ATM ನಿಂದ ಹಣ ಡ್ರಾ ಮಾಡಿಕೊಡುವುದಾಗಿ ವಂಚನೆ: ಮಹಿಳೆ ಬಂಧನ
Team Udayavani, Nov 12, 2023, 8:58 PM IST
ಮುಂಡಗೋಡ: ಎಟಿಎಮ್ ನಿಂದ ಹಣ ಡ್ರಾ ಮಾಡಿಕೊಡುವುದಾಗಿ ಹೇಳೆ ಮಹಿಳೆಗೆ ವಂಚಿಸಿದ ವಂಚಕಿಯನ್ನು ರವಿವಾರ ಇಲ್ಲಿನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಮೂಲದ ಸದ್ಯ ಶಿರಸಿಯಲ್ಲಿರುವ ಕೌಸರಾಬಾನು ಹಿರೇಕೆರೂರ(35) ಬಂಧಿತೆ. ಸೆ.25 ರಂದು ತಾಲೂಕಿನ ಮೈನಳ್ಳಿ ಗ್ರಾಮದ ಸಕೀನಾಬಿ ಸಲೀಂ ಎಂಬ ಮಹಿಳೆ ಪಟ್ಟಣದ ಕೆನರಾ ಬ್ಯಾಂಕಿನ ಎಟಿಎಮ್ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಈ ವೇಳೆ ಆರೋಪಿ ಕೌಸರಾ ಬಾನು ಹಣ ತೆಗೆದುಕೊಡುವುದಾಗಿ ಹೇಳಿ ಸಕೀನಾಬಿ ಅವರಿಗೆ ನಂಬಿಸಿ ಎಟಿಎಮ್ ಪಾಸ್‌ವರ್ಡನ್ನು ನೋಡಿಕೊಂಡು ಎಟಿಎಮ್ ಬದಲಿಸಿ ಬೇರೆ ಹೆಸಲಿನಲ್ಲಿರುವ ಎಟಿಎಮ್ ಕಾಡ್ ಕೊಟ್ಟು ಸಕೀನಾಬಿ ಅವರ ಖಾತೆಯಿಂದ69 ಸಾವಿರ ರೂ ಹಣವನ್ನು ತೆಗೆದು ವಂಚನೆ ಮಾಡಿದ್ದರ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ವಂಚನೆ ಪ್ರಕರಣವನ್ನು ಭೇದಿಸಲು ಸಿಪಿಐ ಬಿ.ಎಸ್ ಲೋಕಾಪುರ ನೇತೃತ್ವದ ವಿಶೇಷ ತಂಡವನ್ನು ರಚಿಸಿದ್ದರು. ರವಿವಾರ ವಂಚಕಿ ಕೌಸರಾಬಾನು ಅವಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಂಚನೆ ಮಾಡುತ್ತಿರುವ ಬಗ್ಗೆ ತಿಳಿದು ಬಂದಿದ್ದು ಆರೋಪಿತಳಿಂದ 12 ಸಾವಿರ ರೂ.ವಶಪಡೆದಿದ್ದಾರೆ.
ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಡಾ| ವಿಷ್ಣುವರ್ಧನ್, ಹೆಚ್ಚುವರಿ ವರಿಷ್ಠಾಧಿಕಾರಿ ಎಸ್. ಜಯಕುಮಾರ, ಶಿರಸಿಯ ಡಿಎಸ್‌ಪಿ ಗಣೇಶ ಕೆ.ಎಲ್ ರವರ ಮಾರ್ಗದರ್ಶನದಲ್ಲಿ ಸಿಪಿಐ ಬಿ ಎಸ್ ಲೋಕಾಪುರ ನೇತೃತ್ವದ ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನೂರು, ಹನಮಂತ ಕುಡಗುಂಟಿ, ಎಎಸ್‌ಐ ಗೀತಾ ಕಲಘಟಗಿ, ಸಿಬ್ಬಂದಿಗಳಾದ ಮಹಮ್ಮದ್ ಸಲೀಮ್, ಕೊಟೇಶ ನಾಗರವಳ್ಳಿ, ಬಸವರಾಜ ಲಮಾಣಿ, ತಿರುಪತಿ ಚೌಡಣ್ಣನವರ, ಅಣ್ಣಪ್ಪ ಬುಡಿಗೇರ, ಬಸವರಾಜ ಒಡೆಯರ್, ಪುಷ್ಪಾ ಕೂಳಗಿ, ರೇಖಾ ಹುಚ್ಚಣ್ಣವರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.