ಕುಮಟಾ: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾದ ಮನೆ; ಅಪಾರ ನಷ್ಟ
Team Udayavani, Jun 28, 2022, 3:04 PM IST
ಕುಮಟಾ: ತಾಲೂಕಿನ ದೀವಗಿ ಗ್ರಾ.ಪಂ ವ್ಯಾಪ್ತಿಯ ನವಗ್ರಾಮದ ಮನೆಯೊಂದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸಂಪೂರ್ಣ ಮನೆ ಸುಟ್ಟು ಕರಕಲಾದ ಘಟನೆ ಮಂಗಳವಾರ ನಡೆದಿದೆ.
ನವಗ್ರಾಮದ ಗೌರಿ ಗಜಾನನ ಅಂಬಿಗ ಎನ್ನುವವರ ಮನೆಯು ಬೆಂಕಿಗೆ ಆಹುತಿಯಾಗಿದ್ದು, ಸುಮಾರು 3 – 4 ಲಕ್ಷ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.
ಘಟನೆಯಿಂದಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುರ್ಘಟನೆ ನಡೆದಿದ್ದು ಮನೆಯಲ್ಲಿದ್ದ ಎರಡು ಫ್ಯಾನ್, ಗೋದ್ರೆಜ್ ಕಪಾಟು, ಮೂರು ಹೊಲಿಗೆ ಯಂತ್ರ, ಅಡುಗೆ ಪಾತ್ರೆ, ಹಾಗೂ ವಿದ್ಯುತ್ ಮೀಟರ್,ಟ್ಯುಬ್ ಲೈಟ್ ಹಾಗೂ ಮನೆಯ ಮೇಲ್ಬಾಗ ಸಂಪೂರ್ಣ ಸುಟ್ಟು ಹೋಗಿದೆ.
ತಕ್ಷಣ ಸ್ಥಳಕ್ಕಾಗಮಸಿದ ಅಗ್ನಿಶಾಮಕ ಸಿಬ್ಬಂದಿಗಳ ಸುಮಾರು ಒಂದು ಗಂಟೆಗಳ ಕಾಲದ ಪ್ರಯತ್ನದಿಂದಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳಕ್ಕೆ ಮಿರ್ಜಾನ್ ಕಂದಾಯ ನಿರೀಕ್ಷಕರಾದ ಗಾಣಗೀರ್,ಪಿಡಿಓ ರೇಖಾ ನಾಯಕ, ವಿದ್ಯುತ್ ಇಲಾಖೆಯ ಪ್ರವೀಣ, ಡೆಪ್ಯುಟಿ ಅರ್ ಎಫ್ ಓ ಹೂವಣ್ಣ ಗೌಡರ್, ಗ್ರಾ.ಪಂ ಸಸದಸ್ಯರಾದ ಪ್ರವೀಣ ಅಂಬಿಗ, ಜಗದೀಶ ಭಟ್ಟ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ತಮ್ಮಯ್ಯ ಗೌಡ, ಕುಮಾರ ಗೌಡ, ಮಂಜುನಾಥ ಹೆಗಡೆ,ನಾಗರಾಜ ನಾಯಕ, ಮಹಬಲೇಶ್ವರ ಹರಿಕಂತ್ರ,ಗುರುನಾಥ ನಾಯ್ಕ, ದಿನೇಶ ಕುಮಾರ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.