ಕುತೂಹಲಕ್ಕೆ ಎಡೆಮಾಡಿದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಸಹಕಾರಿ ಸಂಘದ ಚುನಾವಣೆ
Team Udayavani, Dec 14, 2021, 2:58 PM IST
ದಾಂಡೇಲಿ: ನಗರದ ಪ್ರತಿಷ್ಟಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಬಂಗೂರನಗರದಲ್ಲಿರುವ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಎಂಪ್ಲಾಯಿಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯ ಕುರಿತಂತೆ ಈಗಾಗಲೆ ಪ್ರಕ್ರಿಯೆ ಆರಂಭಗೊಂಡು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಕಾಗದ ಕಾರ್ಖಾನೆಯ ಆವರಣದಲ್ಲಿ ಎಲ್ಲಿ ನೋಡಿದರೂ ಸೊಸೈಟಿ ಎಲೆಕ್ಷನ್ ಬಗ್ಗೆ ಚರ್ಚೆಯಾಗತೊಡಗಿದೆ. ಬಹಳಷ್ಟು ವರ್ಷಗಳ ಇತಿಹಾಸವಿರುವ ಈ ಸಂಘದ ಚುನಾವಣೆಗೆ ವೈಭವದ ಮೆರುಗನ್ನು ತಂದಿರುವವರು ದಿವಾಕರ ನಾಯ್ಕ ಅವರು. ತನ್ನದೇ ಆದ ಪ್ರಭಾವದ ಮೂಲಕ ಮತದಾರರನ್ನು ಒಲೈಸಿ ಸತತ ನಾಲ್ಕು ಸಲ ನಿಂತು ಗೆಲುವು ಸಾಧಿಸಿ ಸೋಲಿಲ್ಲದ ಸರದಾರ ಎಂಬ ಬಿರುದಿಗೆ ಪಾತ್ರರಾಗಿದ್ದರು. ಆದರೆ ಈ ಬಾರಿ ನಿವೃತ್ತಿಯ ಅಂಚಿನಲ್ಲಿರುವುದರಿಂದ ಸ್ಪರ್ಧೆಯಿಂದ ದೂರವುಳಿದಿದ್ದಾರೆ.
ಒಟ್ಟು 1842 ಸದಸ್ಯರನ್ನೊಳಗೊಂಡ ಈ ಸಹಕಾರಿ ಸಂಘದ ಆಡಳಿತ ಮಂಡಳಿಯಲ್ಲಿ 13 ಸ್ಥಾನಗಳಿದ್ದು, ಇದರಲ್ಲಿ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರು ಸಾಮಾನ್ಯ ಎ ಕ್ಷೇತ್ರದಿಂದ ಪ್ರತಿಸಲವು ಅವಿರೋಧವಾಗಿ ಆಯ್ಕೆಯಾಗುತ್ತಿರುವುದು ವಿಶೇಷ ಮತ್ತು ಇದು ಹಿಂದಿನಿಂದಲೂ ಬಂದಂತಹ ಒಂದು ಕಟ್ಟಳೆಯು ಆಗಿದೆ. ಈ ಭಾರಿ ಮಹಿಳಾ ಮೀಸಲು ಕ್ಷೇತ್ರದಿಂದ ಚಂದ್ರಲೀಲಾ ಮತ್ತು ನಿರ್ಮಲಾ ಡಿಸೋಜಾ ಅವರುಗಳು ಈಗಾಗಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನೂಳಿದ ಹತ್ತು ಸ್ಥಾನಗಳಿಗೆ ಒಟ್ಟು 46 ಅಭ್ಯರ್ಥಿಗಳು ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ. ಹಿಂದುಳಿದ ಎ ಒಂದು ಸ್ಥಾನಕ್ಕೆ 4 ಅಭ್ಯರ್ಥಿಗಳು, ಹಿಂದುಳಿದ ಬಿ ಮೀಸಲು ಒಂದು ಸ್ಥಾನಕ್ಕೆ 4, ಪರಿಶಿಷ್ಟ ಜಾತಿಯ 1 ಸ್ಥಾನಕ್ಕೆ 7 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ 4 ಸ್ಪರ್ಧಿಗಳು ಕಣದಲ್ಲಿದ್ದಾರೆ. ಇನ್ನೂ ಬಹಳ ಕುತೂಹಲಕರವಾದ 6 ಸಾಮಾನ್ಯ ಬಿ ಸ್ಥಾನಕ್ಕೆ ಒಟ್ಟು 27 ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಇದೇ ಡಿ:15 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಬಂಗೂರನಗರ ಡಿಲಕ್ಸ್ ಸಭಾಭವನದಲ್ಲಿ ಮತದಾನ ನಡೆಯಲಿದ್ದು, ಅಂದೇ ಎಣೆಕೆ ಕಾರ್ಯ ಮುಗಿದು ಅಭ್ಯರ್ಥಿಗಳ ಘೋಷಣೆಯಾಗಲಿದೆ. ಸಹಕಾರಿ ಸಂಘಗಳ ಅಧಿಕಾರಿ ಎಂ.ಬಿ.ಪತ್ತಾರ ಅವರು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಖೆಯ ಕಾರ್ಯದರ್ಶಿ ಪ್ರಮೋದ್ ಕುಡ್ತಲಕ್ಕರ್ ಅವರು ಸಹಕರಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.