![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jan 20, 2024, 12:02 PM IST
ಶಿರಸಿ: ಶಿಕ್ಷಣ ಇಲಾಖೆಯ ವಿವೇಕ ಯೋಜನೆಯಡಿ 104 ಕಡೆ ಶಾಲೆಗಳಲ್ಲಿ ನಿರ್ಮಾಣಗೊಂಡ ನೂತನ ಶಾಲಾ ಕೊಠಡಿಯನ್ನು ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅತಿಥಿಯಾಗಿ ಬಂದು ಜ.20ರ ಶನಿವಾರ ಉದ್ಘಾಟಿಸಿದರು.
ನಿಗದಿತ ಅಂಕೋಲಾ ಕಾರ್ಯಕ್ರಮಕ್ಕೆ ಹೊರಟ ವೇಳೆ ನೂತನ ಉರ್ದು ಶಾಲೆಯ ಕೊಠಡಿ ಉದ್ಘಾಟಿಸಿ ಕೊಟ್ಟರು.
ಪ್ರಾರಂಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶುಕ್ರವಾರ ರಾತ್ರಿ ಶಿರಸಿಗೆ ವಾಸ್ತವ್ಯಕ್ಕೆ ಬಂದಾಗ ಕೊಠಡಿ ಉದ್ಘಾಟನೆ ಪ್ರಸ್ತಾವನೆ ಬಂತು. ಚಿಕ್ಕ ಕೊಠಡಿ, ಉದ್ಘಾಟಿಸಿ ಬರುವೆ ಎಂದಾಗ, ನನ್ನ ಇಲಾಖೆ ಕಾರ್ಯಕ್ರಮ. ಸಣ್ಣದಾದರೇನು? ದೊಡ್ಡದಾದರೇನು ಎಂದು ಮಧು ಬಂಗಾರಪ್ಪ ಆಗಮಿಸಿದರು ಎಂದು ಬಣ್ಣಿಸಿದರು.
ಇದಕ್ಕೂ ಮೊದಲು ಮಾತನಾಡಿದ ಡಿಡಿಪಿಐ ಬಸವರಾಜ್ ಪಾರಿ, ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅನೇಕ ಕ್ರಮಗಳಿವೆ. ಆದರೆ, ಅವರೇ ಶಿಕ್ಷಣ ಪ್ರೀತಿಯಿಂದ ಆಗಮಿಸಿದ್ದು ನಮ್ಮ ಭಾಗ್ಯ ಎಂದರು.
ಭೀಮಣ್ಣ ಶಾಸಕರು ಆದ ಮೇಲೆ ಪ್ರಥಮ ಬಾರಿಗೆ ಸರಕಾರಿ ಕಾರ್ಯಕ್ರಮದಲ್ಲಿ ಅವರ ಕ್ಷೇತ್ರದಲ್ಲಿ ಭಾಗಿಯಾದ ಸಂತೋಷ. ಮಕ್ಕಳಿಗೆ ಶಿಕ್ಷಣ ಕೊಡುವುದು ದೇವರ ಕೆಲಸ. ಮುಂದಿನ ವರ್ಷ 500 ಕೆಪಿಎಸ್ ಮಾದರಿ ಶಾಲೆ ಆರಂಭಿಸಲು ಯೋಜಿಸಿದ್ದೇವೆ. ಎಲ್ ಕೆಜಿಯಿಂದ ಪಿಯುಸಿ ತನಕ 14 ವರ್ಷ ಮಗು ಒಂದೇ ಕಡೆ ಓದುವಂತೆ ಆಗಬೇಕು ಎಂದರು.
ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ದೀಪಾ ಮಹಾಲಿಂಗಣ್ಙವರ, ದಯಾನಂದ ನಾಯಕ, ಖಾದರ ಆನವಟ್ಟಿ, ಎಸ್.ಕೆ.ಭಾಗವತ, ಇಕ್ಬಾಲ್ ಬಿಳಗಿ ಇತರರು ಇದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.