ಚತುಷ್ಪಥ, ಮೇಲ್ಸೇತುವೆ ಇಲ್ಲ -ನಿತ್ಯ ಅಪಘಾತ ತಪ್ಪಿಲ್ಲ

ಎಚ್ಚರವಾಗುತ್ತಿಲ್ಲ ರಾಜಕಾರಣಿಗಳು; ಬೇಕಿದೆ ಸಮಸ್ಯೆಗೆ ಶಾಶ್ವತ ಪರಿಹಾರ

Team Udayavani, Jul 19, 2022, 4:52 PM IST

23

ಹೊನ್ನಾವರ: ನೆರೆಯ ಜಿಲ್ಲಾ ಕೇಂದ್ರಗಳನ್ನು ಮತ್ತು ಗೋವಾ ರಾಜ್ಯವನ್ನು 180 ಕಿಮೀ ಅಂತರದಲ್ಲಿ ಜೋಡಿಸುವ ರಾಷ್ಟ್ರೀಯ ಹೆದ್ದಾರಿಯ ಪಟ್ಟಣದ ಕಾಲೇಜು ಸರ್ಕಲ್‌ನಲ್ಲಿ ನಿತ್ಯ ಎಂಬಂತೆ ಅಪಘಾತ ನಡೆಯುತ್ತಿದೆ.

ಸಕ್ಕರೆ ತುಂಬಿಕೊಂಡು ಮಂಗಳೂರಿಗೆ ಹೊರಟ ಲಾರಿಯೊಂದು ತಿರುವಿನಲ್ಲಿ ಪಲ್ಟಿಯಾಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದಿದೆ. ಹಗಲಿಗೆ ಆಗಿದ್ದರೆ ಅಥವಾ ವಿದ್ಯುತ್‌ ಕಂಬ ಇಲ್ಲವಾಗಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಹಗಲಲ್ಲಿ ಜನ ಓಡಾಡುತ್ತಿದ್ದರು. ಪಕ್ಕದಲ್ಲಿ ಪುಟ್ಟ ಒಂದು ಮನೆ ಇದೆ. ನಿತ್ಯ ಎಂಬಂತೆ ಇಲ್ಲಿ ಅಪಘಾತ ನಡೆಯುತ್ತಿದ್ದು, ಕಳೆದ ಹತ್ತು ವರ್ಷದಲ್ಲಿ ಹಲವರು ಮೃತಪಟ್ಟಿದ್ದಾರೆ. ಬಲಕ್ಕೆ ತಿರುಗಿದರೆ ದೊಡ್ಡ ಹೊಂಡವಿದೆ. ಆದ್ದರಿಂದ ಇಲ್ಲಿ ಚತುಷ್ಪಥ ನಿರ್ಮಾಣ ಆಗುವುದರ ಜೊತೆ ಮೇಲ್ಸೇತುವೆ ಬೇಕು ಎಂದು ಸಮೀಕ್ಷೆ ಮಾಡಿ ನಕ್ಷೆ ಸಿದ್ಧಪಡಿಸಿ ಭೂಮಿ ಪಡೆದು ಆಗಿತ್ತು.

ಒಂದಿಷ್ಟು ಜನ ಅಂದಿನ ಕಾಂಗ್ರೆಸ್‌ ಸರ್ಕಾರದ ಧುರೀಣರ ಮೇಲೆ ಒತ್ತಡ ತಂದು ಅವರಿಂದ ಕೇಂದ್ರ ಭೂ ಸಾರಿಗೆ ಮಂತ್ರಿ ನಿತಿನ್‌ ಗಡ್ಕರಿಯವರ ಮೇಲೆ ಪ್ರಭಾವಬೀರಿ ಚತುಷ್ಪಥವನ್ನು 30 ಮೀಟರ್‌ಗೆ ಇಳಿಸಿ ಮೇಲ್ಸೇತುವೆ ರದ್ದುಪಡಿಸಿದರು. ಈಗ 30 ಮೀಟರ್‌ ರಸ್ತೆಯೂ ಆಗಿಲ್ಲ, ಮೇಲ್ಸೆತುವೆ ಆಗುವುದಿಲ್ಲ. ಡಿಸೆಂಬರ್‌ ಒಳಗೆ ಕುಂದಾಪುರದಿಂದ ಗೋವಾ ಚತುಷ್ಪಥ ಉದ್ಘಾಟನೆಯಾಗುತ್ತದೆ ಎಂದು ನಿತಿನ್‌ ಗಡ್ಕರಿಯವರು ಹೇಳಿದ್ದಾರೆ.

ಇಲ್ಲಿಯ ಸಮಸ್ಯೆಯನ್ನು ನಿವಾರಿಸಿಕೊಡಿ ಎಂದು ಜನ ಹಲವು ಬಾರಿ ವಿನಂತಿ ಮಾಡಿದರು, ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಲಿಲ್ಲ. ಶಾಸಕ, ಸಂಸದರಿಗೆ ಮನವಿ ಕೊಟ್ಟರು. ಇನ್ನು ಹೊಸದಾಗಿ ರಾಜ್ಯ ಸರ್ಕಾರ ಜಾಗಕೊಟ್ಟರೆ ಕೇಂದ್ರದಿಂದ ಚತುಷ್ಪಥ ಮತ್ತು ಮೇಲ್ಸೇತುವೆ ಮಾಡಿಸಿಕೊಡುವುದಾಗಿ ಸಂಸದರು ಭರವಸೆಕೊಟ್ಟರು. ಆ ಕೆಲಸವೂ ಆಗಲಿಲ್ಲ. ಈಗ ಶಾಸಕರು, ಸಂಸದರು ಆ ಮಾತು ಮರೆತಿದ್ದಾರೆ.

ಡಿಸೆಂಬರ್‌ ಒಳಗೆ ಚತುಷ್ಪಥ ಮುಗಿಯಬೇಕು ಎಂದು ಮೊನ್ನೆ ಕಾರವಾರದಲ್ಲಿ ಸಂಸದರು ಹೇಳಿದ್ದಾರೆ. ಹೊನ್ನಾವರದಲ್ಲಿ ಮಾತ್ರ ಸದಾ ದಟ್ಟಣೆ ಇರುವ ಈ ಸರ್ಕಲ್‌ ದಾಟುವುದೇ ದೊಡ್ಡ ಸಮಸ್ಯೆ. ಪದೇ ಪದೆ ನಡೆಯುವ ಅಪಘಾತಗಳು ಎಚ್ಚರಿಸುತ್ತಿದ್ದರೂ ರಾಜಕಾರಣಿಗಳು ಎಚ್ಚರಾಗುತ್ತಿಲ್ಲ. ನಿತಿನ್‌ ಗಡ್ಕರಿಯವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿಕೊಟ್ಟು ಮತ್ತೆ ಚತುಷ್ಪಥ, ಮೇಲ್ಸೇತುವೆ ನಿರ್ಮಾಣ ಮಾಡಿಸುವುದು ಕನಸಿನ ಮಾತು.

-ಜೀಯು

ಟಾಪ್ ನ್ಯೂಸ್

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Text-Bokk

KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ

1-hejb

Israel ಸರ್ಜಿಕಲ್‌ ಸ್ಟ್ರೈಕ್‌: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್‌ ಬಾಂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-dandeli

Dandeli: ಕಾಳಿ ನದಿಗೆ ಜಿಗಿದ ಮಹಿಳೆಯ ಮೃತದೇಹ ಪತ್ತೆ

7

Joida: ಬಸ್ ನಿಲ್ದಾಣದಲ್ಲಿ ಚಾಲಕ, ನಿರ್ವಾಹಕನಿಂದ ಪ್ರಯಾಣಿಕನಿಗೆ ಹಲ್ಲೆ

6

Dandeli: ಗಣೇಶನಗರದಲ್ಲಿ ವಿವಾಹಿತ ಮಹಿಳೆ ನಾಪತ್ತೆ: ದೂರು ದಾಖಲು

Bheemanna-Naik

Sirsi: ಪಾಶ್ಚಾತ್ಯ ಅಡಿಕೆ ಆಮದು ನಿರ್ಬಂಧಕ್ಕೆ ಸಂಸದರು ಧ್ವನಿ ಎತ್ತಲಿ: ಶಾಸಕ ಭೀಮಣ್ಣ‌

Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ

Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

IPL Retentions: ಐಪಿಎಲ್‌ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

Kota-poojary

Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ

SSLLC

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

1-horoscope

Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.