ಕೊಟ್ಟಿಗೆಗೆ ಬೆಂಕಿ: ಅಪಾರ ಹಾನಿ
Team Udayavani, May 12, 2019, 5:19 PM IST
ಜೋಯಿಡಾ: ಸಮೀಪದ ಸಂತರಿ ಗ್ರಾಮದ ಪಕ್ಕದ ಜಾಮಗಾಳಿ ಮಜರೆಯ ರತ್ನಾಕರ್ ಸಾವಂತ ಎಂಬ ರೈತನ ದನದ ಕೊಟ್ಟಿಗೆಗೆ ಶನಿವಾರ ರಾತ್ರಿ ಬೆಂಕಿ ಬಿದ್ದ ಪರಿಣಾಮ ಕೊಟ್ಟಿಗೆ ಸಂಪೂರ್ಣ ಸುಟ್ಟುಹೋಗಿದ್ದು, ಅಗ್ನಿಶಾಮಕ ದಳದ ಸಮಯೋಚಿತ ಕರ್ತವ್ಯದಿಂದ ಅಪಾರ ಹಾನಿ ತಪ್ಪಿದೆ. ಸಂಜೆ ಸಮಯದಲ್ಲಿ ಹೊತ್ತಿಕೊಂಡ ಬೆಂಕಿ ಸಂಪೂರ್ಣ ಕೊಟ್ಟಿಗೆಯನ್ನು ಆವರಿಸಿತ್ತು. ನಂತರ ಅಲ್ಲಿಗೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಿಂದಿಸುವ ಮೂಲಕ ಅಪಾರ ಹಾನಿ ಸಂಭವಿಸುವುದನ್ನು ತಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೊಟ್ಟಿಗೆ ಒಳಗಿರುವ ಸುಮರು 30000 ರೂ.ಗೂ ಹೆಚ್ಚು ಮೌಲ್ಯದ ಒಣಮೇವು ಸುಟ್ಟಿದ್ದು, ಮೆಲ್ಛಾವಣಿ ಸುಟ್ಟು, ಕೊಟ್ಟಿಗೆಗೆ ಹಾಕಿದ ಕಟ್ಟಿಗೆ ಸಾಮಗ್ರಿ, ಇನ್ನಿತರ ವಸ್ತುಗಳು ಬೆಂಕಿಗೆ ತಗುಲಿ ಹಾನಿಗೊಳಗಾಗಿದ್ದು ವರದಿಯಾಗಿದೆ.
ಅಗ್ನಿಶಾಮಕ ಅಧಿಕಾರಿಗಳಾದ ಎಎಸ್‌ಒ ನವೀನ, ಪ್ರ.ಅ. ಶಾಮಕರಾದ ರವಿಕಾಂತ ನಾಯ್ಕ, ಸಂತೋಷ ರಾಮದುರ್ಗ, ಶಿವಕುಮಾರ ಗುರವ, ಚಾಲಕ ಶಿವಾನಂದ ಹುಗ್ಗಿನವರ ಅಗ್ನಿಶಮನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.