ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
ಒಬ್ಬೊಬ್ಬ ರೈತ ಕನಿಷ್ಠ 50 ಸಾವಿರ ಸಸಿಗಳನ್ನು ನಾಟಿ ಮಾಡತೊಡಗಿದ್ದಾರೆ.
Team Udayavani, Oct 30, 2024, 5:45 PM IST
ಉದಯವಾಣಿ ಸಮಾಚಾರ
ಶಿರಸಿ: ಇಂದಿನ ಕಾಲದಲ್ಲಿ ರೈತರ ಮಕ್ಕಳು ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗುವುದು ಸಹಜವಾಗಿದೆ. ಸಂಸಾರ ನಿರ್ವಹಣೆಗೆ ಉದ್ಯೋಗ ಅನಿವಾರ್ಯವೂ ಆಗಿದೆ. ಆದರೆ ಈ ರೀತಿ ನಗರಗಳಲ್ಲಿ ವಾಸವಿರುವ ಅನೇಕ ಕುಟುಂಬ ಕೃಷಿ ಭೂಮಿ ಮಾರಾಟ ಮಾಡಲು ಮುಂದಾಗಿವೆ. ಪಾರಂಪರಿಕವಾಗಿ ನಮಗೆ ಹಿರಿಯರು ನೀಡಿರುವ ಭೂಮಿ ಉಳಿಸಿಕೊಳ್ಳಬೇಕೆನ್ನುವ ಮನೋಭಾವನೆ ಮಕ್ಕಳಲ್ಲಿ ಮೂಡಿಸಬೇಕು ಎಂದು ಟಿಆರ್‌ಸಿ ಅಧ್ಯಕ್ಷರು ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಕೃಷ್ಣ ಶ್ರೀಪಾದ ಹೆಗಡೆ ಹೇಳಿದರು.
ಅವರು ತೋಟಗಾರಿಕಾ ಇಲಾಖೆ, ಟಿಆರ್‌ಸಿ, ರಾಗಿಹೊಸಳ್ಳಿ ಸೇವಾ ಸಹಕಾರಿ ಸಂಘ ಮತ್ತು ಪ್ರಿಂಪ್ಕೋಸ್ ಕೋ-ಆಪರೇಟಿವ್ ಸೊಸೈಟಿ, ಬಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಡಲದ ವಿವೇಕಾನಂದ ಸಭಾಭವನದಲ್ಲಿ ನಡೆದ ಅಡಕೆ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಜಾಗೃತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಹಿಂದೆ ಎಲ್ಲ ರೈತರಲ್ಲಿಯೂ ಸಾವಯವ ಪದ್ಧತಿಯಲ್ಲಿ ಅಡಕೆ ತೋಟ ನಿರ್ವಹಿಸುವ ಪದ್ಧತಿ ರೂಢಿಯಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಅಡಕೆಗೆ ನಾನಾ ತರಹದ ರೋಗಗಳು ಕಾಣಿಸಿಕೊಳ್ಳತೊಡಗಿವೆ.
ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಮಣ್ಣಿಗೆ ಅವಶ್ಯವಿರುವ ಪೋಷಕಾಂಶಗಳು ಪ್ರಕೃತಿದತ್ತವಾಗಿಯೇ ದೊರೆಯುತ್ತದೆ. ಬೆಟ್ಟದಲ್ಲಿನ ಹಸಿ ಸೊಪ್ಪು ಮುಚ್ಚಿಗೆಯಿಂದ ತೋಟಕ್ಕೆ ಅನೇಕ ರೀತಿಯಲ್ಲಿ ಫಲವತ್ತತೆ ಸಿಗುತ್ತದೆ. ಆದರೆ ಈಗ ಬಹುತೇಕ ಕಡೆ ಸೊಪ್ಪಿನ ಬದಲಾಗಿ ಮಲ್ಲಿಂಗ್ ಶೀಟ್ ಗಳನ್ನು ಬಳಸಲಾಗುತ್ತಿದೆ. ಇವೆಲ್ಲವೂ ಸಹ ಒಂದಿಲ್ಲೊಂದು ರೀತಿ ರೋಗ ಬಾಧೆಗೆ ಕಾರಣವಾಗಿದೆ ಎಂದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಜಿಲ್ಲೆಯಲ್ಲಿ ಸುಮಾರು 36 ಸಾವಿರ ಎಕರೆ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಕಳೆದ ಸಾಲಿನಲ್ಲಿ ರಾಜ್ಯಾದ್ಯಂತ ಸುಮಾರು 75 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ಅಡಕೆ ತೋಟ ನಿರ್ಮಿಸಲಾಗಿದೆ ಹಾಗೂ ದೇಶದಾದ್ಯಂತ 1.24 ಲಕ್ಷ ಎಕರೆ ಹೊಸ ತೋಟ ನಿರ್ಮಿಸಲಾಗಿದೆ. ಎಲೆಚುಕ್ಕೆ ರೋಗ ಇತರ ರೋಗಗಳಿಂದ ಇದರಲ್ಲಿ ಶೇ.50 ರಷ್ಟು ನಷ್ಟವಾದರೂ ಇನ್ನುಳಿದ 50 ರಷ್ಟು ಅಡಕೆ ಇನ್ನು ಐದಾರು ವರ್ಷಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತವೆ.
ನಮ್ಮ ಜಿಲ್ಲೆಯ ಪ್ರತಿ ಅಡಕೆ ಬೆಳೆಗಾರ ಸರಾಸರಿ ಅಡಕೆ ಕ್ಷೇತ್ರ 32 ಗುಂಟೆ. ಇದನ್ನು ವಿಸ್ತರಿಸಲು ಜಾಗದ ಕೊರತೆ ಸಹ ಇದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ ಭಾಗದಲ್ಲಿ ಅಡಕೆ ತೋಟ ನಿರ್ಮಿಸುತ್ತಿರುವ ಒಬ್ಬೊಬ್ಬ ರೈತ ಕನಿಷ್ಠ 50 ಸಾವಿರ ಸಸಿಗಳನ್ನು ನಾಟಿ ಮಾಡತೊಡಗಿದ್ದಾರೆ. ಈ ಅಡಕೆ ಮಾರುಕಟ್ಟೆ ಪ್ರವೇಶಿಸಿದ ನಂತರ ನಮ್ಮ ಭಾಗದ ರೈತರು ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಸಿಪಿಸಿಆರ್‌ಐ ಕಾಸರಗೋಡಿನ ಪ್ರಧಾನ ವಿಜ್ಞಾನಿ ಡಾ| ವಿನಾಯಕ ಹೆಗಡೆ, ಎಲೆಚುಕ್ಕೆ ರೋಗವು ಶಿಲೀಂಧ್ರದಿಂದ ಬರುವ ರೋಗ. ಇದು ಗಾಳಿ ಮೂಲಕವೂ ಹರಡುವುದರಿಂದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಬಹುಬೇಗ ಪಸರಿಸುತ್ತದೆ. ನಾವು ಕೋವಿಡ್ ಸಂದರ್ಭದಲ್ಲಿ ಹೇಗೆ ಎಲ್ಲರೂ ಒಗ್ಗೂಡಿ ಸೋಂಕನ್ನು ಎದುರಿಸಿದ್ದೆವೋ ಅದೇ ಮಾದರಿಯಲ್ಲಿ ಎಲ್ಲರೂ ಒಂದಾಗಿ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಬಂಡಲ ಹಾಲು ಸಂಘದ ಅಧ್ಯಕ್ಷ ವಿಶ್ವನಾಥ ಮರಾಠಿ ಮಾತನಾಡಿದರು. ಟಿಆರ್‌ಸಿ ನಿರ್ದೇಶಕ ಹಾಗೂ ಪ್ರಿಂಪ್ಕೋಸ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷಕುಮಾರ ಗೌಡರ್ ಕಸಗೆ ಸ್ವಾಗತಿಸಿದರು.
ಟಿಆರ್‌ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಕುರುವಣಿಗೆ ನಿರ್ವಹಿಸಿದರು. ರಾಗಿಹೊಸಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಹೆಗಡೆ ವಂದಿಸಿದರು. ಮಂಜಗುಣಿ ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಹೆಗಡೆ ಹಾಗೂ ಟಿಆರ್‌ಸಿ ನಿರ್ದೇಶಕರಾದ ಎಸ್. ಎನ್. ಹೆಗಡೆ ಹಾವಳಿಮನೆ, ವಿN°àಶ್ವರ ರಾಮಚಂದ್ರ ಹೆಗಡೆ ಅಗಾÕಲ ಕಿಬ್ಬಳ್ಳಿ, ಟಿಆರ್‌ಸಿ ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಕಿರಣ ಭಟ್
ಮಾವಿನಕೊಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
Baba Budan Dargah: ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.