ಕುಮಟಾ: ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು… ಗ್ರಾಮಸ್ಥರ ಸ್ಥಳಾಂತರ
Team Udayavani, Jul 5, 2023, 7:06 PM IST
ಕುಮಟಾ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಾಲೂಕಿನ ಹಲವೆಡೆಗಳಲ್ಲಿ ನೀರು ತುಂಬಿದ್ದು,ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೂ ನೀರು ನುಗ್ಗಿ ಖಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ಬಂದೊದಗಿದೆ.
ನಿರಂತರವಾಗಿ ಸುರಿದ ಮಳೆಗೆ ತಾಲೂಕಿನ ಬರ್ಗಿ ಹಾಗೂ ಹಂದಿಗೋಣ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಹೊಳೆಗದ್ದೆಯ ರಾಮನಗಿಂಡಿಯಲ್ಲಿ ಗುಡ್ಡ ಕುಸಿದಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಹಿರೇಗುತ್ತಿಯಲ್ಲಿ ನಾಗಮ್ಮ ಹಳ್ಳೇರ್ ಎನ್ನುವವರ ಮನೆಯ ಗೋಡೆ ಕುಸಿದಿದೆ. ಬರ್ಗಿಯಲ್ಲಿ ಎರಡು ಮನೆಗಳಿಗೆ ನೀರು ನುಗ್ಗಿದ್ದು, ಹಂದಿಗೋಣ ಭಾಗದಲ್ಲಿ ಒಟ್ಟೂ 8 ಮನೆಗಳಿಗೆ ನೀರು ನುಗ್ಗಿದ್ದು, ಓರ್ವರ ಮನೆ ಭಾಗಶಃ ಮುಳುಗಡೆಯಾಗಿದೆ. ಹೀಗಾಗಿ ಓರ್ವರ ಕುಂಟುಂಬದ 6 ಮಂದಿ ಸದಸ್ಯರು ಹಂದಿಗೋಣ ಶಾಲೆಯಲ್ಲಿ ತೆರೆದ ಖಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಮುಂಜಾನೆ ನೀರು ಮನೆಗಳಿಗೆ ನುಗ್ಗುತ್ತಿದ್ದಂತೆ, ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಅಣ್ಣಯ್ಯ ಲಂಬಾಣಿ ಭೇಟಿ ನೀಡಿ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದರು. ಬಳಿಕ ತಹಶಿಲ್ದಾರ್ ಎಸ್.ಎಸ್ ನಾಯ್ಕಲ್ಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಸಂತ್ರಸ್ತ ಗ್ರಾಮಸ್ಥರಾದ ನವೀನ್ ಪಟಗಾರ,ನಾಗೇಶ ಮುಕ್ರಿ, ವಿಷ್ಣು ಪಟಗಾರ ಮಾತನಾಡಿ ಹಿಂದೆ ಹಂದಿಗೋಣ ಭಾಗದಲ್ಲಿ ನೆರೆಯ ಪ್ರಮಾಣ ಅಷ್ಟಾಗಿ ಇದ್ದಿರಲಿಲ್ಲ.ಇಲ್ಲಿ ಬಿದ್ದ ಮಳೆಯ ನೀರು ಸರಾಗವಾಗಿ ಹರಿದು, ನದಿಗಳನ್ನು ಸೇರಿಕೊಳ್ಳುತ್ತಿತ್ತು.ಆದರೆ ಇಲ್ಲಿನ ಖಾಸಗಿ ಜಮೀನುಗಳನ್ನು ಖರೀದಿಸಿದವರು ನೀರು ಹಾದು ಹೋಗುವ ಮಾರ್ಗಗಳನ್ನು ಮುಚ್ಚಿ ಮಣ್ಣು ತುಂಬಿದ್ದರ ಪರಿಣಾಮ ಮೊದಲ ಮಳೆಯಲ್ಲಿಯೇ ನೆರೆಯ ಪರಿಸ್ಥಿತಿ ಅನುಭವಿಸುವಂತಾಗಿದೆ. ಈ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮಸ್ಥರೆಲ್ಲ ಸೇರಿ ಮನವಿ ನೀಡಿ, ನೀರು ಹೋಗುವ ದಾರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದರು. ಆದರೆ ಜನರ ಮನವಿಗೆ ಸ್ಪಂದಿಸದ ಕಾರಣ ಈಗ ಸಮಸ್ಯೆ ಎದುರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಧಾರಾಕಾರ ಮಳೆ ಪ್ರವಾಹ ಭೀತಿ ಎದುರಿಸಲು ಜಿಲ್ಲಾಡಳಿತದ ಸೂಚನೆಯಂತೆ ತಾಲೂಕಾಡಳಿತದಿಂದ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು ತಾಲೂಕಿನ ಎಲ್ಲಾ ಭಾಗಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲಾಗಿದ್ದು, ಸಾರ್ವಜನಿಕರು ಅಪಾಯದ ಮುನ್ಸೂಚನೆಯಲ್ಲಿ ಕಂಟ್ರೋಲ್ ರೂಮ್ ಸಂಖ್ಯೆ 08386-222054 ಗೆ ಕರೆಮಾಡಿ ತಿಳಿಸಬಹುದಾಗಿದೆ.
– ಎಸ್.ಎಸ್ ನಾಯ್ಕಲ್ಮಠ. ತಹಸಿಲ್ದಾರ್, ಕುಮಟಾ.
ಇದನ್ನೂ ಓದಿ: ಭಾರೀ ಮಳೆ ನಡುವೆ ನೋಡನೋಡುತ್ತಿದ್ದಂತೇ ಕುಸಿದು ಬಿದ್ದ ರಸ್ತೆ.. ಕಾರು ಚಾಲಕ ಪವಾಡಸದೃಶ ಪಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Raichur: ಕಾಂಗ್ರೆಸ್ ಸರ್ಕಾರ ಬಂದಿರುವುದೇ ಅಲ್ಲಾಹುವಿನ ಕೃಪೆಯಿಂದ… ಚಕ್ರವರ್ತಿ ಸೂಲಿಬೆಲೆ
MUDA Case: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದ ರಾಜಕೀಯ ಪಿತೂರಿ: ಡಿಕೆಶಿ
Hubballi: ED ಬಿಜೆಪಿಯ ಅಂಗ ಸಂಸ್ಥೆಯೇ…? ಸಚಿವ ಎಚ್.ಕೆ.ಪಾಟೀಲ್ ಗರಂ
Republic Day Parade: ಗಣರಾಜ್ಯೋತ್ಸವ ಪರೇಡ್ ಗೆ ಚಾಮರಾಜನಗರದ ಕೃಷಿಕ ದಂಪತಿ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.