ಸಂಭ್ರಮ-ವಿಶಿಷ್ಟತೆಯ ಹೋಳಿ
Team Udayavani, Mar 10, 2020, 4:54 PM IST
ಅಂಕೋಲಾ: ಹೋಳಿ ಹಬ್ಬದ ಅಂಗವಾಗಿ ಬ್ರಿಟಿಷ ಆಡಳಿತದಿಂದಲೂ ನಡೆದು ಬಂದ ತಾಲೂಕಿನ ವಿಶೇಷ ಆಕರ್ಷಣೆಯಾದ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಮತ್ತು ವಿವಿಧ ಬಗೆಯ ರೂಪಕಗಳು ನಗರದಲ್ಲಿ ಮೆರವಣಿಗೆ ಮಾಡುವುದರೊಂದಿಗೆ ಸೇರಿದ ಸಾವಿರಾರು ಜನರಿಗೆ ಮನರಂಜನೆ ನೀಡಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಮೇಘರಾಜ ನಾಯ್ಕರಿಂದ ತಾಮ್ರ ಪತ್ರ ಪಡೆಯುವ ಮೂಲಕ ಸೋಮವಾರ ಸಂಪನ್ನಗೊಂಡಿತು.
ಪ್ರಮುಖವಾಗಿ ಬೆಳಂಬಾರ ಹಾಲಕ್ಕಿ ಸಮುದಾಯದವರು ಹೋಳಿ ಪ್ರಯುಕ್ತ ನಗರದಲ್ಲಿ ವೇಷ ಭೂಷಣಗಳನ್ನು ಹಾಕಿಕೊಂಡು ಪ್ರತಿನಿತ್ಯ ಸಮಾಜದಲ್ಲಿ ಆಗುಹೊಗುಗಳ ಅಣಕು ಪ್ರದರ್ಶನ ಮಾಡುತ್ತಾರೆ. ಈ ಒಂದು ದಿನ ಮಾತ್ರ ಅವರಿಗೆ ಯಾರ ಕುರಿತು ಅಣಕು ಮಾಡಿದರೂ ಮಾತ್ರ ಯಾವುದೇ ನಿರ್ಬಂಧ ಇರುವುದಿಲ್ಲ. ಸಮಾಜದ ಅನೇಕ ಘಟನೆಗಳನ್ನು ಇವರು ತಮ್ಮ ಅಣಕು ಪ್ರದರ್ಶನದಲ್ಲಿ ಮಾಡತ್ತಾರೆ. ಅಲ್ಲದೆ ವಿವಿಧ ಬಗೆಯ ರೂಪಕವನ್ನು ಮಾಡಿ ಪಟ್ಟಣದಲ್ಲಿ ಸೇರಿದ ಸಾವಿರಾರು ಜನರನ್ನು ರಂಜಿಸುತ್ತಾರೆ. ಇದರ ಜೊತೆಯಲ್ಲಿ ಮರಗಾಲು ವೇಷ, ನಾಡಿನ ಸುಪ್ರಸಿದ್ಧ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತವಂತು ಆಕರ್ಷಣೀಯವಾಗಿ ಮೂಡಿಬಂದಿದೆ.
ಈ ಸಂದರ್ಭದಲ್ಲಿ ಬೆಳಂಬಾರ ಸುಗ್ಗಿ ತಂಡಕ್ಕೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ತಾಮ್ರ ಪತ್ರವನ್ನು ತಹಶೀಲ್ದಾರ್ ಊರಗೌಡರ ಸಮ್ಮುಖದಲ್ಲಿ ತೆರೆದು ಗೌರವ ಸೂಚಿಸಿದರು.
ವಿಶೇಷ ಆಕರ್ಷಣೆ: ಈ ವರ್ಷದ ಅಣಕು ಪ್ರದರ್ಶನದಲ್ಲಿ ನೆರೆ ಹಾವಳಿಯಲ್ಲಿ ನೀರಿನಲ್ಲಿ ಸಿಲುಕಿದ ವೃದ್ಧೆಯನ್ನು ರಕ್ಷಿಸಿದ ಸೈನಿಕರ ತಂಡ, ನೆರೆ ಹಾವಳಿಯಲ್ಲಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದ ಸಂತ್ರಸ್ತರು, ಅಮರ ಪ್ರೇಮಿ, ರಾಮ ಸೇತುವೆ ನಿರ್ಮಾಣಕ್ಕೆ ಕಲ್ಲುಗಳನ್ನು ಹೊತ್ತು ತಂದ ವಾನರ ಸೈನ್ಯ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದ ಅಣಕು, ಕೊರೊನಾ ವೈರಸ್‌ದಿಂದ ಬರುವ ರೋಗ ತಡೆಯಲು ಬಂದ ವೈದ್ಯರ ತಂಡ, ವಿಶೇಷವಾದ ಅವತಾರ್ ಕಿಂಗ್ ಬರ್ಡ್, ಭಾರತದಲ್ಲಿ ಟ್ರಂಪ್‌ಗೆ ಭರ್ಜರಿ ಸ್ವಾಗತ, ನೆರೆ ಸಂತ್ರಸ್ತರಿಗೆ ಹೆಲಿಕಾಪ್ಟರ್ ನಲ್ಲಿ ಆಹಾರವನ್ನು ನೀಡುತ್ತಿರುವುದು, ಚೆನ್ನಮ್ಮನ ಕೊಟೆಗೆ ನುಗ್ಗಿದ ಬ್ರಿಟಿಷರು, ಕುರುಕ್ಷೇತ್ರ ರಥ, ತಾಲೂಕಿನ ಪದ್ಮಶ್ರೀ ಪ್ರಶಸ್ತಿ ಪಡೆದ ಹಾಲಕ್ಕಿ ಸಮುದಾಯದ ಮಹಿಳೆಯರು, ತಾಲೂಕಿನ ವಿಶೇಷ ಆಕರ್ಷಣೆಯಾದ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಜೊತೆಗೆ ಭಾರಿ ಗಾತ್ರದ ಕರಡಿ ವೇಶ ಅನೇಕ ರೂಪಕಗಳು ಕಂಡುಬಂದವು.
-ಅರುಣ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.