ವಿದೇಶಿಗರಿಂದ ಜಾನಪದ ಅಧ್ಯಯನ
Team Udayavani, Jan 29, 2020, 4:56 PM IST
ಅಂಕೋಲಾ: ಪದ್ಮಶ್ರೀ ಪುರಸ್ಕೃತೆ ಸುಕ್ರಿ ಗೌಡರೊಂದಿಗೆ ವಿದೇಶಿ ಪ್ರಜೆಗಳು ಹಾಲಕ್ಕಿಗಳ ಉಡುಗೆಯಲ್ಲಿ. ಸುಕ್ರಿ ಗೌಡ ಮನೆಗೆ ಆಗಮಿಸಿದ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು. (ಬಲಚಿತ್ರ)
ಅಂಕೋಲಾ: ಜಾನಪದ ಕೋಗಿಲೆ ಪದ್ಮಶ್ರೀ ಪುರಸ್ಕೃತೆ ತಾಲೂಕಿನ ಬಡಗೇರಿಯ ಸುಕ್ರಿ ಗೌಡರ ಮನೆಗೆ ಆಗಮಿಸಿದ ಜರ್ಮನ್ ಮತ್ತು ಆಸ್ಟ್ರೀಯಾ ಪ್ರಜೆಗಳು ಸುಕ್ರಜ್ಜಿ ಜಾನಪದ ಹಾಡುಗಳಿಗೆ ಮಾರು ಹೋಗಿ ಎರಡು ದಿನ ಅವರ ಮನೆಯಲ್ಲಿಯೆ ಉಳಿದು ಅವರ ಉಡುಗೆ ತೊಡುಗೆ ತೊಟ್ಟು ಆನಂದಿಸಿದ್ದಾರೆ.
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಬಡಗೇರಿ ಸುಕ್ರಜ್ಜಿ ಮನೆಗೆ ಬುಡಕಟ್ಟು ಸಮುದಾಯ ಮತ್ತು ಅಲ್ಲಿಯ ಪರಿಸರದ ಕುರಿತು ಅಧ್ಯಯನಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರಿಗೆ ಆಗಮಿಸಿದ ಜರ್ಮನ್ ದೇಶದ ಮೆಕ್ಸಿಮಿಲನ್ ನೇರಲಿಂಗ ಆಸ್ಟ್ರಿಯಾದ ವೇಲೆರೀಯಾ ಸ್ಟ್ರೋಬ್ ವಿದ್ಯಾರ್ಥಿಗಳೊಂದಿಗೆ ಅತಿಥಿಗಳಾಗಿ ಆಗಮಿಸಿ ಸುಕ್ರಿ ಗೌಡರ ಜಾನಪದ ಭಂಡಾರಕ್ಕೆ ಮಾರು ಹೊಗಿದ್ದಾರೆ.
ಸುಮಾರು 4000 ಜಾನಪದ ಹಾಡುಗಳನ್ನು ಯಾವುದೇ ಪುಸ್ತಕದಲ್ಲಿ ಅಚ್ಚಾಗಿಸದೆ ತಮ್ಮಲ್ಲಿಯೆ ಭಂಡಾರವಾಗಿಸಿಕೊಂಡಿರುವ ಸುಕ್ರಜ್ಜಿ ಮತ್ತು ಅವರ ಸಮುದಾಯ ಇಲ್ಲಿಯ ಪರಿಸರದ ಕುರಿತು ಈ ತಂಡ ಅಧ್ಯಯನಕ್ಕೆ ಆಗಮಿಸಿತ್ತು.
ಕುಚಲಕ್ಕಿ ಊಟ : ಹಳ್ಳಿಯ ಸಂಪ್ರದಾಯದಂತೆ ಅಧ್ಯಯನ ಕೇಂದ್ರದ 30 ಮಕ್ಕಳ ತಂಡ ಮತ್ತು ವಿದೇಶದ ಈ ಪ್ರಜೆಗಳು ಹಳ್ಳಿಯ ಊಟವಾದ ಕುಚಲಕ್ಕಿ ಗಂಜಿ ಮೀನು ಊಟ ಸವಿದು ಇಲ್ಲಿಯೇ ವಾಸ್ತವ್ಯ ಮಾಡಿದರು. ಮುಂಜಾನೆ ಬೆಟ್ಟಕ್ಕೆ ಕಟ್ಟಿಗೆ ಹೊಗುವವರೊಂದಿಗೆ ಈ ತಂಡವು ತೆರಳಿ ಬೆಟ್ಟದಲ್ಲಿನ ಮರಗಿಡಗಳ ಅಧ್ಯಯನ ನಡೆಸಿತು.
ಹಳ್ಳಿ ಹಾಡಿಗೆ ಹೆಜ್ಜೆ ಹಾಕಿದ ವಿದೇಶಿಗರು : ಜರ್ಮನ್ ಮೂಲದ ಪ್ರಜೆಗಳು ಹಳ್ಳಿಯ ವಾತಾವರಣ ಣ ಸುಕ್ರಿ ಗೌಡರ ಜಾನಪದ ನೃತ್ಯಗಳು ಅದರಲ್ಲೂ ತಾರೆಲ ಕುಣಿತ ಣ ಈ ತಂಡದವರಿಗೆ ಮುದ ನೀಡಿತು. ಹಾಲಕ್ಕಿ ಸಮುದಾಯದವರ ಉಡುಗೆಯನ್ನು ವಿದೇಶಿ ಪ್ರಜೆಗಳು ಣತೊಟ್ಟು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಸುಕ್ರಜ್ಜಿ ತಂಡದೊಂದಿಗೆ ತಾವು ಕೂಡ ಹೆಜ್ಜೆ ಹಾಕಿದರು.
ಜರ್ಮನ್ ತಂಡದೊಂದಿಗೆ ಬರುತ್ತೇವೆ : ಹಾಲಕ್ಕಿ ಸಮುದಾಯದವರ ಸಾಂಪ್ರದಾಯಿಕ ಆಚಾರ ಣ ವಿಚಾರ, ಹಾಡು, ಕುಣಿತ, ಉಡುಗೆಗಳಿಗೆ ಮಾರುಹೊದ ವಿದೇಶಿ ಪ್ರಜೆಗಳು ಮತ್ತು ಅಧ್ಯಯನ ಕೇಂದ್ರದವರು ಸುಕ್ರಿ ಗೌಡರಿಗೆ ಸನ್ಮಾನಿಸಿ ಗೌರವ ನೀಡಿದ್ದಾರೆ. ಮುಂದಿನ ದಿನದಲ್ಲಿ ಜರ್ಮನ ದೇಶದಿಂದಲೇ ನಮ್ಮ ತಂಡ ಕರೆದುಕೊಂಡು ಇಲ್ಲಿಗೆ ಬರುವುದಾಗಿ ಹೇಳಿ ಹೋಗಿದ್ದಾರೆ.
ಮಂಗಳೂರಿನ ಮಕ್ಕಳೊಂದಿಗೆ ಎರಡು ದಿನ ಹೊರದೇಶದ ವರುಣ ನಮ್ಮ ಮನೆಯಲ್ಲಿ ಇದ್ದರು. ಇಲ್ಲೆ ಮಲಗಿ ನಮ್ಮ ಊಟವನ್ನೆ ಮಾಡಿದ್ದಾರೆ. ನಾವು ಕೂಡ ಅವರಿಗೆ ಜಾನಪದ ಹಾಡನ್ನ ಹೇಳಿ ನೃತ್ಯ ಮಾಡುವುದರ ಮೂಲಕ ಮನರಂಜನೆ ನೀಡಿದ್ದೆವು. –ಸುಕ್ರಿ ಗೌಡ ಪದ್ಮಶ್ರೀ ಪುರಸ್ಕೃತೆ
–ಅರುಣ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Mangaluru: ಕೊಕ್ಕಡದ ʼಸಾಂತಾ ಕ್ಲಾಸ್ʼ ವಿನ್ಸೆಂಟ್ ಕ್ರಿಸ್ಮಸ್ ತಿರುಗಾಟಕ್ಕೆ 25 ವರ್ಷ!
Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Akhila Bharata Kannada Sahitya Sammelana: ಹಚ್ಚೇವು ಕನ್ನಡದ ದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.