ಅರ್ಹ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ
Team Udayavani, Jan 3, 2022, 3:20 PM IST
ಶಿರಸಿ: ಮೂರು ವರ್ಷಗಳಕ್ಕಿಂತಲೂ ಹೆಚ್ಚು ಅನುಭವ ಹೊಂದಿದ ಅರ್ಹ ಉಪನ್ಯಾಸಕರನ್ನು ಖಾಯಂ ಗೊಳಿಸಿ ಎಂದು ನಗರದ ಮಾರಿಕಾಂಬಾ ಕಾಲೇಜ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಿದರು.
ಅರ್ಹರಲ್ಲದವರಿಗೂ ಕಾಲಾವಕಾಶ ನೀಡಿ ಖಾಯಂ ಮಾಡುವುದು. ( ಶಂಕರ್ ರಾವ್ ರವರು ಖಾಯಂ ಗೊಳಿಸಿದಂತೆ ಅಥವಾ ಜೆ.ಇ.ಒ ದಲ್ಲಿ ಮಾಡಿದಂತೆ) ಅಸಾಧ್ಯ ವಾದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನುಭವದಿಂದಲೇ ಪ್ರೌಢಿಮೆ ಹಾಗೂ ಶಿಕ್ಷಣದ ಮಟ್ಟ ಹೆಚ್ಚುವುದರಿಂದ ಅನುಭವವನ್ನು ಮುಖ್ಯವಾಗಿಸಿಕೊಂಡು ಪ್ರತೀ ವರ್ಷಕ್ಕೆ 5 ಅಂಕವನ್ನು ನೀಡಿ ಗರಿಷ್ಠ 15ವರ್ಷಗಳ ವರೆಗೆ ಅನುವು ಮಾಡಿಕೊಟ್ಟು ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಕ್ಕೆ ಸಹಕರಿಸಬೇಕು. ಹೆಚ್ಚು ವಿದ್ಯಾರ್ಥಿಗಳು ಇರುವ ಮಾರಿಕಾಂಬಾ ಕಾಲೇಜ್ ನಲ್ಲಿ ಕಾರ್ಯಭಾರವೂ ಹೆಚ್ಚಿರುತ್ತದೆ. ಆ ಕಾರಣಕ್ಕಾಗಿ ಬೇರೆ ಕಾಲೇಜಿಗೆ ಹೋಲಿಸದೇ ನಮ್ಮ ವೇತನವನ್ನು ಹೆಚ್ಚಿಸ ಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರುಗಳಾದ ಭವ್ಯಾ ಹಳೆಯೂರು ಸುಪ್ರೀಯಾ ಭಟ್, ದಿವ್ಯಾ ಶೇಟ್, ಆರತಿ ಭಟ್ಟ, ಕಾಂತಿ ಹೆಗಡೆ, ಮುಕಾಂಬೆ ನಾಯ್ಕ್, ಭಾರತಿ ನಾಯ್ಕ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.