ಪ್ಲಾಸ್ಟಿಕ್- ತ್ಯಾಜ್ಯಗಳಿಂದಾಗಿ ಪರಿಸರ ನಾಶ
ಕಸ ವಿಲೇವಾರಿ ಘಟಕಕ್ಕಿಲ್ಲ ಗೇಟ್-ಪ್ಲಾಸ್ಟಿಕ್‌ಗಳಿಂದ ಜಾನುವಾರುಗಳಿಗೆ ಅಪಾಯ
Team Udayavani, Jun 2, 2022, 12:03 PM IST
ಯಲ್ಲಾಪುರ: ಪಟ್ಟಣದ ಕಸದ ವಿಲೇವಾರಿ ಘಟಕ ಎಲ್ಲಾ ನೀತಿ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದೆ. ಘಟಕ ಮಾಡಿದಾಗಿನಿಂದ ಹಿಡಿದು ಇವತ್ತಿನ ವರೆಗೂ ಕಾಮಗಾರಿ ಯಾವುದೇ ಮಾಹಿತಿ ಇಲ್ಲ. ಆವರಣದೊಳಗಿದ್ದ ಭಾರೀ ಪ್ರಮಾಣದಲ್ಲಿ ಬೆಲೆಬಾಳುವ ಮರಗಳನ್ನು ತೆಗೆದು ಉಪಯೋಗಿಸದೇ ಸರಕಾರಕ್ಕೆ ಬರುವ ಆದಾಯಕ್ಕೆ ಕತ್ತರಿ ಹಾಕಲಾಗಿದೆ. ಅಷ್ಟೇ ಅಲ್ಲದೆ ಕಸಗಳಿಗೆ ಬೆಂಕಿ ಹಾಕುವ ಮೂಲಕ ಒಳಗಿದ್ದ ನೂರಾರು ಮರಗಳ ಮಾರಣ ಹೋಮ ಮಾಡಲಾಗಿದೆ. ಹೀಗೆ ಒಣಗಿಸಿ ಬಿದ್ದ ಮರಗಳಿಗೆ ಬೆಂಕಿಯಿರಿಸಿ ಬೂದಿ ಮಾಡಿ ಮರದ ಬುಡಚಿಯ ಲವಲೇಶವೂ ಇಲ್ಲದಂತೆ ಮಾಡಲಾಗಿದೆ. ಇಷ್ಟಕ್ಕೂ ಅರಣ್ಯ ಇಲಾಖೆ ಈ ಬಗ್ಗೆ ಯಾಕೆ ಕ್ರಮ ವಹಿಸಿಲ್ಲ ಎಂಬುದು ಸಾರ್ವಜನಿಕರ ಕಳಕಳಿಯ ಪ್ರಶ್ನೆಯಾಗಿದೆ. ಕಸ ವಿಲೇವಾರಿ ಘಟಕಕ್ಕೆ ಸರಿಯಾದ ಗೇಟ್ ಇಲ್ಲ. ಗ್ರಾಮೀಣ ಭಾಗದ ದನಕರುಗಳು ಒಳಹೋಗಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿಂದು ರೋಗಕ್ಕೆ ತುತ್ತಾಗುತ್ತಿವೆ.
ಕಸವಿಲೇವಾರಿ ಘಟಕ ನಿರ್ಮಾಣ ಮಾಡುವಾಗ ಅನೇಕ ನಿಬಂಧನೆ ಹಾಕಿದ್ದರೂ ಅದನ್ನೂ ಸಂಪೂರ್ಣ ಗಾಳಿಗೆ ತೂರಲಾಗಿದೆ ಎಂದು ಆನಗೋಡ ಗ್ರಾಪಂ ಸದಸ್ಯರು ದೂರಿದ್ದಾರೆ.
ಕಸಕ್ಕೆ ಬೆಂಕಿ ಹಾಕದೆ ಜೈವಿಕ ಗೊಬ್ಬರ ಮಾಡಬೇಕು ಎಂಬ ನಿಯಮವಿದೆ. ವೈಜ್ಞಾನಿಕವಾಗಿ ಸಂಸ್ಕರಿಸಿ ಆದಾಯ ತರುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕಿತ್ತು. ಅದನ್ನು ಬಿಟ್ಟು ಬೆಂಕಿ ಹಾಕಿ, ಇರುವ ಮರವನ್ನು ಸುಟ್ಟು ನಾಶ ಮಾಡುತ್ತಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಹಿಂದೆ ಮಾನವಹಕ್ಕು ಆಯೋಗಕ್ಕೆ ಸಾರ್ವಜನಿಕರು ದೂರಿದಾಗ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸೂಚಿಸಿ ಹೋಗಿದ್ದರು. ಆದರೆ ಅದಲ್ಲೆವನ್ನು ಪಪಂ ಅಧಿಕಾರಿಗಳು ಮರೆತಂತಿದೆ. ಒಂದಷ್ಟು ಕಾಮಗಾರಿ ನಡೆದರೂ ಯಾವುದೇ ನಾಮಫಲಕವಿಲ್ಲ. ಘಟಕಕ್ಕೆ ಬೇಕಾಬಿಟ್ಟಿ ಸರಕಾರದ ಹಣ ಹಾಕಲಾಗಿದ್ದು ಹಣದ ಸದುಪಯೋಗವಾಗಿಲ್ಲ ಎಂಬ ದೂರು ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.