ಶಿರಸಿಯಲ್ಲೇ ಬರೆದ ‘ನೋಡ್ಯಾಳ ರೊಕ್ಕ, ಬರತಾಳ ಪಕ್ಕ’ ನಾಟಕಕ್ಕೆ ಭರ್ಜರಿ ರೆಸ್ಪಾನ್ಸ್
Team Udayavani, Apr 4, 2022, 2:33 PM IST
ಶಿರಸಿ: ಶಿರಸಿಯಲ್ಲೇ ಕುಳಿತು ಬರೆದ ನಾಟಕವೊಂದು ಕಳೆದ ಎರಡು ವಾರದಿಂದ ಹೌಸ್ ಫುಲ್ ಪ್ರದರ್ಶನವಾಗಿ ರಂಗದಲ್ಲಿ ಓಡುತ್ತಿದೆ.
ನಗರದಲ್ಲಿ 2018ರ ಲಾಕ್ ಡೌನ್ ನಲ್ಲಿ ದಾವಣಗೆರೆಯ ಕೆಬಿಆರ್ ಡ್ರಾಮಾ ಕಂಪನಿಯ ನಾಟಕಕಾರ, ಕಲಾವಿದ ಚಿಂದೋಡಿ ಶ್ರೀಕಂಠೇಶ ಅವರು ನೋಡ್ಯಾಳ ರೊಕ್ಕ, ಬರತಾಳ ಪಕ್ಕ ನಾಟಕ ಬರೆದಿದ್ದರು. ಅದು ಈಗ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಹಾಕಿದ ನಾಟಕ ಟೆಂಟ್ ನಲ್ಲಿ ನಿತ್ಯ ಎರಡು ಪ್ರದರ್ಶನ ಕಾಣುತ್ತಿದೆ.
ಸುಮಾರು 13 ಕಲಾವಿದರು ರಂಗದಲ್ಲಿ ಮನ ಮಿಡಿಯುವ ಕಥೆ ಪ್ರದರ್ಶನ ನೀಡಲಿದ್ದು, ಇಡೀ ಕುಟುಂಬ ನೋಡಬಹುದಾದ ಹಾಸ್ಯ ಭರಿತ ನಾಟಕವೂ ಇದಾಗಿದೆ.
ಲಾಕ್ ಡೌನ್ ಕಥೆ:
ಕಳೆದ 2018 ರ ಮಾರಿಕಾಂಬಾ ದೇವಿ ಜಾತ್ರಾಮಹೋತ್ಸವಕ್ಕೆ ಕೆಬಿಆರ್ ಡ್ರಾಮಾ ಕಂಪನಿ ಕೂಡ ಟೆಂಟ್ ಹಾಕಿತ್ತು. ಆದರೆ, ಕೊರೋನಾ ಕಾರಣದಿಂದ ನಾಟಕ ಪ್ರದರ್ಶನ ನಿಲ್ಲಿಸಬೇಕಾಯಿತು.
ಆಗ ಬಹುತೇಕ ಕಲಾವಿದರೆಲ್ಲ ಇಲ್ಲೇ ಉಳಿದರು. ಆ 2 ತಿಂಗಳ ಸಮಯದಲ್ಲಿ ಕಂಪನಿಯ ಯಜಮಾನರೂ ಆದ ಚಿಂದೋಡಿ ಶ್ರೀಕಂಠೇಶ ಅವರು ಈ ನಾಟಕ ಬರೆಯಲು ಆರಂಭಿಸಿದರು. ತಾಯಿಕೃಪೆ ಒಳ್ಳೆಪ್ರತಿಕ್ರಿಯೆ ಇದೆ ಎನ್ನುತ್ತಾರೆ ಶ್ರೀಕಂಠೇಶ.
ಹಲವಡೆ ಪ್ರದರ್ಶನ:
ನೋಡ್ಯಾಳ ರೊಕ್ಕ, ಬರ್ತಾಳ ಪಕ್ಕ ನಾಟಕ ಈಗಗಾಗಲೇ ಕೊಪ್ಪಳ ಸೇರಿದಂತೆ ಅನೇಕ ಕಡೆ ಪ್ರದರ್ಶನ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿಯದ್ದೂ ಸೇರಿಸಿ ಶಿರಸಿಯಲ್ಲಿ ಇದರ ಪ್ರದರ್ಶನ ಒಟ್ಟೂ 300 ದಾಟಿದೆ ಎಂಬುದು ಖುಷಿ ಎನ್ನುತ್ತಾರೆ ನಾಟಕಕಾರ, ಕಲಾವಿದ ಶ್ರೀಕಂಠೇಶ.
ಶ್ರೀಕಂಠೇಶ ಅವರು ಈ ಮೊದಲು ಹಿಂದೆ ನಿದ್ದೆಗೆಡಿಸ್ಯಾಳ ಬಸಲಿಂಗಿ, ಸಿಂಪಲ್ ಹುಡುಗ ಡಿಂಪಲ್ ಹುಡುಗಿ ನಾಟಕ ಬರೆದಿದ್ದರು. ಇದೀಗ ಈ ರಂಗ ಪ್ರಯೋಗ ಮೂರನೇ ಕೃತಿ 300 ಪ್ರದರ್ಶನ ದಾಟಿಸಿದೆ.
ಕೌಟುಂಬಿಕ ಕಥಾನಕ:
ನಿವೃತ್ತ ಅಂಚೆ ಅಧಿಕಾರಿ ಕುಟುಂಬ, ಮಗಳ ಮದುವೆ, ವರದಕ್ಷಿಣೆ, ಕಡ್ನಿ ಮಾರಾಟ ಸುತ್ತ ಇದೆ. ಒಂದೇ ಕಡೆ ಕಡ್ನಿ ಮಾರಾಟ, ಹಣ ಪಡೆದ ಬೀಗರು, ಮಧು ಮಕ್ಕಳ ಪ್ರಥಮ ರಾತ್ರಿ ದೃಶ್ಯವನ್ನು ಲೈಟಿಂಗ್ ಬೆಳಕಿನಲ್ಲಿ ಸಂಯೋಜಿಸಿದ್ದಾರೆ. ಹಾಸ್ಯ ಈ ನಾಟಕದ ವಿಶೆಷವಾಗಿದೆ. ಬೀಗರ ಪಾತ್ರವನ್ನು ವಿಶಿಷ್ಟವಾಗಿ ಕಟ್ಟಲಾಗಿದೆ.
ಚಲನಚಿತ್ರ ನಟ ವಿಜಯಕುಮಾರ ಕೂಡ ಪಾತ್ರ ಮಾಡುತ್ತಿದ್ದಾರೆ. ಚಿಂದೋಡಿ ವಿಜಯಕುಮಾರ್ ಜೊತೆ ಅಜಿತ್ ಕುಮಾರ, ರಾಘು, ಸಿ.ಕೆ.ಮಂದಾಕಿನಿ, ಸಿ.ವಿ.ದೀಪಾ, ಕಾಂಚನ, ಚಿಂದೋಡಿ ಶ್ರೀಕಂಠೇಶ, ಕಿಶೋರಕುಮಾರ, ಲಕ್ಷ್ಮೀ, ಆನಂದ ಇತರರು ರಂಗದಲ್ಲಿ ಇದ್ದಾರೆ.
ಅಪರೂಪದ ಕಥಾ ಹಂದರದ ನಾಟಕ. ಕಳೆದ ಲಾಕ್ ಡೌನ್ ವೇಳೆ ಬರೆದ ನಾಟಕ. ಇಡೀ ಕುಟುಂಬ ನರ್ತಿಸುವ ಹಾಡೂ ಇದೆ.–ಶ್ರೀಕಂಠೇಶ, ನಾಟಕಕಾರ
ಈ ನಾಟಕದಲ್ಲಿ ಹಾಸ್ಯ ಇಷ್ಟವಾಯಿತು. ಹೊಸತನ ಇತ್ತು.-ಮಧುರಾ ಭಟ್ಟ ಕಕ್ಕಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.