ಸೊರಗಿದ ಲಿಂಗನಮಕ್ಕಿ ನೀರ ಮಟ್ಟ; ಸದ್ಯದಲ್ಲೇ ಓಡಾಟ ನಿಲ್ಲಿಸಲಿದೆ ಹಸಿರುಮಕ್ಕಿ ಲಾಂಚ್
Team Udayavani, Jun 3, 2023, 8:04 PM IST
ಸಾಗರ: ತಾಲೂಕಿನ ಲಿಂಗನಮಕ್ಕಿ ಆಣೆಕಟ್ಟೆಯ ಶರಾವತಿ ಹಿನ್ನೀರ ಪ್ರಾಂತ್ಯದಲ್ಲಿ ನೀರು ಕಡಿಮೆಯಾಗಿದ್ದು, ಮುಳುಗಡೆಯಾಗಿರುವ ಜಾಗದಲ್ಲಿ ಹಳೆ ಮರದ ತುಂಡುಗಳು ಮತ್ತು ಕೆಸರು ಲಾಂಚಿನ ಬುಡಕ್ಕೆ ತಗುಲುತ್ತಿರುವ ಹಿನ್ನೆಲೆಯಲ್ಲಿ ಹಸಿರುಮಕ್ಕಿ ಭಾಗದಲ್ಲಿ ಲಾಂಚಿನ ಓಡಾಟವನ್ನು ನಿಲ್ಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇಲ್ಲೀವರೆಗೂ ದಿನಕ್ಕೆ 5 ರಿಂದ 7 ಬಾರಿ ದಡಗಳ ನಡುವೆ ತಿರುಗಾಟ ನಡೆಸುತ್ತಿದ್ದ ಲಾಂಚ್ ಶನಿವಾರ ಕೇವಲ 2-3 ಟ್ರಿಪ್ ಓಡಾಡಿದೆ. ಜತೆಯಲ್ಲಿ ಭಾರದ ವಾಹನಗಳನ್ನು ಹಾಕಲು ಲಾಂಚಿನ ಸಿಬ್ಬಂದಿ ಮುಂದಾಗುತ್ತಿಲ್ಲ. ಹೀಗಾಗಿ ಶನಿವಾರದಿಂದ ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರ ದಾಟಿಸಲಾಗುತ್ತಿದೆ. ಆದ್ದರಿಂದ ಹಸಿರುಮಕ್ಕಿ ಮಾರ್ಗದಿಂದ ನಿಟ್ಟೂರು, ಕೊಲ್ಲೂರಿಗೆ ಪ್ರಯಾಣಿಸುವವರು ಹೊಸನಗರ, ನಗರ ಮಾರ್ಗವಾಗಿಯೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತಾಡಿದ ಒಳನಾಡು ಸಾರಿಗೆ ಅಧಿಕಾರಿಗಳು ಭಾನುವಾರ ಹಸಿರುಮಕ್ಕಿಗೆ ತೆರಳಿ, ಸ್ಥಳ ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಂಚಿನ ಓಡಾಟ ನಿಲ್ಲಿಸಬೇಕಾದ ಅನಿವಾರ‍್ಯತೆ ಇದೆ ಎಂದಿದ್ದಾರೆ.
ಇದನ್ನೂ ಓದಿ: Gangavati ಬಿಸಿಯೂಟ ಅಕ್ಕಿ ಪೂರೈಕೆ ; ಗೋಧಿ ಗೋಡೌನ್‌ನಲ್ಲೇ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.