ಕಾಯಕಲ್ಪಕ್ಕೆ ಕಾಯುತ್ತಿವೆ ಸರ್ಕಾರಿ ಶಾಲೆ

ಅಮದಳ್ಳಿ-ಅರಗಾ-ಕಲ್ಲೇಶ್ವರ ಶಾಲೆಗಳ ಅಭಿವೃದ್ಧಿಗೆ 60.65 ಲಕ್ಷ ರೂ. ನೀಲ ನಕಾಶೆ ಸಿದ್ಧ-ಪ್ರಸ್ತಾವನೆ ಸಲ್ಲಿಕೆ

Team Udayavani, Dec 27, 2020, 3:29 PM IST

ಕಾಯಕಲ್ಪಕ್ಕೆ ಕಾಯುತ್ತಿವೆ ಸರ್ಕಾರಿ ಶಾಲೆ

ಕಾರವಾರ: ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಅವಕಾಶವಿದ್ದು, ಶಾಸಕಿ ರೂಪಾಲಿ ನಾಯ್ಕ ಕಾರವಾರ ತಾಲೂಕಿನ ಕರ್ನಾಟಕ ಪಬ್ಲಿಕ್‌ ಶಾಲೆ ಅಮದಳ್ಳಿ,ಅರಗಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಕೋಲಾಕಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಗಳ ಅಭಿವೃದ್ಧಿಗೆ ನೀಲ ನಕಾಶೆ ರೂಪಿಸಿ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.

ಶಾಲೆಗಳ ದತ್ತು ಯೋಜನೆಯಡಿ ಅಭಿವೃದ್ಧಿ ಕೆಲಸಗಳ ಕಡತ ಸಹಾಯಕ ಕಮಿಷನರ್‌ ಮುಂದಿದೆ.ದತ್ತು ಪಡೆದ ಶಾಲೆಗಳ ಹೆಸರು ಮತ್ತು ಅಲ್ಲಿಆಗಬೇಕಾದ ಸವಲತ್ತುಗಳ ಮಾಹಿತಿ ಸಾರ್ವಜನಿಕಶಿಕ್ಷಣ ಇಲಾಖೆ ಮೂಲಕ ಸಹಾಯಕ ಕಮಿಷನರ್‌ಕಚೇರಿ ತಲುಪಿದೆ. ಸಹಾಯಕ ಕಮಿಷನರ್‌ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಶಾಸಕರು ನೀಡಿರುವಯೋಜನೆಗಳು ಅವಶ್ಯ ಇವೆಯೇ ಎಂದು ಪರಿಶೀಲಿಸಿ,ಕಾಮಗಾರಿಗಳಿಗೆ ಏಜೆನ್ಸಿ ಹಾಗೂ ಕೆಲಸದ ಪ್ರಗತಿಗೆತಕ್ಕಂತೆ ಹಣ ಬಿಡುಗಡೆ ಮಾಡುವ ಅಧಿಕಾರ ಹೊಂದಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಇದೀಗ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 60.60 ಲಕ್ಷ ರೂ.ಗಳನ್ನು ಮೂರು ದತ್ತು ಶಾಲೆಯವಿವಿಧ ಕಾಮಗಾರಿಗೆ ಹಂಚಿದ್ದಾರೆ. ಅರಗಾ ಶಾಲೆಗೆ 17.20 ಲಕ್ಷರೂ. ಅನುದಾನ ನೀಡಿದ್ದಾರೆ. ಇದರಲ್ಲಿ 8 ಲಕ್ಷ ರೂ. ಕಾಂಪೌಂಡು,2 ಲಕ್ಷದ ಪ್ರೋಜೆಕ್ಟರ್‌, 2 ಲಕ್ಷ ರೂ. ಪೀಠೊಪಕರಣಕ್ಕೆ ವೆಚ್ಚಮಾಡುವಂತೆ ಸೂಚಿಸಿದ್ದಾರೆ. ಅಲ್ಲದೇ 5 ಲಕ್ಷ ರೂ.ದಲ್ಲಿ ಪ್ರಯೋಗಾಲಯ ಸಾಮಾಗ್ರಿ, ಗ್ರಂಥಾಲಯಕ್ಕೆ ಪುಸ್ತಕ, ಕಪಾಟು ಖರೀದಿಸಲು ಹೇಳಿದ್ದಾರೆ.

ಅರಗಾ ಹಿರಿಯ ಪ್ರಾಥಮಿಕ ಶಾಲೆ :

ಅರಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 28 ವಿದ್ಯಾರ್ಥಿಗಳಿದ್ದಾರೆ. ಮೂವರು ಶಿಕ್ಷಕಿಯರಿದ್ದಾರೆ. 100 ವರ್ಷದ ಹಳೆಯ ಕಟ್ಟಡವಿದೆ. ಮಧ್ಯದ ಮಣ್ಣಿನ ಗೋಡೆ ವರಲೆ ಬಂದಿದೆ. ಹೆಂಚು ಒಡೆದಿವೆ. ಈ ಹಳೆಯ ಶಾಲಾಕಟ್ಟಡವನ್ನು ಪ್ರತಿವರ್ಷ ರಿಪೇರಿ ಮಾಡಿದರೂಕಾಯಕಲ್ಪ ಕಂಡಿಲ್ಲ. ಹಾಗಾಗಿ 2009 ರಲ್ಲಿ ನೆರೆಕಾರಣ ಮಂಜೂರಾದ ಶಾಲಾ ಕಟ್ಟಡ ಕೋಣೆ 2012ರಲ್ಲಿ ಮುಗಿಗಿದೆ. ಈ ಹೊಸ ಕೊಠಡಿಪಕ್ಕ ನೂತನ ಕೊಠಡಿ ಮಾಡಿಕೊಟ್ಟರೆ ಹೆಚ್ಚು ಅನುಕೂಲ. ಹಳೆಯ ಕಟ್ಟಡ ತೆರವು ಮಾಡಿದರೆ,ಆಟದ ಮೈದಾನ ವಿಶಾಲವಾಗುತ್ತದೆ. ಉಳಿದಂತೆತರಗತಿ ನಡೆಸಲು ಅಗತ್ಯ 5 ಕೋಣೆಗಳಿವೆಎಂಬುದು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕಿಯರ ಅಭಿಪ್ರಾಯ.

ಪ್ರಯೋಗಾಲಯ ಸಾಮಾಗ್ರಿ, ಪೀಠೊಪಕರಣಗಳು ಇವೆ. ಮತ್ತೆ ಅವನ್ನು ಹೆಚ್ಚುವರಿಯಾಗಿ ನೀಡುವ ಬದಲು, ಹತ್ತು ಕಂಪ್ಯೂಟರ್‌, ಅದಕ್ಕೆ ಬೇಕಾದ ಅಳವಡಿಕೆವ್ಯವಸ್ಥೆ ಹಾಗೂ ವಿದ್ಯುತ್‌ ಬಿಲ್‌ ಭರಿಸಲು ಎರಡು ಲಕ್ಷ ರೂ. ಫಿಕ್ಸ್‌ ಡೆಪಾಜಿಟ್‌ ಮಾಡಿದರೆ ಕಂಪ್ಯೂಟರ್‌ ಕೋಣೆಯ ವಿದ್ಯುತ್‌ ಬಿಲ್‌ ಸಹ ಭರಿಸಬಹುದು. ಕಂಪ್ಯೂಟರ್‌ ಕೋಣೆಗೆ ಇಂಟರ್‌ನೆಟ್‌ ಅಳವಡಿಸಿಕೊಂಡರೆ ಇ-ಲೈಬ್ರರಿಯಾಗಿಬಳಸಬಹುದಾಗಿದೆ. ಈಗ ಸಲ್ಲಿಸಿರುವ ಪ್ರಸ್ತಾವನೆಶಾಲೆಯ ಅಗತ್ಯಕ್ಕೆ ತಕ್ಕಂತೆ ಬದಲಿಸಬೇಕು ಎಂಬುದು ಶಿಕ್ಷಕರ ಅಭಿಮತ.

ಅರಗಾ ಶಾಲೆಯ ಹಳೆಯ ಕಟ್ಟಡ ತೆಗೆದು ಒಂದು ಕೋಣೆ ನಿರ್ಮಿಸಿಕೊಟ್ಟರೆ ನಮಗೆ ಅನುಕೂಲ. ಇದರಿಂದ ವಿದ್ಯಾರ್ಥಿಗಳಿಗೆ ಹೊಸ ಕೊಠಡಿ ಜೊತೆಗೆ ಆಟದ ಮೈದಾನವೂವಿಸ್ತಾರವಾಗಲಿದೆ. 1 ಎಕರೆ ಜಾಗ ನಮ್ಮಶಾಲೆಗಿದ್ದು, ಈಗ ಅಪೂರ್ಣವಾಗಿರುವಶಾಲಾ ಕಂಪೌಂಡು ಪೂರ್ಣನಿರ್ಮಿಸಿಕೊಡಬೇಕು. ಹಾಗೂ ಹತ್ತುಕಂಪ್ಯೂಟರ್‌ ಕೊಟ್ಟರೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ. – ಮಂಜುಳಾ ನಾಯ್ಕ, ಮುಖ್ಯೋಪಾಧ್ಯಾಯರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಗಾ.

ಅಮದಳ್ಳಿ ಕರ್ನಾಟಕ ಪಬ್ಲಿಕ್‌ ಶಾಲೆ:

ಅಮದಳ್ಳಿ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ 97 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ 25.20 ಲಕ್ಷ ವ್ಯಯಿಸಲು ಶಾಸಕರು ಪ್ರಸ್ತಾವನೆ ಕಳುಹಿಸಿದ್ದಾರೆ. ಈ ಮೊತ್ತದಲ್ಲಿ ಶಾಲೆಗೆ ಪ್ರವೇಶ ದ್ವಾರ(ಸ್ವಾಗತ ಆರ್ಚ್‌), 1 ಶಾಲಾ ಕೊಠಡಿ, ಸ್ಮಾರ್ಟ್‌ಕ್ಲಾಸ್‌, ಪ್ರಯೋಗಾಲಯ ಸಾಮಾಗ್ರಿ, ಕ್ರೀಡಾ ಸಾಮಾಗ್ರಿ, ಸಿಸಿ ಟಿವಿ ಕ್ಯಾಮರಾಗಳು, ಗ್ರಂಥಾಲಯ ಮಾಡಲು ಸೂಚಿಸಲಾಗಿದೆ.

ಅಮದಳ್ಳಿ ಶಾಲೆಗೆ ಹೆಚ್ಚಿನ ಅನುಕೂಲಗಳು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಆಗಲಿ ಎಂದು ಬಯಸುತ್ತೇವೆ. ಅದಷ್ಟು ಬೇಗ ಕಾಮಗಾರಿಗಳು ಆಗಲಿ. ನಮಗೆ ಒಂದು ಕೊಠಡಿಯ ಅವಶ್ಯಕತೆ ಇದೆ. ಅದು ಬೇಗ ಆಗಲಿದೆ ಎಂಬ ನಿರೀಕ್ಷೆ ಇದೆ. ಸ್ಮಾರ್ಟ್‌ಕ್ಲಾಸ್‌ ಆದರೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಕವಾಗಿ ಕಲಿಯಬಹುದು.ಖಾಸಗಿಯವರಿಗಿಂತ ನಾವೇನು ಕಡಿಮೆಯಿಲ್ಲ ಎಂಬಭಾವನೆ ತಾನಾಗಿಯೇ ಪೋಷಕರಲ್ಲಿ ಬೆಳೆಯಲಿದೆ.  –ಪಿ.ಎಚ್‌. ನಾಯ್ಕ ಕರ್ನಾಟಕ ಪಬ್ಲಿಕ್‌ ಶಾಲೆ. ಅಮದಳ್ಳಿ.

ಕಲ್ಲೇಶ್ವರ ಸರ್ಕಾರಿ ಪ್ರೌಢಶಾಲೆ :

ಅಂಕೋಲಾ ತಾಲೂಕಿನ ಕಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೈಕಲ್‌ ಸ್ಟ್ಯಾಂಡ್‌, 3 ಕೊಠಡಿಗೆ ಟೈಲ್ಸ್‌ ಅಳವಡಿಕೆ, 2 ಕಂಪ್ಯೂಟರ್‌, ಕಟ್ಟಡಕ್ಕೆ ಸುಣ್ಣಬಣ್ಣ,ಕ್ರೀಡಾ ಸಾಮಾಗ್ರಿ, ಪ್ರಯೋಗಾಲಯಸಾಮಾಗ್ರಿ ಒದಗಿಸಲು 18.25 ಲಕ್ಷ ರೂ. ಅನುದಾನವನ್ನು ಶಾಸಕರು ನೀಡಿದ್ದಾರೆ.

ಕಲ್ಲೇಶ್ವರ ಪ್ರೌಢಶಾಲೆಗೆ ಈಚೆಗೆ ನಾನು ವರ್ಗಾವಣೆಯಾಗಿ ಬಂದಿರುವೆ. ಶಾಲೆ ದತ್ತು ಬಗ್ಗೆ ಪತ್ರಿಕೆಗಳಲ್ಲಿ ನೋಡಿದ್ದೆ. ಅದು ಅನುಷ್ಠಾನವಾದರೆ ಸಂತೋಷ. ಶಾಲೆಯ ಅವಶ್ಯಕತೆಗಳು ಬೇಗ ಅನುಷ್ಠಾನವಾಗಲಿ ಎಂದು ಬಯಸುವೆ. ಅದು ವಿದ್ಯಾರ್ಥಿಗಳಿಗೆ ಅನುಕೂಲ.  –ಪಾರ್ವತಿ ನಾಯ್ಕ, ಮುಖ್ಯೋಪಾಧ್ಯಾಯರು. ಸರ್ಕಾರಿ ಪ್ರೌಢಶಾಲೆ, ಕಲ್ಲೇಶ್ವರ

ದತ್ತು ಪಡೆದ ಶಾಲೆಗಳ ಮೂಲ ಸೌಕರ್ಯ ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಹೆಚ್ಚು ಅವಕಾಶ ಮಾಡಿಕೊಡುವ ಉದ್ದೇಶ ನನ್ನದು. ಶಾಲೆಯ ಅವಶ್ಯಕತೆಗಳನ್ನು ಡಿಡಿಪಿಐ ಜೊತೆ ಚರ್ಚಿಸಿ, ಕೆಲ ಬದಲಾವಣೆ ಮಾಡಿ ಕೊಳ್ಳಬಹುದು. ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಬೇಕಷ್ಟೆ.-ರೂಪಾಲಿ ನಾಯ್ಕ, ಶಾಸಕರು.

 

ನಾಗರಾಜ ಹರಪನಹಳ್ಳಿ

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಶಿಕ್ಷಣ ಸಚಿವರ ಮನವಿ

ಮಕ್ಕಳನ್ನು ಶಾಲೆಗೆ‌ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

drowned

Honnavar;ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವತಿಯರ ರಕ್ಷಣೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

ಮುಂಡಗೋಡ: ಮಂಗನಬಾವು ಉಲ್ಬ‌ಣ-ಮೂರು ದಿನ ಶಾಲೆಗೆ ರಜೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.