ನಕಲಿ ಬ್ರ್ಯಾಂಡ್ ಬಟ್ಟೆ ಮಾರಾಟ: ಪ್ರಕರಣ ದಾಖಲು
Team Udayavani, Jul 6, 2019, 12:48 PM IST
ಹೊನ್ನಾವರ: ನಕಲಿ ಬ್ರಾಂಡ್ ಬಟ್ಟೆಗಳ ಅಂಗಡಿ.
ಹೊನ್ನಾವರ: ಹಳದೀಪುರದ ಕುದಬೈಲ್ ಬಳಿಯ ಜೀವನ್ ಗಾರ್ಮೆಂಟ್ಸ್ನವರು ಬೆಂಗಳೂರಿನ ಎಂ.ಎಸ್. ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ ಅವರಿಂದ ಅನುಮತಿ ಪಡೆಯದೇ ಕಂಪನಿಯ ಜನಪ್ರಿಯ ಬಟ್ಟೆಯ ಬ್ರಾಂಡ್ಗಳಾದ ಅಲೆನ್ ಸೊಲ್ಲಿ, ಲೂಯಿ ಫಿಲಿಪ್, ವೆನ್ ಹ್ಯೂಸನ್, ಪೀಟರ್ ಇಂಗ್ಲಂಡ್, ಪೀಪಲ್ ಮುಂತಾದ ನಕಲಿ ಉಡುಪುಗಳನ್ನು ತಯಾರಿಸಿ ಕಂಪನಿ ಉಡುಪುಗಳೆಂದು ಗ್ರಾಹಕರಿಗೆ ಮೋಸ ಮಾಡುತ್ತಿದ್ದರು.
ತಮ್ಮ ಕಂಪನಿ ಪಡೆದಿರುವ ಹಕ್ಕು ಸ್ವಾಮ್ಯವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಅವನೀಶ್ ಐಪಿಆರ್ ಸರ್ವೀಸಸ್ ಬೆಂಗಳೂರು ಇದರ ಮ್ಯಾನೇಜರ್ ಆದ ರಾಘು ಆರ್ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊನ್ನಾವರ ಪಿ.ಎಸೈ ಸಂತೋಷ ಕಾಯ್ಕಿಣಿ ನೇತೃತ್ವದ ತಂಡ ಗಾರ್ಮೆಂಟ್ಸ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಅಂದಾಜು 50 ಲಕ್ಷ ರೂ ಮೌಲ್ಯದ ಬಟ್ಟೆಯನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧದ ಗಾರ್ಮೆಂಟ್ಸ್ ಮಾಲಿಕ ಜನಾರ್ಧನ ನಾಯ್ಕ ಹಳದೀಪುರ ಇವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.