ಮಾವು-ಗೇರು ಬೆಳೆ ಸಂರಕ್ಷಣೆಗೆ ರೈತರಿಗೆ ತಜ್ಞರ ಸಲಹೆ

ರೋಗ ಹತೋಟಿಗೆ ಕ್ರಮ ಕೈಗೊಳ್ಳಲು ಸೂಚನೆ

Team Udayavani, Dec 7, 2020, 4:58 PM IST

ಮಾವು-ಗೇರು ಬೆಳೆ ಸಂರಕ್ಷಣೆಗೆ ರೈತರಿಗೆ ತಜ್ಞರ  ಸಲಹೆ

ಶಿರಸಿ: ಜಿಲ್ಲೆಯಲ್ಲಿ ಮಾವು ಮತ್ತು ಗೇರು ಗಿಡಗಳಲ್ಲಿ ಹೊಸ ಚಿಗುರು ಮತ್ತು ಹೂ ಗೊಂಚಲು ಮೂಡಲು ಪ್ರಾರಂಭವಾಗುತ್ತಿದ್ದು, ಇವುಗಳ ರಕ್ಷಣೆಗೆ ತೋಟಗಾರಿಕಾ ಇಲಾಖೆ ವಿಷಯ ತಜ್ಞ ವಿ.ಎಂ. ಹೆಗಡೆ ಶಿಂಗನಮನೆ ರೈತರಿಗೆ ಸಲಹೆ ನೀಡಿದ್ದಾರೆ.

ಮಾವಿನಲ್ಲಿ ಜಿಗಿಹುಳು ಮತ್ತು ಗೇರಿನಲ್ಲಿ ಟಿ ಸೊಳ್ಳೆಗಳು ಮೃದು ಭಾಗಗಳಾದ ಚಿಗುರು ಮತ್ತು ಹೂ ಗೊಂಚಲನ್ನು ಚೂಪಾದ ಕೊಂಬಿನಿಂದ ಚುಚ್ಚಿ ರಸ ಹೀರುತ್ತವೆ. ಇದರಿಂದಾಗಿ ಚಿಗುರು ಎಲೆ ಮುದುಡಿ ಸುಟ್ಟಂತಾಗಿ ಒಣಗಲು ಪ್ರಾರಂಭಿಸುತ್ತವೆ. ರಸ ಹೀರಲ್ಪಟ್ಟ ಹೂ ಗೊಂಚಲುಗಳು ಕಪ್ಪಾಗಿ ಒಣಗಲು ಪ್ರಾರಂಭಿಸಿ ಹೂವು ಉದುರುವುದು. ಈ ಕೀಟದ ಬಾಧೆ ಹೆಚ್ಚಾದಾಗ ಹೂವು ಸುಟ್ಟಂತಾಗುವುದು. ಈ ರೀತಿಯಾಗಿ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ 25 ರಿಂದ 75ರಷ್ಟು ಫಸಲು ನಷ್ಟವಾಗುವುದು.

ಆದ್ದರಿಂದ ರೈತರು ಈ ಹಂತದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳವುದರಿಂದ ಮುಂದೆ ಆಗಬಹುದಾದ ಹಾನಿ ತಡೆಗಟ್ಟಬಹುದು. ಮಾವು ಮತ್ತು ಗೇರು ಗಿಡಗಳಲ್ಲಿ ಕಂಡು ಬರುವ ಒಣಗಿದ ರೆಂಬೆ-ಕೊಂಬೆಗಳನ್ನು ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಗಿಡದ ಭಾಗಕ್ಕೆ ಬೋಡೋì ಅಥವಾ ಕಾಪರ ಆಕ್ಸಿ ಕ್ಲೋರೈಡ್‌

ದ್ರಾವಣ ಹಚ್ಚಬೇಕು. ಬುಡದ ಸುತ್ತಲೂ ಉಳುಮೆ ಮಾಡಿ, ಮಣ್ಣನ್ನು ಸಡಿಲಗೊಳಿಸಬೇಕು. ಗೇರು ಬೆಳೆಗೆ ನೀರಾವರಿ ಪ್ರಾರಂಭಿಸಬಹುದು. ಆದರೆ ಮಾವಿನ ಬೆಳೆಗೆ ಸಣ್ಣ ಮಿಡಿಗಾಯಿ ಆಗುವ ಹಂತದವರೆಗೂ ನೀರಾವರಿ ಪ್ರಾರಂಭಿಸಬಾರದು. ಮಾವಿನಲ್ಲಿ ಹೂ ಮೊಗ್ಗು ಹೊರಟ ನಂತರ ಹೂ ಮೊಗ್ಗು ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಡೈಮಿಥೋಯೇಟ್‌ ಅಥವಾ ಕ್ಲೋರೋಫೈರಿಫಾಸ್‌ 2 ಮಿಲೀ ಪ್ರತಿ ಲೀಟರ್‌ ನೀರಿಗೆ ಸೇರಿಸಿ, ಸಿಂಪಡಿಸಬೇಕು.

ಇದರ ಜೊತೆಗೆ ಐಐಹೆಚ್‌ಆರ್‌ ಮ್ಯಾಂಗೋ ಸ್ಪೆಷಲ್‌ 5 ಗ್ರಾಂ ಪ್ರತಿ ಲೀಟರ ನೀರಿಗೆ ಸೇರಿಸಿ ಸಿಂಪಡಿಸುವುದು ಉತ್ತಮ. ನಂತರ ಹೂ ಬಿಡಲು ಪ್ರಾರಂಭವಾಗಿ ಕಡಲೇಕಾಯಿ ಗಾತ್ರದ ಮಾವಿನ ಕಾಯಿ ಆಗುವವರೆಗೆ ಜಿಗಿ ಹುಳು ಮತ್ತು ಬೂದಿ ರೋàಗದ ನಿಯಂತ್ರಣಕ್ಕೆ ಡೆಕಾಮೆಥ್ರಿನ್‌ 1.0 ಮಿ.ಲೀ ಅಥವಾ ಇಮಿಡಾಕ್ಲೋಪ್ರಿಡ್‌ 0.3 ಮಿ.ಲೀ. ಅಥವಾ 0.5ಮಿಲೀ ಸೈಪರಮೆಥ್ರಿನ ಇವುಗಳಲ್ಲಿ ಯಾವುದಾದರೂ ಕೀಟ ನಾಶಕದ ಜೊತೆಗೆ ಕಾರ್ಬೆಂಡೆಂಜಿಮ್‌ 1ಗ್ರಾಂ ಅಥವಾ ನೀರಿನಲ್ಲಿ ಕರಗುವ ಗಂಧಕ 3ಗ್ರಾಂ ಪ್ರತಿ ಲೀಟರ್‌ ನೀರಿಗೆ ಸೇರಿಸಿ 25-30 ದಿನಗಳಿಗೊಮ್ಮೆ ಅವಶ್ಯಕತೆಗೆ ಅನುಗುಣವಾಗಿ ಸಿಂಪಡಿಸುತ್ತಿರಬೇಕು.

ಇದನ್ನೂ ಓದಿ:ಬಿಳಿಜೋಳ ಬೆಳೆಗೂ ಹುಸಿ ಸೈನಿಕ ಹುಳುಬಾಧೆ

ಗೋಡಂಬಿ ಬೆಳೆಯಲ್ಲಿ ಟಿ ಸೊಳ್ಳೆ ಮತ್ತು ಚಿಗುರು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಪ್ರೊಪೆನೊಪೊಸ್‌ 1.5 ಮಿಲೀ ಅಥವಾ ಲ್ಯಾಂಬಾx ಸೈಲೋಥ್ರಿನ್‌ 0.6 ಮಿಲೀ ಅಥವಾ ಕ್ಲೋರೊಪೈರಿಫಾಸ್‌-50 ಇ.ಸಿ. 1.5 ಮಿಲೀ ಪ್ರತಿ ಲೀಟರ್‌ ನೀರಿಗೆ ಸೇರಿಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ವಿಷಯ ತಜ್ಞರು, ಹಾರ್ಟಿ ಕ್ಲಿನಿಕ್‌, ತೋಟಗಾರಿಕೆ ಇಲಾಖೆ ಶಿರಸಿ ಅಥವಾ ಆಯಾ ತಾಲೂಕಿನ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.