ಜನರಿಗೆ ಶಿಕ್ಷಣ, ಉದ್ಯೋಗ, ಸಬಲೀಕರಣ ಕೊಡುವುದು ಮುಖ್ಯ : ಸಿಎಂ ಬೊಮ್ಮಾಯಿ
Team Udayavani, Feb 28, 2023, 1:38 PM IST
ಕಾರವಾರ (ಸಿದ್ದಾಪುರ): ಮನುಷ್ಯರಿಗೆ ಶಿಕ್ಷಣ ಸಂಸ್ಕೃತಿ ಸಂಸ್ಕಾರ ಮುಖ್ಯ. ಇದು ಸಿದ್ದಾಪುರ ಜನತೆಯಲ್ಲಿದೆ. ಇದು ರಾಜ್ಯಕ್ಕೆ ಮಾದರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದರು. ಒಬ್ಬ ಶಾಸಕನ ಆಯ್ಕೆ ಸಹ ಅಷ್ಟೇ ಮುಖ್ಯ. ಆರು ಸಲ ಕಾಗೇರಿ ಅವರನ್ನು ಆರಿಸಿದ್ದೀರಿ. ಮುಂದಿನ ಸಲವೂ ಅವರನ್ನೇ ಆಯ್ಕೆ ಮಾಡುವಿರಿ ಎಂದು ಆಶಯ ವ್ಯಕ್ತಪಡಿಸಿದರು.
ಮಂಗಳವಾರ ಸಿದ್ದಾಪುರದ ನೆಹರು ಮೈದಾನದಲ್ಲಿ 6.60 ಕೋಟಿ ರೂ. ಕಾಮಗಾರಿಗಳನ್ನು ಉದ್ಘಾಟನೆ ಹಾಗೂ 53 ಕೋಟಿ ರೂ. ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಿದರು.
ನಂತರ ಮಾತನಾಡಿದ ಅವರು ಜನತೆಗೆ ಶಿಕ್ಷಣ, ಉದ್ಯೋಗ, ಜನರ ಸಬಲೀಕರಣ ಕೊಟ್ಟರೆ ಸಮಾಜ ತಾನಾಗಿಯೇ ಅಭಿವೃದ್ಧಿ ಕಾಣುತ್ತದೆ ಎಂದರು.
ಹಿಂದೆ ಅಭಿವೃದ್ಧಿ ಈ ದೇಶದಲ್ಲಿ ಜಿಡ್ಡುಗಟ್ಟಿತ್ತು. ಇದು ಆಗೋದಿಲ್ಲ ಎಂಬ ಭಾವನೆ ಇತ್ತು. ಆದರೆ ಪ್ರಧಾನಿ ಮನೆ ಮನೆಗೆ ಕುಡಿಯುವ ನೀರು ಕೊಡುವೆ ಎಂದರು. ಆ ಬಗ್ಗೆ ಕೆಲಸವಾಗ್ತಿದೆ. 43 ಲಕ್ಷ ಮನೆಗೆ ನೀರು ಕೊಡಲಾಗಿದೆ. ಸರ್ವೋದಯ ಮತ್ತು ನವೋದಯವೂ ನಮ್ಮ ಕಾಲದಲ್ಲಿ ಆಗುತ್ತಿದೆ. ವಿಜ್ಞಾನ ಬಳಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ವಿಶ್ವದಲ್ಲಿ ಆರ್ಥಿಕ ಹಿಂಜರಿತ ಇದೆ. ಜೀವನ ಗುಣಮಟ್ಟ ಕುಸಿಯುತ್ತಿದೆ. ಆದರೆ ಭಾರತದಲ್ಲಿ 6.7 ಜಿಡಿಪಿ ಗುಣಮಟ್ಟ ಏರಿದೆ. ಇದು ನಮ್ಮ ಜನರ ಕಾಯಕದ ಫಲ ಎಂದರು.
ಜನಸಂಖ್ಯೆಯನ್ನು ಲಾಭದಲ್ಲಿ ಬಳಸಿಕೊಂಡೆವು. ಶೇ.43 ಯುವಕರಿಗೆ ತಾಂತ್ರಿಕ ತರಬೇತಿ ಕೊಟ್ಟು ಅವರನ್ನು ನವೋದಯ ಕಡೆ ಕರೆದೊಯ್ಯಲಾಗುತ್ತಿದೆ ಎಂದರು. ವಿದೇಶ ಬಂಡವಾಳ ಸೆಳೆಯುವಲ್ಲಿ ನಾವು ದೇಶದ ರಾಜ್ಯಗಳ ಪೈಕಿ ನಾವು ಎರಡನೇ ಸ್ಥಾನದಲ್ಲಿ ಇದ್ದೇವೆ ಎಂದರು.
ಆದರೂ ಕೆಲವು ಕಡೆ ಅಸಮಾನತೆ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣದಲ್ಲಿ ಇನ್ನು ಹೆಚ್ಚಿನ ಕೆಲಸಗಳಾಗಬೇಕಿವೆ ಎಂದರು. ಪದವಿ ಹಾಗೂ ನಂತರದ ಹಂತದಲ್ಲಿ ಡ್ರಾಪೌಟ್ ತಡೆಯಲು 8 ಲಕ್ಷ ಬಡ ವಿದ್ಯಾರ್ಥಿಗಳಿಗೆ ವಿದ್ಯಾ ನಿಧಿ ಕೊಟ್ಟೆವು ಎಂದರು.
ವಿದ್ಯಾನಿಧಿ ಹಿಂದೆ ಆಗಬೇಕಿತ್ತು. ಆರೋಗ್ಯ ಕ್ಷೇತ್ರದಲ್ಲಿ ಹಿಂದೆ ಇದ್ದೇವೆ. ನನ್ನ ಅವಧಿಯಲ್ಲಿ ಆರೋಗ್ಯ ಇಲಾಖೆಗೆ ಹೊಸ ಅನುದಾನ ನೀಡಿದ್ದೇವೆ. 416 ನಮ್ಮ ಕ್ಲಿನಿಕ್ ಮಾಡಿದ್ದೇವೆ ಎಂದರು. ಹೀಗೆ ಬೊಮ್ಮಯಿ ತಮ್ಮ ಅವಧಿಯ ಅಭಿವೃದ್ಧಿ ಕೆಲಸವನ್ನು ಜನರ ಮುಂದಿಟ್ಟರು. ನಂತರ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದರು. ನಾನು ಮೀನು ಕೊಟ್ಟಿಲ್ಲ, ಮೀನು ಹಿಡಿಯುವುದನ್ನು ಕಲಿಸಿ, ಸ್ವಾವಲಂಬಿ ಗಳನ್ನಾಗಿ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:ಶಿರಸಿ: ಡೀಲ್ ನಿಮ್ದು, ಕಮಿಷನ್ ನಮ್ದು- ಆಹಾರದ ಕಿಟ್ ಸ್ಕ್ಯಾಮ್ ಆರೋಪದ ಪೋಸ್ಟರ್ ವೈರಲ್
ಸ್ಪೀಕರ್ ಕಾಗೇರಿ ಮಾತನಾಡಿ ಸಿದ್ದಾಪುರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ.ಬಡವರ ಮಕ್ಕಳ ಶಿಕ್ಷಣಕ್ಕೆ ಬೊಮ್ಮಾಯಿ ಆದ್ಯತೆ ನೀಡಿದ್ದಾರೆಂದರು. ನನ್ನ ಅಭಿವೃದ್ಧಿ ಕೆಲಸಗಳಿಗೆ ಉಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ನಾನು ಹೆದರುವುದಿಲ್ಲ ಎಂದರು. ಈ ಸಲವೂ ನಾನೇ ಗೆಲ್ಲುವೆ ಎಂದರು.
ವೇದಿಕೆಯಲ್ಲಿ ವಿಧಾನಪರಿಷತ್ ಸ್ಪೀಕರ್ ಬಸವರಾಜ ಹೊರಟ್ಟಿ, ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ, ಸಚಿವ ಶ್ರೀನಿವಾಸ ಪೂಜಾರಿ,ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.