ಮಹಿಳಾ-ಮಕ್ಕಳ ಇಲಾಖೆಯಲ್ಲಿ ಗೊಲ್ಮಾಲ್: ಆಕ್ರೋಶ
Team Udayavani, Jun 28, 2019, 2:43 PM IST
ಅಂಕೋಲಾ: ತಾ.ಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಸುಜಾತಾ ಗಾಂವಕರ ಆಯವ್ಯಯ ಮಂಡಿಸಿದರು.
ಅಂಕೋಲಾ: ಮಹಿಳಾ ಸ್ವಸಹಾಯ ಗುಂಪುಗಳಿಗೆ ತರಬೇತಿಗೆಂದು ಬಂದಿರುವ ಒಂದು ಲಕ್ಷ ರೂ. ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಗೊಲ್ಮಾಲ್ ನಡೆದ ಸಂಗತಿ ತಾ.ಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸ ಒದಗಿಸಿತು.
ಈ ಕುರಿತು ತಾ.ಪಂ ಅಧ್ಯಕ್ಷೆ ಸುಜಾತಾ ಗಾಂವಕರ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ಅರುಣ ನಾಯ್ಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರ ಪ್ರತಿ ತಾಲೂಕಿಗೆ ಒಂದು ಲಕ್ಷ ರೂ. ಅನುದಾನವನ್ನು ಮಹಿಳಾ ಸ್ವಸಹಾಯ ಗುಂಪುಗಳ ತರಬೇತಿಗೆಂದು ಚುನಾವಣೆಗಿಂತ ಪೂರ್ವದಲ್ಲಿಯೇ ನೀಡಿತ್ತು. ಆದರೆ ಇಲಾಖೆಯು ಯಾರ ಗಮನಕ್ಕೂ ತಾರದೆ ಮಹಿಳೆಯರಿಗೆ ತರಬೇತಿಯನ್ನೂ ನೀಡದೆ ಸಾಂತ್ವನ ಮಹಿಳಾ ಕೇಂದ್ರದವರಿಗೆ ಹಣ ನೀಡಿ ಕೈ ತೊಳೆದು ಕೊಂಡಿದೆ ಎಂದು ಆರೋಪಿಸಿದರು. ಇಲಾಖೆ ಅಧಿಕಾರಿ ಕೇಳಿದರೆ ಕಾರವಾರ ಮತ್ತು ಕುಮಟಾ ತಾಲೂಕಿನವರು ಈ ಸಾಂತ್ವನ ಕೇಂದ್ರದವರಿಗೆ ಹಣ ನೀಡಿದ್ದರಿಂದ ನಾನು ನೀಡಿದ್ದೇನೆ. ಎಂದು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಈ ತರಬೇತಿ ಯಾರಿಗೂ ತಿಳಿಯದೆ ಗಪ್-ಚುಪ್ ನಡೆದಿದೆಯಾ ಅಥವಾ ತರಬೇತಿ ನಡೆಯದೆ ಹಣ ಗುಳಂ ಮಾಡಲಾಗಿದೆಯೋ ತನಿಖೆಯಿಂದ ಹೊರ ಬರಬೇಕಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಶುದ್ಧ ಕುಡಿಯುವ ನೀರಿನ ಘಟಕ ತಾಲೂಕಿನಾದ್ಯಂತ ಸಂಪೂರ್ಣ ಕಳಪೆಯಾಗಿದೆ. ಸರ್ಕಾರ ಸಾರ್ವಜನಿಕರ ಆರೋಗ್ಯದ ದೃಷ್ಟಿಯಲ್ಲಿ ಶುದ್ಧ ನೀರಿನ ಘಟಕವನ್ನು ಕೊಟ್ಟಿದೆ. ಆದರೆ ನಮ್ಮ ತಾಲೂಕಿನಲ್ಲಿ ಮಾತ್ರ ನೀರಿನ ಮೂಲವನ್ನು ನೋಡಿಕೊಳ್ಳದೆ ಬೇಕಾಬಿಟ್ಟಿ ಘಟಕ ಮಾಡಿದ್ದಾರೆ. ಕಳೆದ ಒಂದು ವರ್ಷಕ್ಕಿಂತಲೂ ಮೊದಲೇ ಈ ಘಟಕದಲ್ಲಿ ನೀರಿನ ಬದಲು ಯಂತ್ರಗಳು ತುಕ್ಕು ಹಿಡಿಯುತ್ತಿದೆ ಎಂದರು. ಕೂಡಲೆ ಗುತ್ತಿಗೆದಾರನನ್ನು ಕರೆಸಿ ಸರಿಪಡಿಸಿ. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅವರ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.
ಐಆರ್‌ಬಿ ಕಂಪನಿಯವರು ಗುತ್ತಿಗೆ ಪಡೆದ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಗಿಯುವುದೇ ಇಲ್ಲ. ಈ ಹೆದ್ದಾರಿ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ಆಗದ ಹಾಗೆ ಕಾಮಗಾರಿ ಕೈಗೊಳ್ಳಿ ಎಂದು ತಾಪಂ ಅಧ್ಯಕ್ಷೆ ಐಆರ್‌ಬಿಗೆ ಹೇಳಿದರು.
ಕಂಪನಿ ಅಧಿಕಾರಿ ಮಾತನಾಡಿ ಅಂಕೋಲಾ ತಾಲೂಕಿನಲ್ಲಿ ಹೆದ್ದಾರಿ ಅಂಚಿನ 285 ಜಮೀನು ಸಮಸ್ಯೆಯಲ್ಲಿರುವುದರಿಂದ ಒತ್ತುವರಿ ಆಗಲಿಲ್ಲ. ಅದಕ್ಕಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದರು.
ಮಂತ್ರಿಗಳಿಗೆ ಆರೋಗ್ಯ ಹದಗೆಟ್ಟರೆ ಹೆಲಿಕಾಪ್ಟರ್ ಇದೆ. ಆದರೆ ಸರಕಾರ ಬಡ ರೋಗಿಗಳಿಗೆ ಯಾಕೆ ಇಂತಹ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಸುಸಜ್ಜಿತವಾದ ಐಸಿಯು ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇದ್ದಲ್ಲಿ ಅವಘಡಗಳು ಸಂಭವಿಸುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಿ ಎಂದು ಡಾ| ಮಹೇಂದ್ರ ನಾಯಕ ಹೇಳಿದರು. ತಾ.ಪಂ ಇಓ ಕರೀಂ ಅಸದಿ, ತಾ.ಪಂ ಉಪಾಧ್ಯಕ್ಷೆ ತುಳಸಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ತಾ.ಪಂ ಸದಸ್ಯರು ಮತ್ತು ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.