ಶಿರಸಿ, ಸಿದ್ದಾಪುರದಲ್ಲಿಅತೀಹೆಚ್ಚುಮಳೆ
ಗುಂಡಬಾಳ ನದಿ ತೀರದಲ್ಲಿ ಪ್ರವಾಹ ಭೀತಿತುಂಬಿ ಹರಿಯುತ್ತಿವೆ ಹಳ್ಳಕೊಳ್ಳಕೆಲವೆಡೆ ಹಾನಿ
Team Udayavani, Jun 18, 2021, 7:26 PM IST
ಕಾರವಾರ: ಜಿಲ್ಲೆಯಲ್ಲಿ ಗುರುವಾರ ಮಳೆ ಇಳಿಮುಖವಾಗಿದೆ. ಆಗಾಗ ಮಳೆ ಬಿದ್ದಿದ್ದು, ಅಬ್ಬರ ಕಡಿಮೆಯಾಗಿದೆ. ಬುಧುವಾರ ಶಿರಸಿ, ಸಿದ್ದಾಪುರದಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ. ಗುರುವಾರ ಕರಾವಳಿಯಲ್ಲಿ ಮಳೆಯ ಅಬ್ಬರ ತಗ್ಗಿದ್ದು, ಕೃಷಿ ಚಟುವಟಿಕೆಗೆ ಮಳೆ ಬಿಡುವು ನೀಡಿದಂತಾಗಿದೆ. ಮಳೆಯಿಂದಾಗಿ ನದಿಗಳಿಗೆ ಜೀವಕಳೆ ಬಂದಿದೆ.
ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಗುರುವಾರ ಬೆಳಗ್ಗೆ 8ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಇಂತಿದೆ. ಅಂಕೋಲಾದಲ್ಲಿ 41.8 ಮಿ.ಮೀ, ಭಟ್ಕಳ 27.0, ಹಳಿಯಾಳ 31.4, ಹೊನ್ನಾವರ 40.6, ಕಾರವಾರ 30.8 , ಕುಮಟಾ 28.2, ಮುಂಡಗೋಡ 81.8, ಸಿದ್ದಾಪುರ 125.2. ಶಿರಸಿ 95.5, ಜೋಯಿಡಾ 78.6, ಯಲ್ಲಾಪುರ 58.6 ಮಿ.ಮೀ. ಮಳೆಯಾಗಿದೆ.
ಮುಂಡಗೋಡ: ತಾಲೂಕಿನದ್ಯಂತ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಪಟ್ಟಣದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ ಹಾಗೂ ದನದ ಕೊಟ್ಟಿಗೆಗಳಿಗೆ ಹಾನಿಯಾಗಿದೆ. ತಾಲೂಕಿನಲ್ಲಿ ಎಡ್ಮೂರು ದಿನದಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆಗಳಿಗೆ ಹಾನಿ ಸಂಭವಿಸಿ ಜನ ಜೀವನ ಅಸ್ತವ್ಯಸ್ತಗೊಂಡಿದೆ
. ಚವಡಳ್ಳಿ ಗ್ರಾ.ಪಂ ವ್ಯಾಪ್ತಿಯ ಮಲವಳ್ಳಿ ಗ್ರಾಮದ ರತ್ನವ್ವಾ ವಡ್ಡರ ಎಂಬುವರ ಮನೆ ಬಿದ್ದಿದೆ. ಪಟ್ಟಣದ ಗಾಂಧಿನಗರದ ಲಲಿತಾ ರಾಮು ಕೊರವರ ಎಂಬುವರ, ಗಣೇಶಪುರ ಗ್ರಾಮದ ಜಯಶೀಲಾ ವಡ್ಡರ ಹಾಗೂ ಲಕ್ಕೊಳಿ ಗ್ರಾಮದಲ್ಲಿ ಸುರೇಶ ವಡ್ಡರ ಎಂಬುವರ ಮನೆಯ ಗೋಡೆಗಳು ಕುಸಿದು ಬಿದ್ದು ಹಾನಿಯಾಗಿದ್ದರೆ, ಇದೇ ಗ್ರಾಮದ ಪರಶುರಾಮ ಅಗಸರ ಎಂಬುವರ ದನದ ಕೊಟ್ಟಿಗೆ ಬಿದ್ದು ಹಾನಿಯಾಗಿದೆ. ಗುರುವಾರ ಸ್ಥಳಕ್ಕೆ ಗ್ರಾಮ ಲೆಕ್ಕಾ ಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲ ಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.