ದೊಡ್ಮನಿಯವರನ್ನೇ ಮುಂದುವರಿಸಲು ಪಟ್ಟು

•ಕಿಮ್ಸ್‌ ನಿರ್ದೇಶಕರ ಪರ ನಿಂತ ಕರವೇ-ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು

Team Udayavani, Jun 29, 2019, 10:22 AM IST

uk-tdy-1..

ಕಾರವಾರ: ಕಿಮ್ಸ್‌ ನಿರ್ದೇಶಕರ ಪರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ದಲಿತಪರ ಸಂಘಟನೆಗಳ ಸದಸ್ಯರು.

ಕಾರವಾರ: ಮೆಡಿಕಲ್ ಕಾಲೇಜು ನಿರ್ದೇಶಕ ಶಿವಾನಂದ ದೊಡ್ಮನಿ ಅವರನ್ನು ಕಿಮ್ಸ್‌ ಕಾರವಾರದಲ್ಲಿ ಮುಂದುವರಿಸಿ ಎಂದು ಆಗ್ರಹಿಸಿ ಶುಕ್ರವಾರ ನಗರದಲ್ಲಿ ದಲಿತ ಸಂಘಟನೆ, ಕರವೇ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಯುವ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದವು.

ಸ್ವ ಹಿತಾಸಕ್ತಿ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಶಿವಾನಂದ ದೊಡ್ಮನಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ದಸಂಸ, ಕರವೇ(ಪ್ರವೀಣ ಶೆಟ್ಟಿ ಬಣ) ಹಾಗೂ ಯುವಕರು ಆರೋಪಿಸಿದರು.

ಪ್ರತಿಭಟನೆ ನೆಪದಲ್ಲಿ ಆಸ್ಪತ್ರೆ ಆವರಣದ ಒಳಗೆ ಧ್ವನಿ ವರ್ಧಕ ಅಳವಡಿಸಿ ಜನಶಕ್ತಿವೇದಿಕೆ ರೋಗಿಗಳಿಗೆ ತೊಂದರೆ ನೀಡಿದ್ದಾರೆ ಎಂದು ಕರವೇ ರಾಜೇಶ ನಾಯಕ ಹಾಗೂ ದಸಂಸ ದೀಪಕ ಕುಡಾಳಕರ್‌ ಆರೋಪಿಸಿದರು.

ಶಿವಾನಂದ ದೊಡ್ಮನಿ ವರ್ಗಾವಣೆ ಆದರೆ, ಕಾರವಾರಕ್ಕೆ ಬೇರೆ ಯಾರೂ ಬರುವುದಿಲ್ಲ. ಇಲ್ಲಿ ಕಿರುಕುಳ ನೀಡುವವರ ಬಗ್ಗೆ ಇಡೀ ರಾಜ್ಯಕ್ಕೆ ಪರಿಚಯವಾಗಿದೆ. ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಲು ಕೆಲವರು ಇದ್ದಾರೆ. ಕಾರವಾರ ಮೆಡಿಕಲ್ ಕಾಲೇಜಿಗೆ ನಷ್ಟ ಮಾಡಲೆಂದೇ ದೊಡ್ಮನಿ ಅವರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಇದನ್ನು ಸರ್ಕಾರ ಮನಗಾಣವೇಕು. ರಾಜ್ಯದ ಆರೋಗ್ಯ ಸಚಿವರಿಗೆ ಮತ್ತು ವೈದ್ಯಕೀಯ ಸಚಿವರಿಗೆ ಕಾರವಾರದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದು, ಸ್ಥಾಪಿತ ಹಿತಾಸಕ್ತಿಗಳಿಗೆ ಸರ್ಕಾರ ಕಿವಿಗೊಡಬಾರದು ಎಂದರು.

ಕಿರುಕುಳ ನೀಡುವವರನ್ನು ವರ್ಗಾಯಿಸಲಿ: ಕಿರುಕುಳ ನೀಡುವವರ ಬಗ್ಗೆ ನಾವು ಮಾಹಿತಿ ಕೊಟ್ಟಿದ್ದೇವೆ. ಸರ್ಕಾರ ಅಂಥವರನ್ನು ವರ್ಗಾಯಿಸಲಿ ಎಂದು ಕರವೇ ಆಗ್ರಹಿಸಿತು.

ಜಿಲ್ಲಾಸ್ಪತ್ರೆಯಲ್ಲಿ ಕಳೆದ 20 ವರ್ಷಗಳಿಂದ ವರ್ಗವಾಗದೇ, ರೋಗಿಗಳಿಂದ ಹಣ ಪಡೆದು ಚಿಕಿತ್ಸೆ ನೀಡುವ ವೈದ್ಯನಿದ್ದಾನೆ. ಅವರನ್ನು ಮೊದಲು ವರ್ಗಾಯಿಸಲಿ ಎಂದು ಸಹಾಯಕ ಕಮಿಷನರ್‌ ಅಭಿಜಿನ್‌ ಅವರಲ್ಲಿ ವಿನಂತಿಸಿಕೊಳ್ಳಲಾಯಿತು.

ಈಗ ಎಂಬಿಬಿಎಸ್‌ ಕಾಲೇಜಿನಲ್ಲಿ ಮೂರನೇ ಬ್ಯಾಚ್ ಅಧ್ಯಯನ ಮಾಡುತ್ತಿದೆ. ಒಂದು ಬ್ಯಾಚ್ ಈ ವರ್ಷ ಎಂಬಿಬಿಎಸ್‌ ಪೂರ್ಣಗೊಳಿಸಲಿದೆ. ಅಲ್ಲದೇ ಹೊಸದಾಗಿ ಎಂಬಿಬಿಎಸ್‌ ಕಲಿಕೆಯ ಬ್ಯಾಚ್ಗೆ ಗ್ರೀನ್‌ ಸಿಗ್ನಲ್ ಸಿಕ್ಕಿದೆ. ಸರ್ಕಾರ 150 ಕೋಟಿ ರೂ, ಅನುದಾನ ನೀಡಿ ಹೊಸದಾಗಿ 450 ಬೆಡ್‌ನ‌ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದೆ. ಮೆಡಿಕಲ್ ಕಾಲೇಜು ಬಂದ ನಂತರ ಪರೋಕ್ಷವಾಗಿ ಉದ್ಯೋಗ ಅವಕಾಶ ಹೆಚ್ಚಿವೆ. ವ್ಯಾಪಾರ ವಹಿವಾಟು, ಪ್ರವಾಸೋದ್ಯಮದ ಮೇಲೆ ಹೊಸ ಬೆಳಕು ಬಿದ್ದಿದೆ. ಟ್ರಾಮಾ ಸೆಂಟರ್‌, ಕ್ಯಾನ್ಸರ್‌ ಘಟಕ ಬರಲಿವೆ. ಸಿಟಿ ಸ್ಕ್ಯಾನರ್‌ ಎಲ್ಲಾ ವರ್ಗದ ಜನರಿಗೆ ಉಚಿತ ಸೇವೆ ನೀಡುತ್ತಿದೆ. ಡಯಾಲಿಸಿಸ್‌ ಘಟಕ, ಬ್ಲಿಡ್‌ ಬ್ಯಾಂಕ್‌ ಉತ್ತಮ ಸ್ಥಿತಿಯಲ್ಲಿವೆ. 60ಕ್ಕೂ ಹೆಚ್ಚು ವೈದ್ಯರ ಸೇವೆ ಜಿಲ್ಲೆಯ ಬಡ ರೋಗಿಗಳಿಗೆ ಸಿಗುತ್ತಿದೆ ಎಂದು ಕಿಮ್ಸ್‌ ಪರ ಸಂಘಟನೆಗಳು ಮನವಿಯಲ್ಲಿ ವಿವರಿಸಿವೆ.

ಕರವೇ, ದಸಂಸದವರು ಶಿವಾನಂದ ದೊಡ್ಮನಿ ವರ್ಗಾವಣೆ ವಿರೋಧಿಸಿ ಪ್ರತಿಭಟಿಸಿದರು. ಅಹವಾಲು ಆಲಿಸಿದ ಉಪ ವಿಭಾಗಾಧಿಕಾರಿ ಅಭಿಜಿನ್‌ ವಿವಿಧ ಸಂಘಟನೆಗಳು ಸಲ್ಲಿಸಿದ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಮನವಿ ನೀಡಿದ ನಂತರ ಎಂಬಿಬಿಎಸ್‌ ಕಾಲೇಜಿಗೆ ತೆರಳಿದ ಸಂಘಟನೆಗಳು ನಿರ್ದೇಶಕರಿಗೆ ಹೂವಿನ ಹಾರ ಹಾಕಿ ನೈತಿಕ ಬೆಂಬಲ ಸೂಚಿಸಿದವು.

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ

Sathish-sail–court

Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್‌ ಸೇರಿ ನಾಲ್ವರು ಹೈಕೋರ್ಟ್‌ಗೆ

ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

3-dandeli

Dandeli: ಸಂಡೇ ಮಾರ್ಕೆಟ್ ಬಳಿ ಸರಣಿ ಕಳ್ಳತನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.