Sirsi: ಕಾಂಗ್ರೆಸ್ ನ್ಯಾಯ ಪತ್ರದ ಹೆಸರಿನಲ್ಲಿ ಪ್ರಣಾಳಿಕೆ ಮೂಲಕ ಸುಳ್ಳು ವಾಗ್ದಾನ
Team Udayavani, Apr 10, 2024, 4:42 PM IST
ಶಿರಸಿ: ರಾಹುಲ್ ಗಾಂಧಿ ಉಳ್ಳವರ ಸಂಪತ್ತನ್ನು ಕಸಿದು ಎಲ್ಲರಿಗೂ ಹಂಚುತ್ತೇವೆ ಎಂದಿದ್ದಾರೆ. ಇದನ್ನು ಹೇಳುವವರು ನಕ್ಸಲೈಟ್. ನಕ್ಸಲಿಸಂ ನಶಿಸುತ್ತಿದ್ದಂತೆ ಕಾಂಗ್ರೆಸ್ ಇಂತಹ ಕಾರ್ಯಕ್ಕೆ ಮುಂದಾಗುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ವಾಗ್ದಾಳಿ ಮಾಡಿದರು.
ಬುಧವಾರ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, 1936 ರಲ್ಲಿ ಮುಸ್ಲಿಂ ಲೀಗ್ ಮ್ಯಾನಿಫೆಸ್ಟೋ ಹೇಳಿದಂತೆ 2024 ರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಇದೆ. ಯಾವ ವ್ಯತ್ಯಾಸ ಇಲ್ಲ. ಪರ ದೇಶದಲ್ಲಿ ಕಲಿತ ಮುಸ್ಲಿಂ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಕೊಡುತ್ತಿರುವುದನ್ನು ನೋಡಿದರೆ ಇದು ಭಾರತದ ಕಾಂಗ್ರೆಸ್ ಪ್ರಣಾಳಿಕೆಯಾ ಗೊತ್ತಾಗುತ್ತಿಲ್ಲ ಎಂದರು.
ಬಿಜೆಪಿ ಕಳೆದ ಹತ್ತು ವರ್ಷದಲ್ಲಿ ಎಲ್ಲರನ್ನೂ ಮೇಲೆಕ್ಕೆ ಎತ್ತಲು ಮುಂದಾಗಿದೆ. 25 ಕೋಟಿ ಜನರನ್ನು ಕಳೆದ ಹತ್ತು ವರ್ಷದಲ್ಲಿ ಬಡತನ ರೇಖೆಗಿಂತ ಮೇಲಕ್ಕೆ ಎತ್ತಲಾಗಿದೆ ಎಂದ ಅವರು, ಕಾಂಗ್ರೆಸ್ ನ್ಯಾಯ ಪತ್ರದ ಹೆಸರಿನಲ್ಲಿ ಪ್ರಣಾಳಿಕೆ ಮೂಲಕ ಸುಳ್ಳು ವಾಗ್ದಾನ ಮಾಡುತ್ತಿದೆ. ಕಾಂಗ್ರೆಸ್ ಇನ್ನಾವುದೋ ದೇಶದ ಚಿತಾವಣೆಗೆ ಒಳಗಾಗಿ ದೇಶ ಒಡೆಯುವ ಪ್ರಣಾಳಿಕೆ ತಂದಿದೆ ಎಂದೂ ಹೇಳಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನದಿ, ದನ ಕರು, ಕಟ್ಟಡಗಳು ನ್ಯೂಯಾರ್ಕ್ ಫೋಟೋ ತೋರಿಸಿದೆ. ವಿದೇಶಿ ಪ್ರಾಣಿ ಪಕ್ಷಿ ತೋರಿಸಿದೆ. ಪ್ರಣಾಳಿಕೆ ತಯಾರಿಸಲು ಎಷ್ಟು ಗಂಭೀರವಾಗಿದೆ ಎಂದು ನೋಡಬೇಕಾಗಿದೆ. ಎಜೆನ್ಸಿಗೆ ಕೊಟ್ಟು ಪ್ರಣಾಳಿಕೆ ಮಾಡಿದ ಕೆಲಸ ಅದು. ಪ್ರಣಾಳಿಕೆ ಕಾಂಗ್ರೆಸ್ ಕೆಲಸ ಅಲ್ಲ ಎಂಬಂತಿದೆ ಎಂದೂ ಹೇಳಿದರು.
ಮಹಿಳಾ, ಬಡವರ, ಕೃಷಿಕರ, ಶ್ರಮಿಕರ, ಎಸ್ ಸಿ-ಎಸ್ ಟಿ ಪರ ಕಾಯಿದೆ, ಯೋಜನೆಗಳನ್ನು ಬಿಜೆಪಿ ಸರಕಾರ ತಂದಾಗಲೂ ಕಾಂಗ್ರೆಸ್ ಈಗ ಕೈ ಬಿಟ್ಟಿದೆ. ಪೊಳ್ಳು ಗ್ಯಾರೆಂಟಿ ಯೋಜನೆಗೆ ಕಾಂಗ್ರೆಸ್ ಅವನ್ನೆಲ್ಲ ಬಳಸಿಕೊಂಡಿದೆ ಎಂದರು.
ಬಿಜೆಪಿ ಆಡಳಿತ ಇದ್ದಾಗ ಹಣದುಬ್ಬರ ಕಡಿಮೆ ಇದ್ದವು. 60 ವರ್ಷದಲ್ಲಿ ಮಾಡಲಾಗದ್ದನ್ನು ಈಗ ಮಾಡುತ್ತೇನೆ ಎಂದಿದೆ. ಕಾಂಗ್ರೆಸ್ ಆಳ್ವಿಕೆ 60, ಹಾಗೂ 2004 ರಿಂದ 14 ರತಕ ಅಭಿವೃದ್ದಿ ಶೇ. 1.19 ದರ ಇತ್ತು. ಬಿಜೆಪಿಯು ಕೇವಲ ಹತ್ತು ವರ್ಷದಲ್ಲಿ 26 ಶೇ.ಅಭಿವೃದ್ದಿ ಸಾಧಿಸಿದೆ ಎಂದೂ ವಿವರಿಸಿದರು.
ಜಿಲ್ಲಾ ವಕ್ತಾರ ಸದಾನಂದ ಭಟ್ಟ, ಪ್ರಣಾಳಿಕೆ ಆಧಾರದಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಕಾಂಗ್ರೆಸ್ ಆಶ್ವಾಸನೆ ದಾರಿ ತಪ್ಪಿಸುತ್ತಿದೆ ಎಂದ ಅವರು, ಏ.12ಕ್ಕೆ ಕಾಗೇರಿ ನಾಮಪತ್ರ ಸಲ್ಲಿಸಲಿದ್ದು, ಸುನೀಲ್ ಕುಮಾರ್, ಪ್ರಮೋದ್ ಸಾವಂತ್, ದಿನಕರ ಶೆಟ್ಟಿ, ಖಾನಾಪುರ ಶಾಸಕರು ಇತರ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ಕಾರವಾರದ ದೈವಜ್ಞ ಕಲ್ಯಾಣ ಮಂಟಪದಿಂದ ಮೆರವಣಿಗೆ ಹೊರಟು 12 ಗಂಟೆಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯಕ, ಖಜಾಂಚಿ ರಮಾಕಂತ ಭಟ್ಟ, ರವಿಚಂದ್ರ ಶೆಟ್ಟಿ, ಆರ್.ವಿ.ಚಿಪಗಿ, ಶ್ರೀರಾಮ ನಾಯ್ಕ ಇದ್ದರು.
ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಬಿಗ್ ಝೀರೋ ಆಗಲಿದೆ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಪ್ರತಿ ಪಕ್ಷವಾಗಿಯೂ ಉಳಿಯುವುದಿಲ್ಲ.
ಮುಸ್ಲಿಂ ಲೀಗ್ ಮಾಡದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಯಾರಾದರೂ ಕಾಂಗ್ರೆಸ್ ಪ್ರಣಾಳಿಕೆ ನಂಬಿದರೆ ಅದರಷ್ಟು ಮೂರ್ಖರಿಲ್ಲ. -ಹರಿಪ್ರಕಾಶ ಕೋಣೆಮನೆ, ರಾಜ್ಯ ವಕ್ತಾರ
ಶಾಸಕ ಹೆಬ್ಬಾರ್ ಅವರು ರಾಜಕೀಯ ತೀರ್ಮಾನ ಪಡೆಯಲು ಯಾಕೆ ಮೀನ ಮೇಷ ಮಾಡುತ್ತಿದ್ದಾರೆ. ಯಾಕೆ ವಿಳಂಬ ಆಗುತ್ತಿದೆ. ಬಿಜೆಪಿಗೆ ಕಾರ್ಯಕರ್ತರು ಮುಖ್ಯ. ವ್ಯಕ್ತಿಗೋಸ್ಕರ ಕಾರ್ಯಕರ್ತರ ಬಲಿ ಇಲ್ಲ. ಪಕ್ಷ, ಸಂಘಟನೆಗೆ ನಮ್ಮ ದೇವ ದುರ್ಲಭ ಕಾರ್ಯಕರ್ತರು ಯಾವ ತ್ಯಾಗಕ್ಕೂ ಸಿದ್ಧ. – ಹರಿಪ್ರಕಾಶ ಕೋಣೆಮನೆ, ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.