ಮುಂಡಗೆಮನೆ ತೋಟಕ್ಕೆ ಬೆಂಕಿ; ಕೋಟ್ಯಂತರ ರೂಪಾಯಿ ನಷ್ಟ
Team Udayavani, May 21, 2023, 2:34 PM IST
ಶಿರಸಿ: ಕಳೆದ ರಾತ್ರಿ ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಎಕರೆಗೂ ಅಧಿಕ ವಿಸ್ತೀರ್ಣದ ಅಡಿಕೆ ತೋಟ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಹೆಗಡೆಕಟ್ಟ ಪಂಚಲಿಂಗ ಪಕ್ಕದ ಮುಂಡಗೆಮನೆಯಲ್ಲಿ ನಡೆದಿದೆ.
ಇಲ್ಲಿನ ನಾಲ್ವರು ರೈತರಿಗೆ ಸಂಬಂಧಿಸಿದ ಅಡಿಕೆ ತೋಟ ಅಗ್ನಿಗೆ ಬಲಿಯಾಗಿದ್ದು, ಮುಂದೇನು ಎಂಬ ಚಿಂತೆ ಕಾಡಿದೆ. ಶಿರಸಿ ತಾಲೂಕಿನಲ್ಲೇ ಕಳೆದ ಒಂದು ತಿಂಗಳುಗಳ ಈಚೆಗೆ ಕಲಕೈ, ಅಮಚಿಮನೆ ತೋಟಗಳು ಸುಟ್ಟ ವರದಿಯ ಬೆನ್ನಲ್ಲೇ ಮುಂಡಿಗೆಮನೆ ತೋಟದ ಸರಕೆ ಬೆಂಕಿ ಬಿದ್ದಿದೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ತಗುಲಿದ್ದು, ಇದು ಹೆಗಾಗಿದೆ ಎಂಬುದೇ ತಿಳಿಯದಾಗಿದೆ ಎನ್ನಲಾಗಿದೆ. ಮುಂಡಗೆಮನೆಯಿಂದ ಕಾಣದಷ್ಟು ದೂರದಲ್ಲಿ ಬೆಂಕಿ ಬಿದ್ದಿದ್ದು ಪಕ್ಕದ ಹಳ್ಳಿಯವರೊಬ್ಬರಿಗೆ ಬೆಂಕಿ ಬೆಳಕು ಕಂಡು ಇಲ್ಲಿಗೆ ಬಂದು ಮಾಹಿತಿ ತಿಳಿಸಿದ ಬಳಿಕ ಬೆಂಕಿ ನಂದಿಸಲು ಓಡಿದ್ದಾರೆ.
ಮುಂಡಗೆಮನೆ ತೋಟ ಬಹು ಬೆಳೆಯ ಸಮೃದ್ಧ ತೋಟವಾಗಿದ್ದು ಈಗ ಬಾಳೆ, ಏಲಕ್ಕಿ, ಕಾಳು ಮೆಣಸು, ಅಡಿಕೆ ಸೇರಿದಂತೆ ಬಹು ಬೆಳೆಗೂ ಹಾನಿಯಾಗಿದೆ. ಬೇಸಗೆಯ ಕಾಲದಲ್ಲಿ ಭೂಮಿ ಕಾಯಬಾರದು, ಮಳೆಗಾಲದಲ್ಲಿ ಮೇಲ್ಮಣ್ಣು ತೊಯ್ಯಬಾರದು ಎಂದು ಹಾಕಲಾದ ದಪ್ಪನೆಯ ಕರಡ, ದರಕುಗಳಿಗೆ ಅಗ್ನಿ ತಗುಲಿ ಸಂಪೂರ್ಣ ಸುಟ್ಟೋಗಿದೆ. ಗೋಪಾಲಕೃಷ್ಣ ಹೆಗಡೆ ಸಹೋದರರಿಗೆ ಸಂಬಂಧಿಸಿದ ಸುಮಾರು ಎಂಟು ಬಣ್ಣದ ಸುಮಾರು ಅರ್ಧ ಎಕರೆಗೂ ಅಧಿಕ ತೋಟ, ಮಧುಕೇಶ್ವರ ಹೆಗಡೆ ಅವರಿಗೆ ಸಂಬಂಧಿಸಿದ 15 ಗುಂಟೆ ತೋಟ, ಈಶ್ವರ ಹೆಗಡೆ ಕೊರಟಿಬೈಲಿನ ಹಾಗೂತಿಮ್ಮಾಣಿ ದೀಕ್ಷಿತರಿಗೆ ಸಂಬಂಧಿಸಿದ ಎಂಟತ್ತು ಗುಂಟೆ ತೋಟ ಹಾನಿಯಾಗಿದೆ. ರಾತ್ರಿ ಸುದ್ದಿ ತಿಳಿದ ಗ್ರಾಮಸ್ಥರು ಆಗಮಿಸಿ ಬೆಂಕಿ ಆರಿಸಲು ಬೆಳಗಿನ ತನಕ ಶ್ರಮಿಸಿದರು.
ಒಂದು ಅಡಿಕೆ ತೋಟಕೆ ಹಾನಿ ಎಂದರೆ ಈ ವರ್ಷದ ಬೆಳೆ ಜೊತೆ ಅರೆಂಟು ವರ್ಷದ ಬೆಳೆ ಕೂಡ ಸಿಗದಂತೆ ಆಗಲಿದೆ. ಬೆಳೆಯ ಮರು ನಾಟಿ ಕೂಡ ವೆಚ್ಚದಾಯಕ ಆಗಲಿದೆ.
ಸಮೃದ್ದ ತೋಟಕ್ಕೆ ಬೆಂಕಿ ತಗುಲಿದ್ದಾದರೂ ಹೇಗೆ ಎಂಬುದು ಗೊತ್ತಾಗುತ್ತಿಲ್ಲ. ಹೀಗಾಗಿದ್ದು ಬದುಕು ಕಷ್ಟಕೆ ದೂಕುವಂತೆ ಆಗಿದೆ.-ಗೋಪಾಲಕೃಷ್ಣ ಹೆಗಡೆ ಮುಂಡಗೆಮನೆ, ಪ್ರಗತಿಪರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.