ರಾಷ್ಟ್ರ-ರಾಜ್ಯ ಜಟ್ಟಿಗಳ ಸೆಣಸಾಟ
Team Udayavani, Jan 25, 2019, 11:37 AM IST
ಹಳಿಯಾಳ: ಕುಸ್ತಿ ಪಟುಗಳ ತವರೂರೆಂದೇ ಹೆಸರಾದ ಹಳಿಯಾಳದಲ್ಲಿ ಜ.26 ರಿಂದ 28ರವರೆಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಪಟ್ಟಣದ ಜಿಲ್ಲಾ ಕುಸ್ತಿ ಅಖಾಡದಲ್ಲಿ ನಡೆಯಲಿದ್ದು ಮಹಿಳೆಯರು ಸೇರಿ 500 ಕುಸ್ತಿ ಪಟುಗಳು ಭಾಗವಹಿಸಲಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಎದುರಿಗಿನ ಮೊತಿಕೆರೆ ದಡದಲ್ಲಿರುವ ಜಿಲ್ಲಾ ಕುಸ್ತಿ ಅಖಾಡದಲ್ಲಿ ಒಟ್ಟೂ 27 ಟೈಟಲ್‌ಗಾಗಿ ರಾಜ್ಯ, ರಾಷ್ಟ್ರಮಟ್ಟದ ಜಟ್ಟಿಗಳು ಸೆಣೆಸಾಟ ನಡೆಸಲಿದ್ದು 18 ಲಕ್ಷಕ್ಕೂ ಅಧಿಕ ಬಹುಮಾನ ಘೋಷಿಸಲಾಗಿದೆ ಎಂದು ಕುಸ್ತಿ ತರಬೇತುದಾರ ಯಶವಂತ ಸ್ವಾಮೀಜಿ ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ ಅಧ್ಯಕ್ಷತೆಯ ವಿ.ಆರ್.ಡಿಎಂ ಟ್ರಸ್ಟ್, ರಾಜ್ಯ ಕುಸ್ತಿ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ದಿ.ವಿಶ್ವನಾಥರಾವ್ ರಘುನಾಥರಾವ್ ದೇಶಪಾಂಡೆ ಸ್ಮರಣಾರ್ಥ ಈ ಪಂದ್ಯಾವಳಿ ಆಯೋಜಿಸಲಾಗಿದೆ.
ವಿವಿಧ ವಿಭಾಗದಲ್ಲಿ ಕುಸ್ತಿ ಪಂದ್ಯಾವಳಿ: ಮಹಾನ್ ಭಾರತ್ ಕೇಸರಿ: ಪುರುಷರ ವಿಭಾಗದಲ್ಲಿ (75 ಕೆ.ಜಿ. ಮೆಲ್ಪಟ್ಟ) ರಾಷ್ಟ್ರ ಮಟ್ಟದ ಮಹಾನ್ ಕೇಸರಿ ಪ್ರಶಸ್ತಿಗಾಗಿ ಮೊದಲ ಬಹುಮಾನ 2.25ಲಕ್ಷ ನಗದು ಬಂಗಾರದ ಪದಕ ಹಾಗೂ ಬೆಳ್ಳಿ ಗದೆ, ದ್ವಿತೀಯ ಬಹುಮಾನ, 1.10ಲಕ್ಷ.ರೂ ನಗದು, ಬೆಳ್ಳಿ ಪದಕ ಹಾಗೂ 3, 4ನೇ ಬಹುಮಾನ ತಲಾ 55ಸಾವಿರ ರೂ. ಮತ್ತು ಕಂಚಿನ ಪದಕ.
ರಾಷ್ಟ್ರ ಮಟ್ಟದ ವೀರ ರಾಣಿ ಕಿತ್ತೂರ ಚನ್ನಮ್ಮಾ: ಈ ಪ್ರಶಸ್ತಿಗಾಗಿ 55 ಕೆ.ಜಿಗಿಂತ ಮೆಲ್ಪಟ್ಟ ಮಹಿಳಾ ವಿಭಾಗದಲ್ಲಿ ಪ್ರಥಮ 50 ಸಾವಿರ ರೂ., ದ್ವಿತೀಯ 25 ಸಾವಿರ ರೂ. ಮೂರನೇ ಮತ್ತು ನಾಲ್ಕನೆಯ ಸ್ಥಾನ ತಲಾ 15 ಸಾವಿರ ರೂ. ನಿಡಲಾಗುವುದು.
ಒನಕೆ ಓಬವ್ವಾ ಕರ್ನಾಟಕ ಕೇಸರಿ ಪ್ರಶಸ್ತಿ: 55 ಕೆ.ಜಿ. ವಿಭಾಗದ ಮೇಲ್ಪಟ್ಟ ಈ ವಿಭಾಗದಲ್ಲಿ ವಿಜೇತರಿಗೆ 25 ಸಾವಿರ ರೂ. ದ್ವಿತೀಯ ಸ್ಥಾನ 15ಸಾವಿರ ರೂ. ಹಾಗೂ 3 ಮತ್ತು 4ನೇ ಸ್ಥಾನದಲ್ಲಿ ತಲಾ 10 ಸಾವಿರ ನಗದು.
ರಾಜ್ಯ ಮಟ್ಟದ ಮುಕ್ತ ಕುಸ್ತಿಗಳು: ಕರ್ನಾಟಕ ಕಂಠೀರವ ಪ್ರಶಸ್ತಿ: 74ಕೆ.ಜಿ. ವಿಭಾಗದಲ್ಲಿ 75 ಸಾವಿರ, ದ್ವಿತೀಯ 40 ಸಾವಿರ, ತೃತೀಯ 20 ಸಾವಿರ. ಕರ್ನಾಟಕ ಕೇಸರಿ: 74ಕೆ.ಜಿ ವಿಭಾಗದಲ್ಲಿ 50 ಸಾವಿರ ಪ್ರಥಮ, 25ಸಾವಿರ ದ್ವಿತೀಯ, 15ಸಾವಿರ ತೃತೀಯ.
ಕರ್ನಾಟಕ ಕುಮಾರ: 70 ಕೆ.ಜಿ. ವಿಭಾಗದಲ್ಲಿ 35ಸಾವಿರ ಪ್ರಥಮ, 18ಸಾವಿರ ದ್ವಿತೀಯ, 12ತೃತೀಯ.
ಕರ್ನಾಟಕ ಕಿಶೋರ: ಇಲ್ಲಿ 65 ಕೆಜಿ ವಿಭಾದದಲ್ಲಿ ಪ್ರಥಮ 20 ಸಾವಿರ, ದ್ವಿತೀಯ 15ಸಾವಿರ, ತೃತೀಯ 10ಸಾವಿರ ಹಾಗೂ 61 ಕೆ.ಜಿ. ವಿಭಾಗದಲ್ಲಿ ಕರ್ನಾಟಕ ಚಾಂಪಿಯನ್ ಪ್ರಶಸ್ತಿಗಾಗಿ ಪ್ರಥಮ 15ಸಾವಿರ, ದ್ವಿತೀಯ 10ಸಾವಿರ, ತತೀಯ 8ಸಾವಿರ ಬಹುಮಾನ ನಿಗದಿಪಡಿಸಲಾಗಿದೆ.
ಜೂನಿಯರ್ ವಿಭಾಗ: ಪುರುಷರ ಹಾಗೂ ಮಹಿಳೆಯರ ವಿಭಾದಲ್ಲಿ 29, 32, 35, 38, 42, 48, 51, 55 ಕೆ.ಜಿ ವಿಭಾಗದಲ್ಲಿ ಕುಸ್ತಿ ನಡೆಸಲಾಗುವುದು.
ದೇಹ ತೂಕ(17 ವರ್ಷ ಒಳಗಿನ) ಕಿರಿಯ ಪೈಲ್ವಾನರ ಮತ್ತು ಬಾಲಕಿಯರ ದೇಹದ ತೂಕವನ್ನು ಜ.26ರಂದು ಬೆಳಗ್ಗೆ 9ರಿಂದ 11ರವರೆಗೆ ನಡೆಸಲಾಗುವುದು. ಮೊದಲ ಹಂತದ ಕುಸ್ತಿಗಳು ಮ್ಯಾಟ್ ಮೆಲೆ ನಡೆದರೆ. ಅಂತಿಮ ಹಂತದ ಜಂಗೀ ಕುಸ್ತಿಗಳು ಮಣ್ಣಿನ ಮೇಲೆ ನಡೆಸಲಾಗುವುದು ಎಂದು ಯಶವಂತ ಸ್ವಾಮಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.