ವ್ಯಕ್ತಿಯ ಬಳಿ ಸುಲಿಗೆ :ಆರು ತಾಸುಗಳಲ್ಲೇ ಇಬ್ಬರು ಆರೋಪಿಗಳ ಬಂಧನ
Team Udayavani, Oct 6, 2022, 9:07 PM IST
ಶಿರಸಿ: ತಾಲೂಕಿನ ಹಣಗಾರ ಬಳಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ ಆರು ತಾಸುಗಳಲ್ಲಿ ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಮ್ಮಿನಳ್ಳಿಯ ಜನತಾ ಕಾಲೋನಿಯ ಮಹಮ್ಮದ್ ಇಸಾಕ್ ಅಬ್ದುಲ್ಲಾ ವಹಾಬ್ ಶೇಖ್ (23) ಹಾಗೂ ಮತ್ತಿಗಾರಿನ ಪ್ರವೀಣ ಮಾರುತಿ ಅಲಗೇರಿಕರ್ (23) ಬಂಧಿತ ಆರೋಪಿತರು. ಅಮ್ಮೀನಳ್ಳಿಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ, ದೂರುದಾರ ಶ್ರೀಪಾದ ದೇವರು ಹೆಗಡೆ ಎಂಬ ವ್ಯಕ್ತಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಹಣಗಾರ ಕ್ರಾಸ್ ಸಮೀಪ ಇಬ್ಬರು ಆರೋಪಿಗಳು ಮೋಟರ ಸೈಕಲ್ ಮೇಲೆ ಬಂದು ಶ್ರೀಪಾದ ಹೆಗಡೆ ಅವರ ಸ್ಕೂಟಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಸ್ಕೂಟಿಯ ಮುಂಭಾಗದಲ್ಲಿದ್ದ ಕ್ಯಾಶ್‍ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಬಂಧಿತರಿಂದ 11 ಸಾವಿರ .ರೂ ಹಣ ಹಾಗೂ 3 ಮೊಬೈಲ್‍ಗಳು, ಮೂಲ ಆಧಾರ್ ಕಾರ್ಡ್ , ಮೂಲ ಜಮೀನಿನ ಮ್ಯೂಟೆಶನ್ ದಸ್ತಾವೇಜುಗಳು ಸೇರಿ ದೂರುದಾರರಿಂದ ಸುಲಿಗೆ ಮಾಡಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಪಿಎಸ್ಐ ಪ್ರತಾಪ್ ಪಿ, ಸಿಬ್ಬಂದಿ ಮಹಾದೇವ ನಾಯ್ಕ, ಚೇತನಕುಮಾರ ನಾಯ್ಕ, ಗಣಪತಿ ನಾಯ್ಕ, ಚೇತನ್ ಜೆ.ಎನ್., ಎಚ್.ಸಿ.ಮಂಜುನಾಥ ಪೂಜಾರಿ, ಪ್ರದೀಪ ರೇಣಕರ, ಶ್ರೀಧರ ನಾಯ್ಕ, ಪ್ರಸಾದ ಎಮ್., ರಮೇಶ ಬೆಳಗಾಂವಕರ, ರಾವು ಸಾಹೇಬ ಕಿತ್ತೂರು, ಲಕ್ಷ್ಮಪ್ಪ ವಾಲೀಕರ, ಪಾಂಡು ನಾಗೋಜಿ ತನಿಖಾ ತಂಡದಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.