್ಕಿದ್ದರಿಂದ ಈ ತಿದ್ದುಪಡಿಯನ್ನು ಕೊಡಬೇಕಾಗಿ ಬಂದಿದೆ ಎಂದೂ ಶ್ರೀಮಠ ತಿಳಿಸಿದೆ. ಅ.25 ಮಂಗಳವಾರ ಸಂಜೆ 5 ಘಂಟೆ 4 ನಿಮಿಷಕ್ಕೆ ಸೂರ್ಯಗ್ರಹಣದ ಸ್ಪರ್ಶಕಾಲವಾಗಲಿದೆ. 5-48 ನಿಮಿಷಕ್ಕೆ ಮಧ್ಯಕಾಲವಾಗಿದೆ. 6-29 ನಿಮಿಷಕ್ಕೆ ಮೋಕ್ಷಕಾಲ ಇದೆ.
ಆದ್ಯಂತ ಪುಣ್ಯಕಾಲ 1 ಘಂಟೆ 25 ನಿಮಿಷಗಳಾಗಿವೆ. ಸೂರ್ಯಾಸ್ತದ ನಂತರವೂ ಗ್ರಹಣ ಮುಂದುವರೆದಿದೆ. ಆದ್ದರಿಂದ ಗ್ರಹಣಮೋಕ್ಷದ ನಂತರ ಸ್ನಾನ ಮಾಡಿ, ಲಘು ಉಪಹಾರವನ್ನು ಸ್ವೀಕರಿಸಬಹುದಾಗಿದೆ ಎಂದಿದೆ. ಮರುದಿನ ಬೆಳಗ್ಗೆ ಸೂರ್ಯೋದಯದ ನಂತರ ಸೂರ್ಯಬಿಂಬ ನೋಡಿ, ಸ್ನಾನ ಮಾಡಿ ಭೋಜನ ಮಾಡಬೇಕಿದೆ. ಈ ಎರಡು ಬದಲಾವಣೆಗಳೊಂದಿಗೆ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಗಳವರ ಅಪ್ಪಣೆಯಂತೆ ಪ್ರಕಟಣೆ ನೀಡಲಾಗಿದೆ ಎಂದು ತಿಳಿಸಲಾಗಿದೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.